ಹೀರೋ ಮೊಟೊಕಾರ್ಪ್-ರಾಮಕೃಷ್ಣ ಮಿಶನ್‌ನಿಂದ ಸೋಂಕಿತರಿಗೆ ಆಸ್ಪತ್ರೆ ಸೌಲಭ್ಯ!
ವಾರ್ಡ್‍ಗಳಲ್ಲಿ ಆಕ್ಸಿಜನ್ ಸಹಿತ 90 ಹಾಸಿಗೆಗಳು, ಎಮರ್ಜನ್ಸಿ ವಾರ್ಡ್‍ನಲ್ಲಿ ಆಮ್ಲಜನಕ ಮತ್ತು ಪೋರ್ಟಬಲ್ ವೆಂಟಿಲೇಟರ್ ಸೌಲಭ್ಯವಿರುವ 16 ಹಾಸಿಗೆಗಳು ಸೇರಿದಂತೆ ಕೋವಿಡ್ ಸೋಂಕಿತರಿಗೆ ಹೀರೋ ಮೊಟೊಕಾರ್ಪ್ ವಿಶೇಷ ಸೇವೆ ಘೋಷಿಸಿದೆ.
ದೆಹಲಿ(ಏ.29): ಕೋವಿಡ್-19 ರ ಪರಿಹಾರ ಪ್ರಯತ್ನಗಳ ಬಗೆಗಿನ ತನ್ನ ಬದ್ಧತೆಗೆ ಅನುಗುಣವಾಗಿ, ವಿಶ್ವದ ಅತಿದೊಡ್ಡ ಮೋಟರ್ ಸೈಕಲ್‍ಗಳು ಮತ್ತು ಸ್ಕೂಟರ್ ತಯಾರಕರಾದ ಹೀರೋ ಮೊಟೊಕಾರ್ಪ್ ಲಿಮಿಟೆಡ್ ದೇಶಾದ್ಯಂತ ತನ್ನ ಸೇವೆಯನ್ನು ಬಹಳ ವೇಗವಾಗಿ ವಿಸ್ತರಿಸಿದೆ.
ಭಾರತದ ಅತ್ಯಂತ ಕಡಿಮೆ ಬೆಲೆ ಬೈಕ್ ಹೀರೋ HF 100 ಬಿಡುಗಡೆ!
ಕಂಪನಿಯ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‍ಆರ್) ಯ ಪ್ಲಾಟ್‍ಫಾರ್ಮ್ ಆದ ``ಹೀರೋ ವಿ ಕೇರ್'' ಅಡಿಯಲ್ಲಿ, ಆರೋಗ್ಯ ವ್ಯವಸ್ಥೆ ಮತ್ತು ಕೋವಿಡ್ -19 ಸೇವೆ ಬಲಪಡಿಸಲು ಹೀರೋ ಮೊಟೊಕಾರ್ಪ್ ಮುಂದಾಗಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ರಾಮಕೃಷ್ಣ ಮಿಷನ್ ಸೇವಾಶ್ರಮ (RMSK) ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಕ್ಷಿಪ್ರ-ಪ್ರತಿಕ್ರಿಯೆ ತಂಡಗಳು ಮತ್ತು ಇತರ ತುರ್ತು ವೈದ್ಯಕೀಯ ಸೌಲಭ್ಯಗಳ ಸಾಮಥ್ರ್ಯವನ್ನು ಹೆಚ್ಚಿಸಲು ಹೀರೋ ಮೊಟೊಕಾರ್ಪ್ ರಾಮಕೃಷ್ಣ ಮಿಷನ್ ಸೇವಾಶ್ರಮದ ಆರೋಗ್ಯ ಮೂಲಸೌಕರ್ಯಕ್ಕೆ ಬೆಂಬಲ ನೀಡುತ್ತಿದೆ. ಹರಿದ್ವಾರ ಪ್ರದೇಶದಲ್ಲಿ ಕರೋನವೈರಸ್ ಹರಡುವುದನ್ನು ತಗ್ಗಿಸಲು ತಕ್ಷಣದ ಆರೋಗ್ಯ ಸಿದ್ಧತೆ ಯೋಜನೆಯನ್ನು ನಿಯೋಜಿಸಲು ಇದು ಮಿಷನ್‍ಗೆ ಸಹಾಯ ಮಾಡುತ್ತದೆ.
ಅದರ ಜೊತೆಗೆ, ದೆಹಲಿ ಮತ್ತು ಎನ್‍ಸಿಆರ್, ಹರಿಯಾಣ, ಉತ್ತರಾಖಂಡ್, ರಾಜಸ್ಥಾನ ಮತ್ತು ಗುಜರಾತ್ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯಕೀಯ ಸಿಬ್ಬಂದಿಗಳ ಸುರಕ್ಷಿತ, ವೈಯಕ್ತಿಕ ಪ್ರಯಾಣಕ್ಕಾಗಿ ಹೀರೋ ಮೊಟೊಕಾರ್ಪ್ ತನ್ನ ಮೋಟಾರ್‍ಸೈಕಲ್ ಮತ್ತು ಸ್ಕೂಟರ್‍ಗಳನ್ನು ಒದಗಿಸುತ್ತಿದೆ.
ಈ ಉಪಕ್ರಮದ ಅಡಿಯಲ್ಲಿ, ಕಂಪನಿಯು ಪ್ರಸ್ತುತ ಹರಿಯಾಣದ ಧರುಹೆರಾ ಮತ್ತು ಸುತ್ತಮುತ್ತಲಿನ ಏಳು ಆಸ್ಪತ್ರೆಗಳು, ಉತ್ತರಾಖಂಡದ ನಾಲ್ಕು ಆಸ್ಪತ್ರೆಗಳು, ಹರಿಯಾಣದ ಗುರುಗ್ರಾಮ್‍ನ ನಾಲ್ಕು ಆಸ್ಪತ್ರೆಗಳು, ಜೈಪುರದ ಮೂರು ಆಸ್ಪತ್ರೆಗಳು ಮತ್ತು ರಾಜಸ್ಥಾನದ ಅಲ್ವಾರ್ ಮತ್ತು ಹ್ಯಾಲೊಲಿನ್ ಗುಜರಾತ್ ಬಳಿಯ ಒಂದೊಂದು ಆಸ್ಪತ್ರೆಗಳ ಆರೋಗ್ಯ ಕಾರ್ಯಕರ್ತರಿಗೆ ತನ್ನ ದ್ವಿಚಕ್ರ ವಾಹನಗಳನ್ನು ಒದಗಿಸುವ ಪ್ರಕ್ರಿಯೆಯಲ್ಲಿದೆ.
ಇವುಗಳಲ್ಲದೆ, ಹೀರೋ ಮೊಟೊಕಾರ್ಪ್ ದೆಹಲಿ ಮತ್ತು ಹರಿಯಾಣದ ಕೆಲವು ಆಸ್ಪತ್ರೆಗಳ ತುರ್ತು ವೈದ್ಯಕೀಯ ಬಳಕೆಗಾಗಿ ಆಕ್ಸಿಜನ್ ಸಿಲಿಂಡರ್‍ಗಳನ್ನು ಸಹ ನೀಡಿದೆ. ಕಂಪನಿಯು ಆರೋಗ್ಯ ಕಾರ್ಯಕರ್ತರ ಬಳಕೆಗಾಗಿ ಪಿಪಿಇ ಕಿಟ್‍ಗಳನ್ನು ವಿವಿಧ ರಾಜ್ಯಗಳ ಆರೋಗ್ಯ ಅಧಿಕಾರಿಗಳಿಗೆ ನೀಡುತ್ತಿದೆ.
ಹೀಗೆಯೇ ಮುಂದುವರಿಯುತ್ತಾ, ಹೀರೋ ಮೊಟೊಕಾರ್ಪ್ ಸ್ಥಳೀಯ ಆಸ್ಪತ್ರೆಗಳು, ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಅಧಿಕಾರಿಗಳೊಂದಿಗಿನ ಸಹಭಾಗಿತ್ವದ ಮೂಲಕ ದೇಶಾದ್ಯಂತ ಕೋವಿಡ್-ಪರಿಹಾರಗಳತ್ತ ತನ್ನ ಉಪಕ್ರಮಗಳನ್ನು ಮತ್ತಷ್ಟು ವಿಸ್ತರಿಸಲಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಉಂಟಾಗುತ್ತಿರುವ ಸವಾಲುಗಳನ್ನು ಎದುರಿಸಲು ಹೀರೋ ಮೊಟೊಕಾರ್ಪ್ ನೀಡುತ್ತಿರುವ ವಿಶೇಷ ಪ್ರಯತ್ನಗಳನ್ನು ನಾವು ಪ್ರಶಂಸಿಸುತ್ತೇವೆ. ವೈರಸ್ ಅನ್ನು ನಿವಾರಿಸಲು ಮತ್ತು ಆರ್ಥಿಕ ಸಂಕಷ್ಟಗಳನ್ನು ಎದುರಿಸುವ ನಮ್ಮ ಪ್ರಯತ್ನಗಳನ್ನು ಬಲಪಡಿಸಲು ಇದೇ ರೀತಿ ಸಹಾಯ ಹಸ್ತವನ್ನು ಚಾಚುವಂತೆ ನಾನು ಇತರ ಕಂಪನಿಗಳನ್ನು ಒತ್ತಾಯಿಸುತ್ತೇನೆ ಎಂದು ಹರಿದ್ವಾರದ ಜಿಲ್ಲಾ ಮ್ಯಾಜಿಸ್ಟ್ರೇಟ್ ರವಿಶಂಕರ್ (ಐಎಎಸ್) ಹೇಳಿದರು, ``
(RKMS), ಹರಿದ್ವಾರದ ವೈದ್ಯಕೀಯ ಅಧೀಕ್ಷಕ ಸ್ವಾಮಿ ದಯಾಧಿಪಾನಂದ ಅಲಿಯಾಸ್ ಡಾ.ಶಿವಕುಮಾರ್ ಮಹಾರಾಜ್ ಅವರು ಹೀಗೆ ಹೇಳಿದರು, ``ಕೊರೊನಾವೈರಸ್ ಸಾಂಕ್ರಾಮಿಕ ರೋಗಕ್ಕೆ ಪರಿಣಾಮಕಾರಿಯಾಗಿ ಪ್ರತಿಕ್ರಿಯಿಸಲು ಸಹಾಯ ಮಾಡುವ ಪ್ರತಿಕ್ರಿಯೆ ಪ್ಯಾಕೇಜ್‍ನೊಂದಿಗೆ ನಮಗೆ ಬೆಂಬಲ ನೀಡಿದ ಹೀರೋ ಮೊಟೊಕಾರ್ಪ್‍ಗೆ ಧನ್ಯವಾದಗಳು. ಹೀರೋ ಮೊಟೊಕಾರ್ಪ್‍ನ ಬೆಂಬಲವು ನಮ್ಮ ಉದ್ದೇಶವನ್ನು ಬಲಗೊಳಿಸುತ್ತದೆ ಮತ್ತು ನಾವು ನಮ್ಮ ರೋಗಿಗಳಿಗೆ ಮಾಡುವ ಆರೈಕೆಯನ್ನು ಮುಂದುವರಿಸುತ್ತೇವೆ, ಜೀವಗಳನ್ನು ಉಳಿಸಲು ಸಹಾಯ ಮಾಡುತ್ತೇವೆ ಮತ್ತು ಈ ಸಹಯೋಗದ ಸಹಾಯದಿಂದ ನಮ್ಮ ಸಮುದಾಯಗಳನ್ನು ರಕ್ಷಿಸುತ್ತೇವೆ. ''
ಹರಿದ್ವಾರದ ರಾಮಕೃಷ್ಣ ಮಿಷನ್ ಸೇವಾಶ್ರಮವು ಈ ಕೆಳಗಿನ ಸೌಲಭ್ಯಗಳನ್ನು ಹೊಂದಿದೆ:
• ವಾರ್ಡ್‍ಗಳಲ್ಲಿ ಆಕ್ಸಿಜನ್ ಸಹಿತ 90 ಹಾಸಿಗೆಗಳು (ಖಾಸಗಿ, ಅರೆ ಖಾಸಗಿ ಮತ್ತು ಸಾಮಾನ್ಯ).
• ಎಮರ್ಜನ್ಸಿ ವಾರ್ಡ್‍ನಲ್ಲಿ ಆಮ್ಲಜನಕ ಮತ್ತು ಪೋರ್ಟಬಲ್ ವೆಂಟಿಲೇಟರ್ ಸೌಲಭ್ಯವಿರುವ 16 ಹಾಸಿಗೆಗಳು.
• ಕೋವಿಡ್ ಐಸಿಯು ನಲ್ಲಿ ಆಮ್ಲಜನಕ ಮತ್ತು BIPAP ಯಂತ್ರದ ಸಹಿತ 08 ಹಾಸಿಗೆಗಳು.
• ಕೋವಿಡ್ ಐಸಿಯು (ಹಂತ 3) ನಲ್ಲಿ ವೆಂಟಿಲೇಟರ್ ಸಹಿತ 08 ಹಾಸಿಗೆಗಳು.
• 24 * 7 ಲ್ಯಾಬ್, ಸಿಟಿ ಸ್ಕ್ಯಾನ್.
• 05 ಆಪರೇಷನ್ ಥಿಯೇಟರ್‍ಗಳು