ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್ ಬಿಡುಗಡೆ

ಪ್ಲೀಸರ್ ಪ್ಲಸ್ ಪ್ಲಾಟಿನಮ್ ಎಡಿಷನ್ ಸ್ಕೂಟರ್‌ಗೆ ದೊರೆತ ಅದ್ಭುತ ಪ್ರತ್ರಿಕ್ರಿಯೆಯಿಂದ ಉತ್ತೇಜಿತವಾಗಿರುವ ಹೀರೋ ಮೋಟೋಕಾರ್ಪ್ ಇದೀಗ ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಸ್ಕೂಟರ್‌ನ ವಿನ್ಯಾಸವು ಗಮನ ಸೆಳೆಯುತ್ತಿದ್ದು, ಇಂಧನ ದಕ್ಷತೆ ತಂತ್ರಜ್ಞಾನದ ಎಂಜಿನ್ ಅನ್ನು ಬಳಸಲಾಗಿದೆ.

Hero MotoCorp launched its new Destini 125 Platinum edition scooter

ದೇಶದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಹೀರೋ ಮೋಟೋ ಕಾರ್ಪ್ ಮತ್ತೊಂದು ಸ್ಕೂಟರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಆದರೆ, ಹೊಸ ಸ್ಕೂಟರ್ ಅಲ್ಲ. ಬದಲಿಗೆ ಈಗಾಗಲೇ ಬಿಡುಗಡೆಯಾಗಿ ಗ್ರಾಹಕರನ್ನು ತನ್ನತ್ತ ಸೆಳೆಯಲು ಯಶಸ್ವಿಯಾಗಿರುವ ಡೆಸ್ಟಿನಿ 125 ಸ್ಕೂಟರ್‌ನ ಪ್ಲಾಟಿನಮ್ ಎಡಿಷನ್ ಸ್ಕೂಟರ್ ಲಾಂಚ್ ಮಾಡಲಾಗಿದೆ.

ಈ ಡೆಸ್ಟಿನಿ 125  ಪ್ಲಾಟಿನಮ್ ಎಡಿಷನ್ ಸ್ಕೂಟರ್, ಹೀರೋ ಮೋಟೋ ಕಾರ್ಪ್‌ನ ಮೆಸ್ಟ್ರೋ ಎಡ್ಜ್ 125 ಸ್ಟೀಲ್ತ್, ಪ್ಲೀಸರ್ ಪ್ಲಸ್ ಪ್ಲಾಟಿನಮ್‌ ಮಾಡೆಲ್‌ ಸ್ಕೂಟರ್‌ ರೀತಿಯಲ್ಲಿದೆ. ಈ ಹೊಸ ಎಡಿಷನ್ ಸ್ಕೂಟರ್ ಬೆಲೆ 72,050 ರೂಪಾಯಿ(ಎಕ್ಸ್ ಶೋರೂಮ್) ಆಗಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದರೆ 1 ಲಕ್ಷ ರೂಪಾಯಿ ಸಬ್ಸಿಡಿ!

ಹೀರೋ ಮೋಟೋ ಕಾರ್ಪ್ ಈಗಾಗಲೇ ಡೆಸ್ಟಿನಿ 125 ಸ್ಕೂಟರ್‌  ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹಾಗಿಯೇ ಸ್ಕೂಟರ್‌ಗೆ ಗ್ರಾಹಕರಿಂದಲೂ ಹೆಚ್ಚು ಉತ್ತೇಜನ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಈ ಸ್ಕೂಟರ್ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದೆ.

ಹೀರೋ ಮೋಟೋಕಾರ್ಪ್ ಬಿಡುಗಡೆ ಮಾಡಿರುವ ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್‌ಗೆ ನ್ಯೂ ಮ್ಯಾಟ್ ಬ್ಲಾಕ್ ಬಣ್ಣ ಬಳಿಯಲಾಗಿದೆ. ಇನ್ನರ್ ಪ್ಯಾನೆಲ್‌ಗಳಿಗೆ ಕಂದು ಬಣ್ಣವಿದ್ದರೆ, ಬಳಿ ಬಣ್ಣದ ರಿಮ್‌ಗಳನ್ನು ಅಳವಡಿಸಲಾಗಿದೆ.

ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್ ಬಿಡುಗಡೆಯು ಕಂಪನಿಯ ದ್ವಿಚಕ್ರವಾಹನಗಳ ಉತ್ಪಾದನೆಯ ವೈವಿಧ್ಯತೆಯನ್ನು ಹೆಚ್ಚಿಸಿದೆ ಎಂದು ಹೀರೋ ಮೋಟೋಕಾರ್ಪ್ ಹೇಳಿಕೊಂಡಿದೆ.

ಶೀಟ್ ಮೆಟಲ್ ಬಾಡಿ, ಪ್ರೀಮಿಂಯ ಬ್ಯಾಡ್ಜಿಂಗ್ ಮತ್ತು ವಿಶಿಷ್ಟವಾದ ಎಲ್ಇಡಿ ಗೈಡ್ ಲ್ಯಾಂಪ್‌ ಫೀಚರ್‌ಗಳು ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್‌ನ ಅಂದವನ್ನು ಹೆಚ್ಚಿಸಿವೆ ಎನ್ನುತ್ತಾರೆ ವಿಶ್ಲೇಷಕರು. ಕಪ್ಪು ಮತ್ತು ಕ್ರೋಮ್ ಥೀಮ್‌ನ ವಿನ್ಯಾಸವು ಗಮನ ಸೆಳೆಯುವಂತಿದೆ. ಕ್ರೋಮ್ ಹ್ಯಾಂಡಲ್ ಬಾರ್, ಕ್ರೋಮ್ ಫಿನಿಶ್ಡ್ ಕನ್ನಡಿಗಳು ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್‌ಗೆ ರೆಟ್ರೋ ಶೈಲಿಯ ಲುಕ್ ಅನ್ನು ನೀಡುತ್ತಿವೆ. ಇದರೊಂದಿಗೆ ಸ್ಕೂಟರ್‌ ನಿಮಗೆ ಪ್ರೀಮಿಯಂ ಲುಕ್‌ನಲ್ಲಿ ಗೋಚರವಾಗುತ್ತದೆ.

ರೆಟ್ರೋ ಶೈಲಿ ಅಂದದ ಜೊತೆಗೆ ಸ್ಕೂಟರ್‌ನಲ್ಲಿ ಕಂಡುಬರುವ ಕ್ರೋಮ್‌ನಿಂದ ಅಲಂಕೃತಗೊಂಡಿರುವ ಮಫ್ಲರ್ ಪ್ರೊಟೆಕ್ಟರ್ ಮತ್ತು ಫೆಂಡರ್ ಸ್ಟ್ರೈಪ್ ಇಡೀ ಸ್ಕೂಟರ್‌ ಶೈಲಿಯನ್ನು ಹೆಚ್ಚಿಸಿವೆ. ಇಷ್ಟು ಮಾತ್ರವಲ್ಲದೇ ಈ ಸ್ಕೂಟರ್‌ಗೆ ಪ್ರೀಮಿಯಂ ಲುಕ್ ಒದಗಿಸುವ, ಪ್ಲಾಟಿನಮ್ ಬ್ಯಾಡ್ಜ್‌ನೊಂದಿಗೆ 3ಡಿ ಲೋಗೊ ಒದಗಿಸಲಾಗುತ್ತಿದೆ. ಪ್ಲ್ಯಾಟಿನಮ್ ಹಾಟ್ ಸ್ಟ್ಯಾಂಪಿಂಗ್‌ನೊಂದಿಗೆ ಬಣ್ಣದ ಆಸನವನ್ನು ಒದಗಿಸಲಾಗಿದೆ.

ಬಜಾಜ್‍ನ ಹೊಸ ಪ್ಲಾಟಿನಾ 110 ಎಬಿಎಸ್ ದ್ವಿಚಕ್ರವಾಹನ ಬಿಡುಗಡೆ

ಈ ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಸ್ಕೂಟರ್‌ಗೆ ಒದಗಿಸಲಾಗಿರುವ ಎಲ್ಲ ಫೀಚರ್‌ಗಳು ಅತ್ಯುತ್ತಮವಾಗಿವೆ. ಡಿಜಿಟಲ್ ಅನ್‌ಲಾಗ್ ಸ್ಪೀಡೋ ಮೀಟರ್, ಸೈಡ್ ಸ್ಯಾಂಡ್ ಇಂಡಿಕೇಟರ್, ಸ್ಕೂಟರ್‌ನ ಬಾಕಿ ಇರುವ ಸರ್ವೀಸ್ ಎಚ್ಚರಿಸುವ ರಿಮೈಂಡರ್‌ಗಳು ಸೇರಿದಂತೆ ಹಲವು ಫೀಚರ್‌ಗಳು ತಾಂತ್ರಿಕ ಶ್ರೀಮಂತಿಕೆಯನ್ನು ಹೆಚ್ಚಿಸಿವೆ.

ಈ ಸ್ಕೂಟರ್‌ನಲ್ಲಿ 125 ಸಿಸಿ ಬಿಎಸ್-6 ಪ್ರೋಗ್ರಾಮ್ಡ್ ಇಂಜೆಕ್ಷನ್ ಎಂಜಿನ್ ಅಳವಡಿಸಲಾಗಿದೆ. ಈ  ಎಂಜಿನ್ ಎಕ್ಸ್‌ಸೆನ್ಸ್ ತಂತ್ರಜ್ಞಾನದೊಂದಿಗೆ ಬರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. 7,000 ಆರ್‌ಪಿಎಂನಲ್ಲಿ ಸ್ಕೂಟರ್ ಗರಿಷ್ಠ 9  ಬಿಎಚ್‌ಪಿ ಪವರ್ ಉತ್ಪಾದಿಸಬಲ್ಲದು. ಹಾಗೆಯೇ 5,500 ಆರ್‌ಪಿಎಂನಲ್ಲಿ ಸ್ಕೂಟರ್ ಗರಿಷ್ಠ 10.4 ಎನ್‌ ಟಾರ್ಕ್ ಉತ್ಪಾದಿಸುತ್ತದೆ. ಇಂಧನ ದಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಕೂಟರ್‌ಗೆ ಹೀರೋ ಕಂಪನಿಯ ಐ3ಎಸ್(ಇಡ್ಲ್-ಸ್ಟಾರ್ಟ್- ಸ್ಟಾಪ್ ಸಿಸ್ಟಮ್) ತಂತ್ರಜ್ಞಾನ ಎಂಜಿನ್‌ಗೆ ಅನ್ವಯಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಕಂಪನಿಯ 125 ಸಿಸಿ ಸೆಗ್ಮೆಂಟ್‌ನಲ್ಲಿ ಡೆಸ್ಟಿನಿ 125 ಸ್ಕೂಟರ್ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ಈ ಸ್ಕೂಟರ್ ಲಾಂಜ್ ಆದಾಗಿನಿದಂಲೂ ಗ್ರಾಹಕರಿಂದ ಮೆಚ್ಚುಗೆಯನ್ನು ಪಡೆದುಕೊಳ್ಳುತ್ತಿದೆ. ಈಗ ಹೊಸ ಪ್ಲಾಟಿನಮ್ ಎಡಿಷನ್‌ ಮೂಲಕ ಡೆಸ್ಟಿನಿ ವಿಭಾಗಕ್ಕೆ ಹೊಸದನ್ನು ಸೇರ್ಪಡೆ ಮಾಡುತ್ತಿದ್ದೇವೆ. ಪ್ಲೀಸರ್ ಪ್ಲಸ್ ಪ್ಲಾಟಿನಮ್ ಎಡಿಷನ್‌ನಿಂದ ದೊರಕುತ್ತಿರುವ ಅತ್ಯುತ್ತಮ ಪ್ರತಿಕ್ರಿಯೆಗಳಿಂದ ಉತ್ತೇಜಿತರಾಗಿರುವ ನಾವು, ಡೆಸ್ಟಿನಿ 125 ಪ್ಲಾಟಿನಮ್ ಎಡಿಷನ್ ಕೂಡ ಯಶಸ್ವಿಯಾಗಬಲ್ಲದು ಎಂಬ ವಿಶ್ವಾಸವನ್ನು ನಾವು ಹೊಂದಿದ್ದೇವೆ ಎಂದು ಹೀರೋ ಮೋಟೋಕಾರ್ಪ್ ಸ್ಟ್ರಾಟರ್ಜಿ ಮತ್ತು ಗ್ಲೋಬಲ್ ಪ್ರಾಡಕ್ಟ್ ಪ್ಲಾನಿಂಗ್ ಮುಖ್ಯಸ್ಥ ಮಾಲೋ ಲೇ ಮಸ್ಸಾನ್ ತಿಳಿಸಿದ್ದಾರೆಂದು ಹಲವು ಸುದ್ದಿತಾಣಗಳು ವರದಿ ಮಾಡಿವೆ.

2021 ಕವಾಸಕಿ ನಿಂಜಾ ಜೆಡ್ಎಕ್ಸ್ 10 ಆರ್ ಬಿಡುಗಡೆ, ಬೆಲೆ ಬಗ್ಗೆ ಒಂದಿಷ್ಟು

Latest Videos
Follow Us:
Download App:
  • android
  • ios