userpic
user icon
0 Min read

ಎಲೆಕ್ಟ್ರಿಕ್ ಸ್ಕೂಟರ್ ಕಡಿಮೆ ರೇಂಜ್ ನೀಡ್ತಿದ್ಯಾ? ಇದ್ರ ಬಗ್ಗೆ ಗಮನ ಇರ್ಲಿ

electric two wheeler increase range follow these tips
electric scooter ai

Synopsis

ಮೊದಲೆಲ್ಲ ಚೆನ್ನಾಗಿ ಓಡ್ತಿತ್ತು, ಇತ್ತೀಚಿಗೆ ಬ್ಯಾಟರಿ ಚಾರ್ಜ್ ಬೇಗ ಕಡಿಮೆ ಆಗುತ್ತೆ ಅಂತ ಎಲೆಕ್ಟ್ರಿಕ್ ಸ್ಕೂಟರ್ ಬಳಕೆದಾರರ ಮಾತು ಕೇಳಿರಬಹುದು. ಅದಕ್ಕೆ ನಾನಾ ಕಾರಣ ಇದೆ. ಸ್ಕೂಟರ್ ಖರೀದಿ ಮಾಡಿದ್ಮೇಲೆ ಅದನ್ನು ಮೆಂಟೆನ್ ಮಾಡೋದು ಗೊತ್ತಿರ್ಬೇಕು ಅಲ್ವಾ? 

ದೇಶದಲ್ಲಿ ಎಲೆಕ್ಟ್ರಿಕ್ ವಾಹನ (Electric vehicle)ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಇದೇ ಕಾರಣಕ್ಕೆ ಅನೇಕ ಕಂಪನಿಗಳು ಎಲೆಕ್ಟ್ರಿಕ್ ಸ್ಕೂಟರ್ (Electric scooter), ಬೈಕ್, ಕಾರು ತಯಾರಿಕೆಯಲ್ಲಿ ಆಸಕ್ತಿ ತೋರುತ್ತಿವೆ. ಸದ್ಯ ದ್ವಿಚಕ್ರ ವಾಹನ ಸೆಕ್ಷನ್ ನಲ್ಲಿ ಸಾಕಷ್ಟು ಆಯ್ಕೆ ಇದೆ.  ಕಂಪನಿಗಳು ಮಾರುಕಟ್ಟೆಗೆ ಸುಧಾರಿತ ಮತ್ತು ಸುರಕ್ಷಿತ ಬ್ಯಾಟರಿಗಳನ್ನು ಹೊಂದಿರುವ ವಾಹನಗಳನ್ನು ಬಿಡುಗಡೆ ಮಾಡ್ತಿವೆ.  ಎಲೆಕ್ಟ್ರಿಕ್ ಸ್ಕೂಟರ್ ಬಳಸುವ ಜನರಿಗೆ ಅದನ್ನು ಹೇಗೆ ಬಳಸ್ಬೇಕು, ಬ್ಯಾಟರಿಯನ್ನು ಹೇಗೆ ರಕ್ಷಿಸಬೇಕು ಎನ್ನುವ ಬಗ್ಗೆ ಸೂಕ್ತ ಮಾಹಿತಿ ಇಲ್ಲ. ದೀರ್ಘಕಾಲದವರೆಗೆ ಸ್ಕೂಟರ್ ಬಳಕೆ ಮಾಡ್ತಿದ್ದಂತೆ ಅದ್ರ ರೇಂಜ್ ಕಡಿಮೆಯಾಗ್ತಾ ಬರುತ್ತೆ. ಇದರ ಹಿಂದೆ ಹಲವು ಕಾರಣಗಳಿರಬಹುದು. ಆದರೆ ಕೆಲವು ಪ್ರಮುಖ ವಿಷಯಗಳನ್ನು ನೀವು ಪಾಲಿಸ್ತಾ ಬಂದ್ರೆ  ಉತ್ತಮ ಪರ್ಫಾರ್ಮೆನ್ಸ್ ಸಿಗೋದಲ್ದೆ, ರೇಂಜ್ ಕೂಡ ಹೆಚ್ಚಾಗಲಿದೆ.     

ಎಲೆಕ್ಟ್ರಿಕ್ ಸ್ಕೂಟರ್ ಬಳಸುವವರು ಪಾಲಿಸಬೇಕಾದ ನಿಯಮ : 

ಓವರ್ ಲೋಡ್ ಬೇಡ :  ನಿತ್ಯ ನೀವು ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಓಡಾಡ್ತಿದ್ದು, ಓವರ್ ಲೋಡ್ ಅದಕ್ಕೆ ಹಾಕ್ತೀರಿ ಎಂದಾದ್ರೆ ಇದೇ ಅದನ್ನು ಬಿಡಿ. ನೀವು ಓವರ್ ಲೋಡ್ ಮಾಡೋದ್ರಿಂದ  ವಾಹನದ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಇದರಿಂದ ಬ್ಯಾಟರಿ ವೇಗವಾಗಿ ಖಾಲಿಯಾಗುತ್ತದೆ .  ಅಗತ್ಯವಿರುವಷ್ಟು ಸಾಮಾನುಗಳನ್ನು ಮಾತ್ರ ಲೋಡ್ ಮಾಡಿ.

ವೇಗದ ಬಗ್ಗೆ ಎಚ್ಚರವಿರಲಿ :  ಎಲೆಕ್ಟ್ರಿಕ್  ಸ್ಕೂಟರನ್ನು ಸ್ಥಿರ ವೇಗದಲ್ಲಿ ಓಡಿಸಿ. ಅನಗತ್ಯವಾಗಿ ಅದ್ರ ವೇಗವನ್ನು ಹೆಚ್ಚಿಸಲು ಹೋಗ್ಬೇಡಿ. ನೀವು ಅತಿ ವೇಗದಲ್ಲಿ ಸ್ಕೂಟರ್ ಓಡಿಸೋದ್ರಿಂದ ಬ್ಯಾಟರಿ ವೇಗವಾಗಿ ಕಡಿಮೆ ಆಗುತ್ತದೆ. ಇದ್ರಿಂದ ಕಡಿಮೆ ರೇಂಜ್ ಸಿಗುತ್ತೆ.  ಎಲೆಕ್ಟ್ರಿಕ್ ಸ್ಕೂಟರ್ನ ವೇಗವನ್ನು ಗಂಟೆಗೆ 40-60 ಕಿ.ಮೀ. ಇಲ್ಲಿ ಸ್ಥಿರಗೊಳಿಸಿದ್ರೆ ಉತ್ತಮ.

ಟೈರ್ ಏರ್ ಬಗ್ಗೆ ಗಮನ ಇರಲಿ : ಎಲೆಕ್ಟ್ರಿಕ್ ಸ್ಕೂಟರ್ ಟೈರ್ ಬಗ್ಗೆಯೂ ನೀವು ಗಮನ ಇಟ್ಟಿರಬೇಕು. ಎರಡೂ ಟೈರ್ಗಳಲ್ಲಿ ಸರಿಯಾದ ಏರ್ ಇರುವಂತೆ ನೋಡಿಕೊಳ್ಳಬೇಕು.   ಸರಿಯಾದ ಏರ್ ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಸರಿಯಾದ ರೇಂಜ್ ನೀಡುತ್ತದೆ.  ವಾರಕ್ಕೊಮ್ಮೆ ಟೈರ್ ಏರ್ ಪರಿಶೀಲನೆ ಮಾಡಿ. ಪ್ರತಿದಿನ ಬೈಕ್ ನಲ್ಲಿ ಓಡಾಡುತ್ತಿದ್ದರೆ  ವಾರಕ್ಕೆ ಎರಡು ಬಾರಿ ಟೈರ್ಗಳಲ್ಲಿನ ಗಾಳಿಯನ್ನು ಪರಿಶೀಲಿಸಿ. ಸಾಧ್ಯವಾದ್ರೆ ಸ್ಕೂಟರ್ ಅನ್ನು ಇಕೋ ಮೋಡ್ನಲ್ಲಿ ಮಾತ್ರ  ಓಡ್ಸಿ. ಇದು ಶಕ್ತಿಯ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಉತ್ತಮ ರೇಂಜ್ ನೀಡುತ್ತದೆ. 

ನಿಯಮಿತವಾಗಿ ಬ್ಯಾಟರಿ ಚೆಕ್ ಮಾಡಿ : ವಿದ್ಯುತ್ ಚಾಲಿತ ದ್ವಿಚಕ್ರ ವಾಹನವನ್ನು ಸರ್ವೀಸ್ ಮಾಡಿಸುವುದು ಬಹಳ ಮುಖ್ಯ. ಅದರ ಬ್ಯಾಟರಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು.  ಬ್ಯಾಟರಿಯನ್ನು ಪ್ರತಿ ಬಾರಿ ಶೇಕಡಾ  80 ರಿಂದ 90 ರವರೆಗೆ ಮಾತ್ರ ಚಾರ್ಜ್ ಮಾಡಿ. ಹೀಗೆ ಮಾಡಿದ್ರೆ ಬ್ಯಾಟರಿ ಬಾಳಿಕೆ ಹೆಚ್ಚಾಗುತ್ತೆ.   ಸ್ಕೂಟರ್  ರೇಂಜ್ ಕೂಡ ಚೆನ್ನಾಗಿರುತ್ತೆ. ಹಾಗೆಯೇ ಬ್ಯಾಟರಿ ಚಾರ್ಜ್ ಖಾಲಿಯಾಗುವವರೆಗೆ ಕಾಯಬೇಡಿ. ಬ್ಯಾಟರಿಯನ್ನು ಸರಿಯಾಗಿ ನಿರ್ವಹಿಸಿದ್ರೆ ಅದ್ರ ಸಾಮರ್ಥ್ಯ ಹಾಗೂ ಜೀವಿತಾವಧಿ ಹೆಚ್ಚು. 

ಸರಿಯಾದ ರೂಟ್ ಆಯ್ಕೆ ಮಾಡಿಕೊಳ್ಳಿ : ನೀವು ಎಲ್ಲಿ ವಾಹನ ಓಡಿಸ್ತಿರಿ ಎನ್ನುವುದ್ರ ಮೇಲೆ ನಿಮ್ಮ ಸ್ಕೂಟರ್ ಬ್ಯಾಟರಿ ಎಷ್ಟು ಬಾಳಿಗೆ ಬರುತ್ತೆ ಅನ್ನೋದನ್ನು ನಿರ್ಧರಿಸಬಹುದು. ಹೆಚ್ಚು ಸಮಯ ಸ್ಕೂಟರ್ ಚಾರ್ಜ್ ನಲ್ಲಿ ಇರ್ಬೇಕು ಅಂದ್ರೆ ಕಡಿಮೆ ಟ್ರಾಫಿಕ್ ಜಾಮ್ ಇರುವ ಮಾರ್ಗದಲ್ಲಿ ನಿಮ್ಮ ಸ್ಕೂಟಿಯನ್ನು ತೆಗೆದುಕೊಂಡು ಹೋಗಿ. ಯಾವಾಗಲೂ ಸುಗಮ ಮತ್ತು ಬೇಗ ತಲುಪಬಹುದಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಿ.   

Download App

Latest Videos