EV sales 2021: ಎಲೆಕ್ಟ್ರಿಕ್‌ ವಾಹನ ಮಾರಾಟ ಶೇ.163ರಷ್ಟು ಏರಿಕೆ: ಯುಪಿ ನಂ.1, ಕರ್ನಾಟಕಕ್ಕೆ 2ನೇ ಸ್ಥಾನ

ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಪ್ರಮಾಣ 2021ರಲ್ಲಿ ಶೇ.163ರಷ್ಟು ಏರಿಕೆಯಾಗಿದೆ. ಕಳೆದೊಂದು ವರ್ಷದಲ್ಲೇ ಇವಿ (Electric Vehicle-EV) ವಾಹನದ ನೋಂದಣಿ ಸಂಖ್ಯೆ 3,24,840ಗೆ ತಲುಪಿದೆ

EV sales up 163 percent in 2021 Uttar Pradesh  registers highest sales followed by Karnataka mnj

Auto Desk: ದೇಶೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್‌ ವಾಹನಗಳ ಮಾರಾಟ ಪ್ರಮಾಣ 2021ರಲ್ಲಿ ಶೇ.163ರಷ್ಟು ಏರಿಕೆಯಾಗಿದೆ. ಕಳೆದೊಂದು ವರ್ಷದಲ್ಲೇ ಇವಿ (Electric Vehicle-EV) ವಾಹನದ ನೋಂದಣಿ ಸಂಖ್ಯೆ 3,24,840ಗೆ ತಲುಪಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಸಂಸತ್ತಿಗೆ ಮಾಹಿತಿ ನೀಡಿದ್ದಾರೆ. ಸಚಿವರು ಹಂಚಿಕೊಂಡ ಮಾಹಿತಿಯ ಪ್ರಕಾರ, 2021 ರಲ್ಲಿ ನೋಂದಣಿಯಾದ EVಗಳ ಸಂಖ್ಯೆ (3,24,840). ಅದೇ ವರ್ಷದಲ್ಲಿ ನೋಂದಣಿಯಾದ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಪ್ರಮಾಣ ಅದಕ್ಕಿಂತ ಶೇ. 1.7ರಷ್ಟು ಕಡಿಮೆ. (1,83,12,760).

2019-2020 ಮತ್ತು 2020-2021 ರ ನಡುವೆ, ದ್ವಿಚಕ್ರ ವಾಹನಗಳ ಪ್ರಮಾಣ ಶೇ. 422 ರಷ್ಟು ಏರಿಕೆಯಾಗಿದ್ದು, 28,508 ರಿಂದ 1,49,068 ಕ್ಕೆ ಏರಿದೆ. ಮೂರು-ಚಕ್ರ ವಾಹನಗಳು 90,216 ರಿಂದ 1,57,682 ಕ್ಕೆ ಅಂದರೆ ಶೇ. 75 ರಷ್ಟು ಮತ್ತು ನಾಲ್ಕು-ಚಕ್ರ ವಾಹನಗಳ ಮಾರಾಟವು 4,695 ರಿಂದ 15,860 ಕ್ಕೆ ಅಂದರೆ ಶೇ. 230 ರಷ್ಟು ಏರಿಕೆಯಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ರಾಜ್ಯಗಳ ಪೈಕಿ ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಇವಿಗಳು (EVs) ನೋಂದಣಿಯಾಗಿವೆ. (66,702), ಕರ್ನಾಟಕದಲ್ಲಿ 33,307, ತಮಿಳುನಾಡಿನಲ್ಲಿ 30,037 ಹಾಗೂ ಮಹಾರಾಷ್ಟ್ರದಲ್ಲಿ 29,860 ಮತ್ತು ದೆಹಲಿಯಲ್ಲಿ 25,809 ವಾಹನಗಳು ಮಾರಾಟವಾಗಿವೆ. 

ಇದನ್ನೂ ಓದಿ: Two Wheeler Sales: ಫೆಬ್ರವರಿಯಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಕುಸಿತ

ಉತ್ತರಪ್ರದೇಶದಲ್ಲಿ 2020ಕ್ಕೆ ಹೋಲಿಸಿದರೆ ಇವಿಗಳ ಮಾರಾಟ  ಶೆ.113.38ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಶೇ.242, ತಮಿಳುನಾಡಿನಲ್ಲಿ 427, ಮಹಾರಾಷ್ಟ್ರದಲ್ಲಿ 318 ಹಾಗೂ ದೆಹಲಿಯಲ್ಲಿ ಶೇ.109ರಷ್ಟು ವಾಹನಗಳು ಮಾರಾಟವಾಗಿವೆ. ದೇಶಾದ್ಯಂತ ಪೆಟ್ರೋಲ್ (Petrol) ಹಾಗೂ ಡೀಸೆಲ್ (Diesel) ವಾಹನಗಳ ಮಾರಾಟ 2021ರಲ್ಲಿ ಶೇ.-0.98ರಷ್ಟು ಅಂದರೆ 18,312,760 ನೊಂದಣಿಗಳಾಗಿವೆ. 2020ರಲ್ಲಿ ಇದು ಶೇ. 22.43 ಹಾಗೂ 2019ರಲ್ಲಿ ಇದು ಶೇ.25ರಷ್ಟಿತ್ತು

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಅಳವಡಿಕೆಯನ್ನು ಉತ್ತೇಜಿಸುವ ಸಲುವಾಗಿ, ಸರ್ಕಾರವು 2015 ರಲ್ಲಿ ಪ್ಯಾನ್-ಇಂಡಿಯಾ ಆಧಾರದ ಮೇಲೆ ಭಾರತದಲ್ಲಿ (ಹೈಬ್ರಿಡ್ ಮತ್ತು) ಎಲೆಕ್ಟ್ರಿಕ್ ವೆಹಿಕಲ್ಸ್ (ಫೇಮ್ ಇಂಡಿಯಾ) ಯೋಜನೆಯನ್ನು ಜಾರಿಗೊಳಿಸಿತ್ತು. ಇದು ಎಲೆಕ್ಟ್ರಿಕ್‌ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಪ್ರೋತ್ಸಾಹಿಸುತ್ತಿದೆ. 

ಪ್ರಸ್ತುತ, FAME ಇಂಡಿಯಾ ಯೋಜನೆಯ ಹಂತ-ಎರಡನ್ನು 5 ವರ್ಷಗಳ ಅವಧಿಗೆ 2019ರ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗುತ್ತಿತ್ತು. ಇದಕ್ಕಾಗಿ 10,000 ಸಾವಿರ ಕೋಟಿ ರೂ.ಮೀಸಲಿರಿಸಲಾಗಿದೆ.
ಇದು ಸಾರ್ವಜನಿಕ ಮತ್ತು ಹಂಚಿಕೆಯ ಸಾರಿಗೆಯನ್ನು ಎಲೆಕ್ಟ್ರಿಕ್‌ ಆಗಿ ಬದಲಾಯಿಸುವುದುನ್ನು ಬೆಂಬಲಿಸುವುದರ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಸಬ್ಸಿಡಿಗಳ ಮೂಲಕ, 7090 ಇ-ಬಸ್‌ಗಳು, 5 ಲಕ್ಷ ಇ-3 ವೀಲರ್‌ಗಳು, 55,000 ಇ-4 ವೀಲರ್ ಪ್ಯಾಸೆಂಜರ್ ಕಾರುಗಳು ಮತ್ತು 10 ಲಕ್ಷ ಇ-2 ವೀಲರ್‌ಗಳನ್ನು ಬೆಂಬಲಿಸುವ ಗುರಿ ಹೊಂದಿದೆ.

ಇದನ್ನೂ ಓದಿBike Thief 60 ಸೆಕೆಂಡ್‌ನಲ್ಲಿ ರಾಯಲ್ ಎನ್‌ಫೀಲ್ಡ್ ಕಳ್ಳತನ, ಕರಾಮತ್ತು ನೋಡಿ ಪೊಲೀಸರೆ ದಂಗು!

ಈ ಯೋಜನೆಯಡಿಯಲ್ಲಿ, ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಬೆಲೆಯಲ್ಲಿ ಮುಂಗಡ ಕಡಿತದ ರೂಪದಲ್ಲಿ ಪ್ರೋತ್ಸಾಹ ನೀಡಲಾಗುತ್ತದೆ. ಈ ಪ್ರೋತ್ಸಾಹಧನ ಬ್ಯಾಟರಿ ಸಾಮರ್ಥ್ಯವನ್ನು ಆಧರಿಸಿರುತ್ತದೆ. ಅಂದರೆ, ತ್ರಿಚಕ್ರದ ಇವಿಗೆ ಪ್ರತಿ ಕಿಲೋವ್ಯಾಟ್‌ಗೆ 10,000. ನಾಲ್ಕು ಚಕ್ರದ ವಾಹನಗಳಿಗೆ ವಾಹನದ ವೆಚ್ಚದ ಶೇ.20ರಷ್ಟು ಮೊತ್ತ.

ಬ್ಯಾಟರಿ ಎಲೆಕ್ಟ್ರಿಕ್ ವಾಹನಗಳು ಆಟೋಮೊಬೈಲ್‌ಗಳು ಮತ್ತು ಆಟೋ ಕಾಂಪೊನೆಂಟ್‌ಗಳಿಗಾಗಿ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ ಸ್ಕೀಮ್ನ ಅಡಿಯಲ್ಲಿ ಪ್ರೋತ್ಸಾಹಕ್ಕೆ ಅರ್ಹವಾಗಿವೆ. 2021ರ ಮೇ 12 ರಂದು, ದೇಶದಲ್ಲಿ ಬ್ಯಾಟರಿ ಬೆಲೆಗಳನ್ನು ಕಡಿಮೆ ಮಾಡಲು ಸುಧಾರಿತ ರಸಾಯನಶಾಸ್ತ್ರ ಕೋಶ (ಎಸಿಸಿ) ಉತ್ಪಾದನೆಗೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯನ್ನು ಸರ್ಕಾರ ಅನುಮೋದಿಸಿದೆ.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ನೋಂದಣಿ ಪ್ರಮಾಣಪತ್ರದ ವಿತರಣೆ ಅಥವಾ ನವೀಕರಣ ಮತ್ತು ಹೊಸ ನೋಂದಣಿ ಮಾರ್ಕ್ನ ನಿಯೋಜನೆಯ ಉದ್ದೇಶಕ್ಕಾಗಿ ಬ್ಯಾಟರಿ ಚಾಲಿತ ವಾಹನಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ನೀಡಿದೆ.

Latest Videos
Follow Us:
Download App:
  • android
  • ios