20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!
ರಾಯಲ್ ಎನ್‌ಫೀಲ್ಡ್, ಜಾವಾ ಬೈಕ್‌ಗೆ ಪ್ರತಿಸ್ಪರ್ಧಿಯಾಗಿ 350 ಸಿಸಿ ಬೈಕ್ ಬಿಡುಗಡೆ ಮಾಡಿದ ಹೊಂಡಾಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಧುನಿಕ ತಂತ್ರಜ್ಞಾನ, ಹಲವು ಫೀಚರ್ಸ್ ಹೊಂದಿರು ಹೊಂಡಾ H’ness- CB350 ಬೈಕ್ ಕೇವಲ 20 ದಿನದಲ್ಲಿ ಹೊಸ ದಾಖಲೆ ಬರೆದಿದೆ.
ಗುರುಗ್ರಾಂ(ನ.13): ಹೊಂಡಾ ಮೋಟಾರ್‌ಸೈಕಲ್ ಇತ್ತೀಚೆಗೆ ಬಿಡುಗಡೆ ಮಾಡಿದ ಹೊಂಡಾ H’ness- CB350 ಬೈಕ್ ಇದೀಗ ದಾಖಲೆ ಬರೆದಿದೆ. ಕೇವಲ 20 ದಿನದಲ್ಲಿ 1,000 ಗ್ರಾಹಕರಿಗೆ ಹೊಂಜಡಾ H’ness- CB350 ಬೈಕ್ ವಿತರಿಸಲಾಗಿದೆ. ಈ ಮೂಲಕ ಅತ್ಯಲ್ಪ ಅವಧಿಯಲ್ಲಿ ಸಾವಿರ ಗಡಿ ದಾಟಿದ ಬೈಕ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.
ಹೋಂಡಾ ಹೈನೆಸ್ ಖರೀದಿಸಿ 43,000 ರೂಪಾಯಿವರೆಗೂ ಉಳಿಸಿ!
ಅತ್ಯಲ್ಪ ಅವಧಿಯಲ್ಲಿ H’ness- CB350 ಬಗ್ಗೆ ಹೆಚ್ಚಿದ ತಿಳಿವಳಿಕೆ, ವ್ಯಕ್ತವಾದ ಮೆಚ್ಚುಗೆ ಮತ್ತು ಬೇಡಿಕೆಯು ನಗರ ಹಾಗೂ ಹಳ್ಳಿಗೂ ವ್ಯಾಪಿಸಿದೆ . ಮಧ್ಯಮ ಗಾತ್ರದ 350 ರಿಂದ 500 ಸಿಸಿ ಸಾಮಥ್ರ್ಯದ ಮೋಟರ್ ಸೈಕಲ್ ವಲಯದಲ್ಲಿ ಹೋಂಡಾ 2 ವ್ಹೀಲರ್, ಸೆಪ್ಟೆಂಬರ್ ತಿಂಗಳಲ್ಲಿ ತನ್ನ ಹೊಸ ಬ್ರ್ಯಾಂಡ್ H’ness- CB350 350 ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿತ್ತು.
ಹೋಂಡಾದ ಸಿಬಿ ಡಿಎನ್‍ಎದ ಶ್ರೀಮಂತ ಪರಂಪರೆಯನ್ನು ಹೆಮ್ಮೆಯಿಂದ ಮುಂದುವರೆಸಿಕೊಂಡು ಹೋಗುತ್ತಿರುವ H’ness- CB350, 9 ಹೊಸ ಪೇಟೆಂಟ್ ಅಪ್ಲಿಕೇಷನ್ಸ್ ಮತ್ತು ಈ ವಲಯದಲ್ಲಿನ 5 ಹೊಸ ಸೌಲಭ್ಯಗಳನ್ನು ಒಳಗೊಂಡು, ರಸ್ತೆ ಮೇಲಿನ ಸವಾರಿ ಅನುಭವವನ್ನು ಹೊಸ ಎತ್ತರಕ್ಕೆ ತೆಗೆದುಕೊಂಡು ಹೋಗಿದೆ. H’ness- CB350 – ಇದು ಎರಡು ಮಾದರಿಗಳಾದ ಡಿಎಲ್‍ಎಕ್ಸ್ ಮತ್ತು ಡಿಎಲ್‍ಎಕ್ಸ್ ಪ್ರೊನಲ್ಲಿ ಲಭ್ಯ ಇದೆ. ಪ್ರತಿಯೊಂದು ಮಾದರಿಯು 3 ಬಗೆಯ ಬಣ್ಣಗಳನ್ನು ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಪ್ರತಿಸ್ಪರ್ಧಿ ಹೊಂಡಾ H'Ness CB 350 ಬೈಕ್ ಬಿಡುಗಡೆ
H’ness- CB350 ಬೈಕ್ ಮೇಲೆ ಗ್ರಾಹಕರು ತೋರುತ್ತಿರುವ ಪ್ರೀತಿ ಮತ್ತು ವಿಶ್ವಾಸ ನಮ್ಮ ನಿರೀಕ್ಷೆ ಮೀರಿದೆ.. 18 ವರ್ಷಗಳಿಂದ ಹಿಡಿದು 70 ವರ್ಷದವರೆಗಿನವರು ಸೇರಿದಂತೆ ವಿವಿಧ ವಯೋಮಾನದ ಗ್ರಾಹಕರು H’ness- CB350 ಅನ್ನು ತಮ್ಮ ಖರೀದಿಯ ಮೊದಲ ಆಯ್ಕೆಯನ್ನಾಗಿ ಮಾಡಿಕೊಂಡಿದ್ದಾರೆ. ನಮ್ಮ ಸೀಮಿತ ಸಂಖ್ಯೆಯ ಬಿಗ್‍ವಿಂಗ್ ಜಾಲದ ಹೊರತಾಗಿಯೂ ನಾವು ಈ ಅತ್ಯಲ್ಪ ಅವಧಿಯಲ್ಲಿ 1,000 ಗ್ರಾಹಕರಿಗೆ H’ness- CB350 ವಿತರಿಸಿದ ಹೊಸ ಮೈಲುಗಲ್ಲು ಸಾಧಿಸಿದ್ದೇವೆ. ಈ ಆರಂಭಿಕ ಪ್ರತಿಕ್ರಿಯೆಯಿಂದ ತುಂಬ ಪ್ರಭಾವಿತರಾಗಿರುವ ನಾವು, ಹೋಂಡಾ ಬಿಗ್‍ವಿಂಗ್ ಜಾಲ ವಿಸ್ತರಿಸುವ ನಮ್ಮ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲಿದ್ದೇವೆ ಎಂದು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.
ಹಬ್ಬದ ಖರೀದಿ ಸಂಭ್ರಮ ಹೆಚ್ಚಿಸಲು ಹೋಂಡಾ 2ವ್ಹೀಲರ್ಸ್ ಇಂಡಿಯಾ, ತನ್ನ ಪಾಲುದಾರ ಐಸಿಐಸಿಐ ಬ್ಯಾಂಕ್‍ನ ಸಹಯೋಗದಲ್ಲಿ ಇದುವರೆಗಿನ ಅತಿದೊಡ್ಡ ಹಬ್ಬದ ಸಂಭ್ರಮ ಪರಿಚಯಿಸಿದೆ. H’ness- CB350 ಖರೀದಿಸಲು ಬಯಸುವ ಗ್ರಾಹಕರು ಈಗ ಅತ್ಯಂತ ಸುಲಭ ಬಗೆಯ ರಿಟೇಲ್ ಸಾಲ ಸೌಲಭ್ಯ ಪಡೆದುಕೊಳ್ಳಲಿದ್ದಾರೆ.
ಸೀಮಿತ ಅವಧಿಗೆ ಲಭ್ಯ ಇರುವ ಈ ಸೌಲಭ್ಯದಡಿ, ಗ್ರಾಹಕರು ಈಗ ಆನ್‍ರೋಡ್ ಬೆಲೆಯ ಶೇ 100ರಷ್ಟು ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ನಿಮ್ಮ ಮೆಚ್ಚಿನ H’ness- CB350 ಖರೀದಿಸಲು ವಾಹನ ಖರೀದಿ ಸಾಲ ಸೌಲಭ್ಯದ ವಿಭಾಗದಲ್ಲಿ ಅತ್ಯುತ್ತಮ ಬಗೆಯ ಬಡ್ಡಿ ದರವಾಗಿರುವ ಶೇ 5.6* ರಂತೆ ಸಾಲ ದೊರೆಯಲಿದೆ. ಇದು ಗ್ರಾಹಕರ ಪಾಲಿನ ಅತಿದೊಡ್ಡ ಉತ್ತೇಜನ ಆಗಿರಲಿದೆ. ಈ ಬಡ್ಡಿ ದರವು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಇರುವ ಬಡ್ಡಿ ದರಕ್ಕಿಂತ ಅರ್ಧದಷ್ಟು ಕಡಿಮೆ ಇರಲಿದೆ. ಗ್ರಾಹಕರು ಇದಕ್ಕೆ ಪರ್ಯಾಯವಾಗಿ ರೂ 4,999ರ ಸಮಾನ ಮಾಸಿಕ ಕಂತು (ಇಎಂಐ) ಪಾವತಿಸುವ ಆಕರ್ಷಕ ಆಯ್ಕೆಯನ್ನೂ ಬಳಸಿಕೊಳ್ಳಬಹುದು.
ಇನ್ನು ಮುಂದೆ ಗ್ರಾಹಕರು ಬಿಗ್‍ವಿಂಗ್ ಅಂತರ್ಜಾಲ ತಾಣದಲ್ಲೂ H’ness- CB350 ಬುಕಿಂಗ್ ಮಾಡಬಹುದು.