ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ ಹೀರೋ Karizma: ಬೆಲೆ, ವೈಶಿಷ್ಟ್ಯತೆ ಹೀಗಿದೆ..
ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೀರೋ ಮೋಟೋಕಾರ್ಪ್‌ನ ಸಿಇಒ ನಿರಂಜನ್ ಗುಪ್ತಾ, ಕರಿಜ್ಮಾ ಎಕ್ಸ್‌ಎಂಆರ್ "ಮೋಟರ್ ಸೈಕಲ್‌ಗಳ ಹೃತಿಕ್ ರೋಷನ್" ಎಂದು ಹೇಳಿದರು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಉಪಸ್ಥಿತರಿದ್ದರು.
ನವದೆಹಲಿ (ಆಗಸ್ಟ್ 29, 2023): ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಪ್ರಯತ್ನದಲ್ಲಿ, ಹೀರೋ ಮೋಟೋಕಾರ್ಪ್ ಕರಿಜ್ಮಾ ಬೈಕ್ ಅನ್ನು ಬಿಡುಗಡೆ ಮಾಡಿದೆ. ಹೊಸ ಅವತಾರದಲ್ಲಿ ಭಾರತೀಯರ ಮನಗೆದ್ದಿದ್ದ ಕರಿಜ್ಮಾ ಬೈಕ್ ಮತ್ತೆ ರೀಲಾಂಚ್ ಆಗಿದೆ. ಬಾಲಿವುಡ್ ನಟ ಹೃತಿಕ್ ರೋಷನ್ ಅವರೇ ಮತ್ತೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದಾರೆ.
Hero MotoCorp ಕರಿಜ್ಮಾ XMR 210 ಅನ್ನು 1,72,900 ರೂಪಾಯಿಗಳ ಪರಿಚಯಾತ್ಮಕ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಹೀರೋ ಮೋಟೋಕಾರ್ಪ್‌ನ ಸಿಇಒ ನಿರಂಜನ್ ಗುಪ್ತಾ, ಕರಿಜ್ಮಾ ಎಕ್ಸ್‌ಎಂಆರ್ "ಮೋಟರ್ ಸೈಕಲ್‌ಗಳ ಹೃತಿಕ್ ರೋಷನ್" ಎಂದು ಹೇಳಿದರು. ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಕೂಡ ಉಪಸ್ಥಿತರಿದ್ದರು.
ಇದನ್ನು ಓದಿ: Mahindra Thar.e: ಶೀಘ್ರದಲ್ಲೇ ರಸ್ತೆಗಳಿಗೆ ಲಗ್ಗೆ ಇಡಲಿದೆ ಮಹೀಂದ್ರಾ ಎಲೆಕ್ಟ್ರಿಕ್ ಥಾರ್: ವೈಶಿಷ್ಟ್ಯತೆಗಳು ಹೀಗಿವೆ..
ಮ್ಯಾಟ್ ಫ್ಯಾಂಟಮ್ ಬ್ಲ್ಯಾಕ್, ಟರ್ಬೋ ರೆಡ್ ಮತ್ತು ಐಕಾನಿಕ್ ಯೆಲ್ಲೋ ಸೇರಿ 3 ಬಣ್ಣಗಳಲ್ಲಿ ಬಿಡುಗಡೆಯಾದ ಕರಿಜ್ಮಾ XMR 210 ಸುಜುಕಿ Gixxer SF 250, ಯಮಹಾ R15 ಮತ್ತು ಬಜಾಜ್ ಪಲ್ಸರ್ RS 200 ಜತೆಗೆ ಪೈಪೋಟಿಗೆ ಇಳಿಯುತ್ತದೆ. Hero Karizma XMR 210 ಲಿಕ್ವಿಡ್-ಕೂಲ್ಡ್ 210cc ಸಿಂಗಲ್-ಸಿಲಿಂಡರ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು 25bhp ಪವರ್ ಮತ್ತು 20Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. OBD 2 (ಆನ್-ಬೋರ್ಡ್ ಡಯಾಗ್ನೋಸ್ಟಿಕ್) ಕಂಪ್ಲೈಯಂಟ್ ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
ಇನ್ನು, ಇತರ ವೈಶಿಷ್ಟ್ಯಗಳಲ್ಲಿ ಸಂಪೂರ್ಣ-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಇಡಿ ದೀಪಗಳು, ಸಿಂಗಲ್-ಚಾನೆಲ್ ಎಬಿಎಸ್, ಎಂಜಿನ್ ಕಿಲ್ ಸ್ವಿಚ್ ಮತ್ತು ಸ್ಲಿಪ್ ಹಾಗೂ ಅಸಿಸ್ಟ್ ಕ್ಲಚ್ ಸಿಸ್ಟಮ್ ಸೇರಿವೆ.
ಇದನ್ನೂ ಓದಿ: ಅಬ್ಬಬ್ಬಾ.. ದುಬೈ ಶೇಖ್‌ನ ಈ 46 ಅಡಿ ಎತ್ತರದ ಹಮ್ಮರ್ ನೋಡಿ: ಇದ್ರ ಮುಂದೆ ಇತರ ವಾಹನಗಳು ಕುಬ್ಜವಾಗೇ ಕಾಣ್ಸುತ್ತೆ!
ಬಿಡಿಭಾಗಗಳು
ಹೀರೋ ಖರೀದಿದಾರರಿಗೆ ಆಂಟಿ-ಗ್ಲೇರ್ ರಿಯರ್ ವ್ಯೂ ಮಿರರ್, ಹಗ್ಗರ್ ಫೆಂಡರ್, ಮೊಬೈಲ್ ಹೋಲ್ಡರ್, ಮ್ಯಾಗ್ನೆಟಿಕ್ ಟ್ಯಾಂಕ್ ಬ್ಯಾಗ್ ಮತ್ತು ಥೈ ಪ್ಯಾಡ್‌ಗಳಂತಹ ಪರಿಕರಗಳೊಂದಿಗೆ ತಮ್ಮ ಕರಿಜ್ಮಾವನ್ನು ವೈಯಕ್ತೀಕರಿಸುವ ಆಯ್ಕೆಯನ್ನು ನೀಡಿದೆ. ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್ ಮೂಲಕ ಮತ್ತು ಭಾರತದಲ್ಲಿನ ತನ್ನ ಅಧಿಕೃತ ವಿತರಕರಾದ್ಯಂತ ಬುಕ್ಕಿಂಗ್ ಅನ್ನು ಪ್ರಾರಂಭಿಸಿದೆ.
ಇದನ್ನೂ ಓದಿ: Royal Enfield Hunter 350ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್: ವರ್ಷದಲ್ಲಿ 2 ಲಕ್ಷ ಮಾರಾಟದ ಮೈಲಿಗಲ್ಲು ದಾಟಿದ ಕಂಪನಿ