Electric 2 wheeler 120 ಕಿ.ಮೀ ಮೈಲೇಜ್, ಇವಿಟ್ರಿಕ್ ಮೋಟಾರ್ಸ್‌ನಿಂದ ಎಲೆಕ್ಟ್ರಿಕ್ ಬೈಕ್ ಹಾಗೂ ಸ್ಕೂಟರ್ ಅನಾವರಣ!
- ಇವಿಟ್ರಿಕ್ ಮೋಟಾರ್ಸ್ 3 ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ
- ಗಂಟೆಗೆ 100 ಕಿಮೀ ವೇಗ, 120 ಕಿಮೀ ಮೈಲೇಜ್ ಸಾಮರ್ಥ್ಯ
- ಬೈಕ್, ಸ್ಕೂಟರ್ ಸೇರಿ 3 ದ್ವಿಚಕ್ರ ವಾಹನ ಅನಾವರಣ
ನೋಯ್ಡಾ(ಡಿ.25): ಎಲೆಕ್ಟ್ರಿಕ್ ವಾಹನ ವಲಯದಲ್ಲಿ(Electric Vehicle) ಹೊಸ ಉದ್ದಿಮೆಯಾದ, ಇವಿಟ್ರಿಕ್ ಮೋಟಾರ್ಸ್(evtric motors) ಹೊಚ್ಚ ಹೊಸ ಮೂರು ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಿದೆ. ಗ್ರೇಟರ್ ನೋಯ್ಡಾದಲ್ಲಿನ ಇಂಡಿಯಾ ಎಕ್ಸ್‌ಪೋ 2021ರಲ್ಲಿ ಇವಿಟ್ರಿಕ್ ಹೊಸ ಸ್ಕೂಟರ್ ಅನಾವರಣ ಮಾಡಿದೆ. ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದ್ದು,ಇವಿಟ್ರಿಕ್ ರೈಸ್ (ಮೋಟಾರ್ ಸೈಕಲ್), ಇವಿಟ್ರಿಕ್ ಮೈಟಿ (ಸ್ಕೂಟರ್) ಮತ್ತು ಇವಿಟ್ರಿಕ್ ರೈಡ್ ಪ್ರೋ (ಸ್ಕೂಟರ್) ಎನ್ನುವ ಮೂರು ಎಲೆಕ್ಟ್ರಿಕ್ ದ್ವಿಚಕ್ರವಾಹನಗಳನ್ನು ಬಿಡುಗಡೆ ಮಾಡಿದೆ. ಅತ್ಯಾಕರ್ಷಕ ವಿನ್ಯಾಸದೊಂದಿಗೆ ಅತ್ಯುತ್ತಮ ತಂತ್ರಜ್ಞಾನದ ಮೂಲಕ ಸಂದರ್ಶಕರ ಪ್ರಶಂಸೆಗೆ ಪಾತ್ರವಾಯಿತು. ಒಟ್ಟಾರೆಯಾಗಿ, ಈ ಪ್ರದರ್ಶನ ಅಧಿಕ ವೇಗದ, ಅತ್ಯುತ್ತಮ ಪವರ್ ಹೊಂದಿರುವ ದ್ವಿಚಕ್ರವಾಹನ ಐಸಿಇ ಎದುರಾಳಿಗಳಿಗಿಂತ ಅತ್ಯುತ್ತಮವಾಗಿದೆ.
ಇವಿಟ್ರಿಕ್ ರೈಸ್(Evtric Rise) - ಅಧಿಕ ವೇಗದ ಮೋಟಾರ್ ಸೈಕಲ್ ಗಳು ಬ್ರಾಂಡ್ ನ ಮೊದಲ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದ್ದು, ಇದು ಅತ್ಯುತ್ತಮ ತಂತ್ರಜ್ಞಾನದೊಂದಿಗೆ ಅತ್ಯಾಕರ್ಷಕ ಸ್ಟೈಲ್ ಹೊಂದಿದೆ. ಹೆಚ್ಚಿನ ಬಳಕೆದಾರರಿಗೆ ಚಾರ್ಜಿಂಗ್ ಒಂದು ಸಮಸ್ಯಾದಾಯಕ ಅಂಶವೆಂದು ಪರಿಗಣಿಸಿ, ಬ್ರಾಂಡ್ ಬೈಕ್ ನಲ್ಲಿ 3.0 ಕೆಡಬ್ಲ್ಯುಹೆಚ್ ಲೀಥಿಯಂ ಅಯಾನ್, ಪ್ರತ್ಯೇಕಿಸಬಹುದಾದ ಬ್ಯಾಟರಿ(Battery) ನೀಡುವ ಮೂಲಕ, ಚಾರ್ಜಿಂಗ್(Charging) ಅನುಕೂಲವನ್ನು ನೀಡುತ್ತದೆ. ಬೈಕ್ ಗಂಟೆಗೆ 100 ಕಿಮೀ ವೇಗದ ನೀಡುತ್ತದೆ ಮತ್ತು ಇದು ಒಂದು ಬಾರಿ ಚಾರ್ಜ್ ನಲ್ಲಿ 120 ಕಿಮೀ ಓಡುವ ಸಾಮರ್ಥ್ಯ ಹೊಂದಿದೆ.
Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!
ಇವಿಟ್ರಿಕ್ ಮೈಟಿ(Evtric Mighty)- ಬ್ರಾಂಡ್ ನ ಅಧಿಕ ವೇಗದ ಸ್ಕೂಟರ್ ಬ್ಲಿಂಗ್ ಮತ್ತು ಆರಾಮದಾಯಕತೆಯ ಮಿಶ್ರಣವನ್ನು ರೈಡರ್ ಗಳಿಗೆ ನೀಡುತ್ತದೆ. ಇದು ಸುಲಭವಾಗಿ ಗಂತೆಗೆ 70 ಕಿಮೀ ಗರಿಷ್ಟವೇಗ ತಲುಪುತ್ತದೆ ಮತ್ತು ಒಂದು ಬಾರಿ ಪೂರ್ಣ ಚಾರ್ಜ್ ನಲ್ಲಿ 90 ಕಿಮೀ ಓಡುತ್ತದೆ.
ಇವಿಟ್ರಿಕ್ ರೈಡ್ ಪ್ರೋ(Evtric Ride Pro) - ಇವಿಟ್ರಿಕ್ ನ ಮತ್ತೊಂದು ಅಧಿಕ ವೇಗದ ಇ-ಸ್ಕೂಟರ್ ಅತ್ಯುತ್ತಮ ಮಾಡೆಲ್ ಆಗಿದ್ದು, ಇದು ಗಂಟೆಗೆ 75 ಕಿಮೀ ವೇಗದಲ್ಲಿ ಓಡುತ್ತದೆ, ಹಾಗೂ 90 ಕಿಮೀ ಶ್ರೇಣಿಯನ್ನು ನೀಡುತ್ತದೆ. ಇವಿಟ್ರಿಕ್ ರೈಡ್ ಪ್ರೋ ಹಿಂದೆ ಬಿಡುಗಡೆಯಾಗಿದ್ದ ಇವಿಟ್ರಿಕ್ ರೈಡ್ ಸ್ಕೂಟರ್ ನ ಆಧುನಿಕ ಆವೃತ್ತಿಯಾಗಿದ್ದು, ಇದು ಈ ವರ್ಷದ ಆಗಸ್ಟ್ ನಲ್ಲಿ ಮಾರುಕಟ್ಟೆ ಪ್ರವೇಶಿಸಿದೆ.
Electric Scooter: 1,999 ರೂಗೆ ಬುಕ್ ಮಾಡಿ ಹೈ ಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಒಕಾಯ!
ಇವಿಟ್ರಿಕ್ ತಂಡ ಭಾರತದಲ್ಲಿ ಇವಿ ದ್ವಿಚಕ್ರವಾಹನ ಉದ್ದಿಮೆಯಲ್ಲಿ ಉನ್ನತಿ ಸಾಧಿಸಲು ಗುಣಮಟ್ಟದ ಉತ್ಪನ್ನಗಳನ್ನು ನೀಡಲು ಅತ್ಯಂತ ಶ್ರಮವಹಿಸುತ್ತಿದೆ. ಈ 2021 ರ ಇವಿ ಇಂಡಿಯಾ ಎಕ್ಸ್ ಪೋ ನಮಗೆ ಹೆಚ್ಚಿನ ಗುರುತಿಸುವಿಕೆ ಪಡೆಯಲು ಮತ್ತು ಉದ್ದಿಮೆಯ ದೈತ್ಯರು, ಸಂದರ್ಶಕರು, ಆಟೋ ತಜ್ಞರು ಹಾಗೂ ಬಳಕೆದಾರರಿಂದ ಪ್ರಶಂಸೆಯನ್ನು ಪಡೆಯಲು ಸೂಕ್ತ ಅವಕಾಶ ನೀಡಿದೆ. ನಾವು ಈ ಉತ್ಪನ್ನವನ್ನು ಆಳವಾದ ಮಾರುಕಟ್ಟೆ ಸಂಶೋಧನೆ ಮತ್ತು ಗ್ರಾಹಕ ಅಭಿಪ್ರಾಯವನ್ನು ಆಧರಿಸಿ ವಿನ್ಯಾಸಗೊಳಿಸಿದ್ದೇವೆ. ಭಾರತದಲ್ಲಿ ಇವಿ ಹೊಸದಾಗಿರುವುದರಿಂದ ಅನೇಕ ಕೆಲಸಗಳನ್ನು ಮಾಡಬೇಕಿದೆ, ಆದರೆ, ಗ್ರಾಹಕರ ಮನಸ್ಥಿತಿಯನ್ನು ಪ್ರಾಮಾಣಿಕವಾಗಿ ಪರಿಗಣಿಸದಿದ್ದರೆ, ಉದ್ದಿಮೆಯ ಒಟ್ಟಾರೆ ಬೆಳವಣಿಗೆಯ ಪ್ರಮಾಣ ಕುಸಿಯುತ್ತದೆ. ಆದ್ದರಿಂದ, ನಾವು ಗ್ರಾಹಕ ಮೊದಲು ಎನ್ನುವ ಬ್ರಾಂಡ್ ಆಗಿದ್ದು, ವಿಶಿಷ್ಟ ವಿಶೇಷತೆಗಳು, ಅತ್ಯಾಕರ್ಷಕ ವಿನ್ಯಾಸ ಹಾಗೂ ಸೂಕ್ಷ್ಮ ತಂತ್ರಜ್ಞಾನಗಳ ವಿಷಯದಲ್ಲಿ ಗ್ರಾಹಕರ ನಿರೀಕ್ಷೆಗಳನ್ನು ಸಂಧಿಸುವ ಉತ್ಪನ್ನಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ ಎಂದು ಇವಿಟ್ರಿಕ್ ಮೋಟಾರ್ಸ್ ಸಂಸ್ಥಾಪಕ ಮತ್ತು ಎಂಡಿ ಮನೋಜ್ ಪಾಟೀಲ್ ಹೇಳಿದ್ದಾರೆ.
ಬ್ರಾಂಡ್ ಈಗಾಗಲೇ ಭಾರತದಾದ್ಯಂತ 70+ ಕ್ಕೂ ಅಧಿಕ ದೃಢವಾದ ಸಂಪರ್ಕಜಾಲ ಹೊಂದಿದೆ. ಇದು ಹಣಕಾಸು ವರ್ಷದ ಅಂತ್ಯದವರೆಗೆ 150 ವಿತರಕರನ್ನು ತಲುಪುವ ಗುರಿ ಹೊಂದಿದೆ. ಪ್ರತಿಷ್ಠಿತ 2021 ರ ಇವಿ ಇಂಡಿಯಾ ಎಕ್ಸ್ ಪೋದದ್ಲ್ಲಿ ಭಾಗವಹಿಸುವ ಮೂಲಕ, ಬ್ರಾಂಡ್ ತನ್ನ ದೃಢವಾದ ಅಂಶಗಳನ್ನು ಎಲ್ಲರಿಗೂ ತಿಳಿಸಲು ಮತ್ತು ಪ್ರಸ್ತುತಪಡಿಸಲು ಸಂಪರ್ಕಸೇತುವಾಗಿದೆ ಎಂದು ನಿರೀಕ್ಷಿಸಿದ್ದೇವೆ. ಇದು ಹಣಕಾಸು ವರ್ಷ 2021-22 ರಲ್ಲಿ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ, ಕರ್ನಾಟಕ, ರಾಜಸ್ಥಾನ, ದೆಹಲಿ-ಎನ್ ಸಿ ಆರ್, ಉತ್ತರಪ್ರದೇಶ, ಮಧ್ಯಪ್ರದೇಶ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಉದ್ದೇಶ ಹೊಂದಿದೆ.
ಇವಿಟ್ರಿಕ್ ಮೋಟಾರ್ಸ್ ಕುರಿತು:
2021 ರಲ್ಲಿ ಸಂಸ್ಥಾಪಕ ಮತ್ತು ಎಂಡಿ ಆಗಿರುವ ಮಿ. ಮನೋಜ್ ಪಾಟೀಲ್ ರವರಿಂದ ಸ್ಥಾಪಿಸಲ್ಪಟ್ಟ ಇವಿಟ್ರಿಕ್, ಇವಿ ಆಟೋಮೋಟೀವ್ ಸ್ಟಾರ್ಟಪ್ ಬ್ರಾಂಡ್ ಗಳಲ್ಲಿ ಒಂದಾಗಿದ್ದು, ಪುಣೆಯಲ್ಲಿ ಕೇಂದ್ರಕಚೇರಿ ಹೊಂದಿದೆ ಹಾಗೂ ಇದನ್ನು ಪಿಎಪಿಎಲ್ ಎನ್ನುವ ಭಾರತ ಮೂಲದ ಆಟೋಮೇಷನ್ ಕಂಪನಿ ಬಿಡುಗಡೆ ಮಾಡಿದ್ದು, ಇದು ವಿವಿಧ ಓಇಎಂ ಗಳು ಮತ್ತು ಅದರ ವರ್ಗ 1 ಪೂರೈಕೆದಾರರಿಗೆ ಸಂಪೂರ್ಣ ಪ್ರಮುಖವಾದ ಆಟೋಮೇಷನ್ ಯೋಜನೆಗಳನ್ನು ನಿರ್ಮಿಸುವ ಮತ್ತು ಸಮಗ್ರಗೊಳಿಸುವ ಉದ್ದಿಮೆಯಲ್ಲಿ ತೊಡಗಿದೆ. ಇವಿಟ್ರಿಕ್ ಮೋಟಾರ್ಸ್ ಆಟೋಮೊಬೈಲ್ ವಲಯದಲ್ಲಿ 20 ಕ್ಕೂ ಅಧಿಕ ವರ್ಷಗಳ ಅನುಭವ ಹೊಂದಿರುವ ನಿಪುಣ ಉದ್ದಿಮೆಗಳಿಂದ ಮುನ್ನಡೆಸಿ, ನಿರ್ವಹಿಸಲ್ಪಡುತ್ತಿದೆ. ಕಂಪನಿಯ ಉತ್ಪನ್ನಗಳು ಐಸಿಎಟಿ (iCAT) ಅನುಮೋದಿತವಾಗಿದೆ. ಇದು 100% ಭಾರತೀಯ ಎಲೆಕ್ಟ್ರಿಕ್ ಆಟೋಮೇಟೀವ್ ತಯಾರಿಕಾ ಕಂಪನಿಯಾಗಿದ್ದು, ಇದು "ಮೇಕ್ ಇನ್ ಇಂಡಿಯಾ" ಮೇಲೆ ಗಮನ ಹರಿಸಿದೆ.