Asianet Suvarna News Asianet Suvarna News

Hero Electric Vs Hero Moto ಬ್ರ್ಯಾಂಡ್‌ಗಾಗಿ ಕುಟುಂಬದ ನಡುವೆ ಜಿದ್ದಾಜಿದ್ದಿ, ಕೋರ್ಟ್ ಮೊರೆ ಹೋದ ದೇಶದ ಪ್ರತಿಷ್ಠಿತ ಕಂಪನಿ!

  • ಮುಂಜಾಲ್ ಕುಟುಂಬ ಸದಸ್ಯರಿಂದ ನ್ಯಾಯಾಲಯದ ಮೊರೆ
  • ‘ಹೀರೋ’ ಬ್ರ್ಯಾಂಡ್‌ ಬಳಕೆ ಪ್ರಶ್ನಿಸಿ ಅರ್ಜಿ
  • ಇವಿ ವಲಯದಲ್ಲಿ ಪ್ರಾಬಲ್ಯ ಸಾಧಿಸಲು ಹಣಾಹಣಿ
Hero Electric takes Hero Moto to court on Use of Brand name Munjal family in legal dispute
Author
Bangalore, First Published Jan 7, 2022, 8:03 PM IST

ನವದೆಹಲಿ(ಜ.07): ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಕ್ರೇಜ್ ಹೆಚ್ಚುತ್ತಿದ್ದಂತೆಯೇ ಎಲ್ಲಾ ವಾಹನ ತಯಾರಕರು ಅದರತ್ತ ಮುಖ ಮಾಡುತ್ತಿದ್ದಾರೆ. ಅದರಲ್ಲೂ ದ್ವಿಚಕ್ರ ವಾಹನಗಳ ವಲಯದಲ್ಲೇ ಎಲೆಕ್ಟ್ರಿಕ್ (Electric) ಸ್ಕೂಟರ್ಗಳದ್ದೇ ಪಾರುಪತ್ಯವಾಗಿದೆ. ಆದರೆ, ಈ ವಲಯದಲ್ಲಿ ಜಿದ್ದಿಗೆ ಬಿದ್ದಂತೆ ವಾಹನಗಳನ್ನು ಬಿಡುಗಡೆ ಮಾಡಿದ ಎರಡೂ ಕಂಪನಿಗಳು ತಮ್ಮ ಬ್ರ್ಯಾಂಡ್ ಹೆಸರಿಗಾಗಿ ನ್ಯಾಯಾಲಯಕ್ಕೆ ಅಲೆದಾಡುವಂತಹ ಪರಿಸ್ಥಿತಿ ಎದುರಾಗಿದೆ. 
ಇದು ನಡೆದಿರುವ ಒಂದೇ ಕುಟುಂಬದ ಸದಸ್ಯರ ನಡುವೆ. ಮುಂಜಲ್ (Munjal) ಕುಟುಂಬದ ಸದಸ್ಯರು ಈಗಾಗಲೇ ವಿವಿಧ ವ್ಯವಹಾರಗಳನ್ನು ಹೊಂದಿದ್ದು, ಪರಸ್ಪರ ಹೊಂದಾಣಿಕೆಯನ್ನು ಮಾಡಿಕೊಂಡಿದ್ದಾರೆ. ಆದರೆ, ಈ ಎರಡೂ ವರ್ಗಗಳ ಎಲೆಕ್ಟ್ರಿಕ್ ವಾಹನಗಳ ಕುರಿತ ಆಸಕ್ತಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. 

Electric Bicycles ನಗರ ಹಾಗೂ ಆಫ್‌ರೋಡ್‌ಗಾಗಿ ಹೀರೋ F2i, F3i ಎಲೆಕ್ಟ್ರಿಕ್ ಬೈಸಿಕಲ್ ಬಿಡುಗಡೆ!

ಹೀರೋ ಎಲೆಕ್ಟ್ರಿಕ್ ಮಾಲಿಕತ್ವ ಹೊಂದಿರುವ ವಿಜಯ್ ಮುಂಜಲ್ (Vijay Munjal) ಮತ್ತು ಅವರ ಪುತ್ರ ನವೀನ್ ಮುಂಜಲ್ (Navven Munjal), ಈಗ ಹೀರೋ ಮೋಟೋಕಾರ್ಪ್ (Hero Motocorp) ಕಂಪನಿಯ ಸಿಎಂಡಿ (CMD) ಪವನ್ ಮುಂಜಲ್ (Pavan Munjal)ವಿರುದ್ಧನ್ಯಾಯಾಲಯದ ಮೊರೆ ಹೋಗಿದ್ದು, ಹೀರೋ ಮೋಟೋಕಾರ್ಪ್ಸ್ ಕಂಪನಿಯ ಹೊಸದಾಗಿ ಬಿಡುಗಡೆಯಾಗುತ್ತಿರುವ ಎಲೆಕ್ಟ್ರಿಕ್ ವಾಹನಗಳ ಶ್ರೇಣಿಗೆ ‘ಹೀರೋ’ (Hero) ಬ್ರ್ಯಾಂಡ್ ಹೆಸರು ಬಳಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಹೀರೋ ಎಲೆಕ್ಟ್ರಿಕ್ ಕಳೆದ 15 ವರ್ಷಗಳಿಂದ ಎಲೆಕ್ಟ್ರಿಕ್ ವಾಹನಗಳ ವ್ಯವಹಾರದಲ್ಲಿದೆ. ಆದರೆ, ಅಂದು ಇವಿ ಮಾರುಕಟ್ಟೆ ಇಷ್ಟೊಂದು ದೊಡ್ಡದಾಗಿರಲಿಲ್ಲ. ಆದ್ದರಿಂದ ಈ ಬ್ರ್ಯಾಂಡ್ ವಿವಾದ ಕೂಡ ಸದ್ದು ಮಾಡಿರಲಿಲ್ಲ. ಆದರೆ, ಈ ವರ್ಷದ ಮಾರ್ಚ್ನಲ್ಲಿ ಹೀರೋ ಮೋಟೋಕಾರ್ಪ್ ಇವಿ ವಲಯಕ್ಕೆ ಪಾದಾರ್ಪಣೆ ಮಾಡಲು ಸಿದ್ಧತೆ ನಡೆಸಿರುವುದರಿಂದ, ವಿಜಯ್-ನವೀನ್ ಮುಂಜಲ್ ತಗಾದೆ ತೆಗೆದಿದ್ದು, ಇವಿ ವಲಯದಲ್ಲಿ ಅವರು ಬಳಸುತ್ತಿರುವ ಹೀರೋ ಬ್ರ್ಯಾಂಡ್ ಕೇವಲ ತಮ್ಮದಾಗಿಯೇ ಇರಬೇಕು ಎಂದು ವಾದಿಸುತ್ತಿದ್ದಾರೆ.

ಕೈಗೆಟುಕವ ಬೆಲೆಯ ಹೀರೋ ಪ್ಲೆಷರ್+ XTec ಸ್ಕೂಟರ್ ಬಿಡುಗಡೆ!

ಎರಡೂ ಕಂಪನಿಗಳ ಮುಖ್ಯ ಬ್ರ್ಯಾಂಡ್ ‘ಹೀರೋ’ ಆಗಿರುವುದರಿಂದ ಅದಕ್ಕಾಗಿ ಜಿದ್ದಾಜಿದ್ದಿ ಆರಂಭಗೊಂಡಿದೆ. ಈ ಕುರಿತು ನ್ಯಾಯಾಲಯದ ಹೊರಗೆ ಚರ್ಚೆ, ರಾಜಿ-ಸಂಧಾನ ನಡೆಸುವ ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಕೂಡ ಮೂಲಗಳು ತಿಳಿಸಿವೆ. ಹೀರೋ ಎಲೆಕ್ಟ್ರಿಕ್ನ ವ್ಯವಸ್ಥಾಪಕ ನಿರ್ದೇಶಕ ನವೀನ್ ಮುಂಜಲ್ ಈ ಕುರಿತು ಹೇಳಿಕೆ ನೀಡಿದ್ದು, ತಾವು ಈ ಕುರಿತು ಮಾತುಕತೆಗೆ ಸಿದ್ಧರಿದ್ದೇವೆ. ಆದರೆ, ತಮ್ಮನ್ನು ಇಲ್ಲಿಯವರೆಗೆ ಯಾರೊಬ್ಬರೂ ಸಂಪರ್ಕಿಸಿಲ್ಲ. ಒಂದೇ ಕುಟುಂಬದ ಸದಸ್ಯರಾಗಿ 2010ರಲ್ಲಿ ಕೂಡ ವಿವಾದಗಳನ್ನು ಪರಸ್ಪರ ರಾಜಿ ಸಂಧಾನದಿಂದ ಬಗೆ ಹರಿಸಿಕೊಂಡಿದ್ದೇವೆ. ಈ ಬಾರಿ ಕೂಡ ತಾವು ಚರ್ಚೆಗೆ ಸಿದ್ಧರಿರುವುದಾಗಿ ತಿಳಿಸಿದ್ದಾರೆ.

ಹಿಂದಿನ ಒಪ್ಪಂದದ ಪ್ರಕಾರ ಹೀರೋ ಬ್ರ್ಯಾಂಡ್ ಮೇಲೆ ಹಕ್ಕಿರುವುದು ‘ಹೀರೋ ಎಲೆಕ್ಟ್ರಿಕ್’ಗೆ. ಇವಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು ಕೂಡ ಈ ಕಂಪನಿಯೇ ಮೊದಲು. ಈಗ ಅದು ಉದ್ಯಮದ ಭವಿಷ್ಯವಾಗಿದೆ. ಒಪ್ಪಂದದ ಪ್ರಕಾರ, ಯಾರೊಬ್ಬರೂ ಬ್ರ್ಯಾಂಡ್ ಹೆಸರಿನಲ್ಲಿ ಸ್ಪರ್ಧೆ ಮಾಡುವಂತಿಲ್ಲ.ಆದರೆ, ಈಗ ಆ ಒಪ್ಪಂದ ಮುರಿಯಲ್ಪಟ್ಟಿದೆ ಎಂದಿದ್ದಾರೆ.ಹೀರೋ ಎಲೆಕ್ಟ್ರಿಕ್ ಈಗಾಗಲೇ ಫೋಟೋನ್ ಎಚ್ ಎಕ್ಸ್ (Photon HX) , ಒಪ್ಟಿಮಾ ಎಚ್ಎಕ್ಸ್ (OPTIMO HX)-ಡ್ಯುಯಲ್ ಬ್ಯಾಟರಿ, ಒಪ್ಟಿಮಾ ಎಚ್ಎಕ್ಸ್- ಸಿಂಗಲ್ ಬ್ಯಾಟರಿ, ಹೀರೋ ಎಲೆಕ್ಟ್ರಿಕ್ ಎನ್ವೈಎಕ್ಸ್ ಎಚ್ಎಕ್ಸ್ ಡ್ಯುಯಲ್ ಬ್ಯಾಟರಿ (NYX HX), ಹೀರೋ ಎಲ್ಕಟ್ರಿಕ್ ಒಪ್ಟಿಮಾ ಎಲ್ಎಕ್ಸ್  (VRLA) ಸೇರಿದಂತೆ ಹಲವು ವಾಹನಗಳನ್ನು ಬಿಡುಗಡೆಗೊಳಿಸಿದೆ. ಒಪ್ಟಿಮಾ ಮಾದರಿ ಬೆಲೆ 51,440 ರೂ.ಗಳಿಂದ 67,440 ರೂ.ಗಳವರೆಗಿದ್ದು, ಏಟ್ರಿಯಾ ದರ 66,640 ರೂ.ಗಳಾಗಿವೆ.ಫೋಟೋನ್ ಬೆಲೆ 74,240 ರೂ. ಹಾಗೂ 
 

Follow Us:
Download App:
  • android
  • ios