ನವದೆಹಲಿ(ಮಾ.05): ಹೀರೋ ಮೊಟೊಕಾರ್ಪ್ ಜನವರಿ 21, 2021 ರಂದು 100 ಮಿಲಿಯನ್ ಉತ್ಪಾದನೆಯನ್ನು ದಾಟಿದ ಅಪರೂಪದ ಮೈಲಿಗಲ್ಲನ್ನು ಸಾಧಿಸಿತು. ಈ ಸಾಧನೆಯ ಆಚರಣೆಯನ್ನು ಮುಂದುವರೆಸುತ್ತಾ, ಕಂಪನಿಯು ತನ್ನ ಲಕ್ಷಾಂತರ ಗ್ರಾಹಕರಿಗೆ ವಿಶೇಷ ವಿನಿಮಯ ಮತ್ತು ಸೇವಾ ಪ್ರಯೋಜನಗಳನ್ನು ಘೋಷಿಸಿದೆ.

ಬೆಂಗಳೂರಿನಲ್ಲಿ ಹೊಂಡಾ ಬಿಗ್‌ವಿಂಗ್ ಶೋ ರೂಂ ಉದ್ಘಾಟನೆ!

ಈ ಉತ್ಸವವು 2021 ರ ಮಾರ್ಚ್ 5 ರಿಂದ 8 ರವರೆಗೆ ನಡೆಯುತ್ತದೆ ಮತ್ತು ಈ ಕೆಳಗೆ ತಿಳಿಸಿರುವ ರೀತಿಯ ಕೊಡುಗೆಗಳನ್ನು ಒಳಗೊಂಡಿರುತ್ತದೆ 

  • ರೂ. 100 + GST ಯಲ್ಲಿ ಪಾವತಿಸಿದ ಸೇವೆಗಳು
  • ರೋಡ್ ಸೈಡ್ ಅಸಿಸ್ಟೆನ್ಸ್ ಖರೀದಿಯಲ್ಲಿ 100 ರೂ ರಿಯಾಯಿತಿ
  • ಜಾಯ್‍ರೈಡ್ (ವಾರ್ಷಿಕ ನಿರ್ವಹಣೆ ಒಪ್ಪಂದ) ಖರೀದಿಗೆ 100 ರೂ ರಿಯಾಯಿತಿ
  • ಎಲ್ಲಾ ಗ್ರಾಹಕರಿಗೆ ಉಚಿತ ವಾಶಿಂಗ್, ಪಾಲಿಶಿಂಗ್ ಮತ್ತು ನೈಟ್ರೋಜೆನ್

ನಾಲ್ಕು ದಿನಗಳ ಸೇವಾ ಉತ್ಸವವು ಹೀರೋ ಮೊಟೊಕಾರ್ಪ್ ಮೋಟರ್ ಸೈಕಲ್‍ಗಳು ಮತ್ತು ಸ್ಕೂಟರ್‍ಗಳ ಮಾಲೀಕರಿಗೆ ವಿವಿಧ ವಿನಿಮಯ ಕೊಡುಗೆಗಳನ್ನು ಸಹ ನೀಡುತ್ತದೆ.

ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು, ಕಂಪನಿಯು ತನ್ನ ಸಂಪೂರ್ಣ ಸ್ಕೂಟರ್ ಶ್ರೇಣಿಯಲ್ಲಿ ವಿಶೇಷ ವಿನಿಮಯ ಮತ್ತು ಖರೀದಿ ಬೋನಸ್‍ಗಳನ್ನು ನೀಡುತ್ತಿದೆ.

ತನ್ನ ಗ್ರಾಹಕರಿಗೆ ಸಂತೋಷಕರ ಅನುಭವಗಳನ್ನು ನೀಡುವ ಹೀರೋ ಮೊಟೊಕಾರ್ಪ್‍ನ ಬದ್ಧತೆಯನ್ನು ಕೊಡುಗೆಗಳು ಮತ್ತೆ ಧೃಢೀಕರಿಸುತ್ತವೆ. ಹೆಚ್ಚು ಗ್ರಾಹಕ-ಕೇಂದ್ರಿತ ಕಂಪನಿಯಾದ ಹೀರೋ ಮೊಟೊಕಾರ್ಪ್ ತನ್ನ ಗ್ರಾಹಕರನ್ನು ಶ್ರೇಷ್ಠ ಉತ್ಪನ್ನಗಳು, ಸೇವೆಗಳು ಮತ್ತು ಕೊಡುಗೆಗಳೊಂದಿಗೆ ಪ್ರಚೋದಿಸಲು ಮತ್ತು ಆಕರ್ಷಿಸಲು ನಿರಂತರವಾಗಿ ಪ್ರಯತ್ನಿಸುತ್ತದೆ.

ಕೊಡುಗೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಗ್ರಾಹಕರು ತಮ್ಮ ಹತ್ತಿರದ ಹೀರೋ ಅಧಿಕೃತ ಗ್ರಾಹಕ ಟಚ್-ಪಾಯಿಂಟ್‍ಗೆ ಭೇಟಿ ನೀಡಬಹುದು.