Simple Scooter ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಡೆಲಿವರಿ ದಿನಾಂಕ ಪ್ರಕಟ, 30 ಸಾವಿರ ಬುಕಿಂಗ್!
- ಬೆಂಗಳೂರು ಮೂಲಕ ಸಿಂಪಲ್ ಎನರ್ಜಿಯ ಎಲೆಕ್ಟ್ರಿಕ್ ಸ್ಕೂಟರ್
- 203 ಕಿ.ಲೋಮೀಟರ್ ಮೈಲೇಜ್ ಸಾಮರ್ಥ್ಯದ ಸ್ಕೂಟರ್
- ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1.09 ಲಕ್ಷ ರೂಪಾಯಿ, ಡೆಲಿವರಿ ದಿನಾಂಕ ಘೋಷಣೆ
ಬೆಂಗಳೂರು(ಜ.12): ದೇಶದಲ್ಲಿ ಬಿಡುಗಡೆಯಾದ, ಇನ್ನು ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಸ್ಕೂಟರ್ ಬೈಕಿ ಭಾರಿ ಸದ್ದು ಮಾಡಿರುವ ಸ್ಕೂಟರ್ ಸಿಂಪಲ್ ಒನ್. ಇದು ಬೆಂಗಳೂರು ಮೂಲದ ಸ್ಟಾರ್ಟ್ಆಪ್ ಕಂಪನಿ ಅಭಿವೃದ್ಧಿಪಡಿಸಿರುವ ಸ್ಕೂಟರ್. ಗರಿಷ್ಠ ಮೈಲೇಜ್ ದಾಖಲೆ ಹೊಂದಿರುವ ಈ ಸ್ಕೂಟರ್ ಜೂನ್, 2022ರಿಂದ ಡೆಲಿವರಿ ಆರಂಭಗೊಳ್ಳಲಿದೆ.
ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬುಕ್ ಮಾಡಿದ ಗ್ರಾಹಕರು ಸ್ಕೂಟರ್‌ಗಾಗಿ ಕಾಯುತ್ತಿದ್ದಾರೆ. ಕೊಂಚ ವಿಳಂಬವಾದರೂ ಇದೀಗ ಸಿಂಪಲ್ ಒನ್ ಜೂನ್ ತಿಂಗಳ ಮೊದಲಿನಿಂದ ಗ್ರಾಹಕರ ಕೈಸೇರಲಿದೆ. ಈ ಮೂಲಕ ದೇಶದಲ್ಲಿ ಮತ್ತೊಂದು ಎಲೆಕ್ಟ್ರಿಕ್ ಸ್ಕೂಟರ್ ಸಂಚಲನ ಸೃಷ್ಟಿಸಲು ಸಜ್ಜಾಗಿದೆ. ನೂತನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಹಲವು ವಿಶೇಷತೆಗಳನ್ನು ಹೊಂದಿದೆ.
ಒಂದು ಬಾರಿ ಚಾರ್ಜ್ ಮಾಡಿದರೆ 203 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇಕೊ ಮೊಡ್‌ನಲ್ಲಿ 203 ಕಿ.ಮೀ ಮೈಲೇಜ್ ಆದರೆ ಗರಿಷ್ಠ ಮೈಲೇಜ್ 236 ಕಿ.ಮೀ. ಇನ್ನು ಪ್ರಾಯೋಗಿಕವಾಗಿ ಈ ಮೈಲೇಜ್ ಸಿಗದಿದ್ದರೂ ಕನಿಷ್ಠ 160 ರಿಂದ 180 ಕಿ.ಮೀ ಮೈಲೇದ್ ಸಿಗುವ ಸಾಧ್ಯತೆ ಇದೆ. ಇನ್ನು ಇದರ ಬೆಲೆ ಒಲಾ ಸೇರಿದಂತೆ ಇತರ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಕಡಿಮೆ. ಅಂದರೆ 1.09 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ಸಿಂಪಲ್ ಒನ್ ಸ್ಕೂಟರ್ ಕಳೆದ ಆಗಸ್ಟ್ 15 ರಂದು ಬಿಡುಗಡೆಯಾಗಿದೆ. ಆದರೆ ಹಲವು ಕಾರಣಗಳಿಂದ ಸ್ಕೂಟರ್ ಉತ್ಪಾದನೆ ವಿಳಂಬವಾಗಿತ್ತು. ಇದೀಗ ಸಿಂಪಲ್ ಒನ್ ಸ್ಕೂಟರ್ 30,000 ಬುಕಿಂಗ್ ಕಂಡಿದೆ. ಈ ಸ್ಕೂಟರ್ ಮೈಲೇಜ್, ಬೆಲೆ ಹಾಾಗೂ ಸಾಮರ್ಥ್ಯ ಗ್ರಾಹಕರನ್ನು ಹೆಚ್ಚು ಆಕರ್ಷಿಸಿದೆ. ಸ್ಕೂಟರ್ ಗರಿಷ್ಠ ವೇಗ 105 ಕಿ.ಮೀ ಪ್ರತಿ ಗಂಟೆಗೆ. ಇನ್ನು 2.95 ಸೆಕೆಂಡ್‌ನಲ್ಲಿ 100 ಕಿ.ಮೀ ವೇಗ ಪಡೆದುಕೊಳ್ಳಲಿದೆ.
Simple One 203KM ಮೈಲೇಜ್ ನೀಡಬಲ್ಲ ಬೆಂಗಳೂರಿನ ಸಿಂಪಲ್ ಎನರ್ಜಿ ಸ್ಕೂಟರ್ ಉತ್ಪಾದನೆ ಆರಂಭ!
ಇದರ ಬೂಟ್ ಸ್ಪೇಸ್ 30 ಲೀಟರ್. ಹೆಚ್ಚು ಸ್ಥಳಾವಕಾಶ ಹೊಂದಿರುವ ಬೂಟ್ ಸ್ಪೇಸ್ ಹೊಂದಿದೆ. ಇನ್ನು ಸ್ಮಾರ್ಟ್ ಡ್ಯಾಶ್ ಬೋರ್ಡ್ ಸೇರಿದಂತೆ ಹಲವು ಫೀಚರ್ಸ್ ಈ ಸ್ಕೂಟರ್‌ನಲ್ಲಿದೆ. ಸಿಂಪಲ್ ಒನ್ ಸ್ಕೂಟರ್‌ನಲ್ಲಿ ಭವಿಷ್ಯದ ತಂತ್ರಜ್ಞಾನ ಬಳಸಲಾಗಿದೆ. ಹೀಗಾಗಿ ಇದರ ಬ್ಯಾಟರಿ ಪ್ಯಾಕ್‌ಅಪ್, ಎಲೆಕ್ಟ್ರಿಕ್ ಮೋಟಾರ್, ಬ್ಯಾಟರಿ ಬಳಕೆ ಸೇರಿದಂತೆ ಹಲವು ಸೂಕ್ಷ್ಮ ವಿಚಾರಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಇದರಿಂದ ಗರಿಷ್ಠ ಮೈಲೇಜ್ ಹಾಗೂ ಹೆಚ್ಚಿನ ಬ್ಯಾಟರಿ ಬಾಳಿಕೆ ಬರಲಿದೆ ಎಂದು ಸಿಂಪಲ್ ಎನರ್ಜಿ ಸಂಸ್ಥಾಪಕ ಸುಹಾಸ್ ರಾಜ್‌ಕುಮಾರ್ ಹೇಳಿದ್ದಾರೆ.
Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!
ಸಿಂಪಲ್ ಎನರ್ಜಿ ಉತ್ಪಾದನೆ ವಿಳಂಭವಾಗಿದೆ. ಆದರೆ ಹೊಸೂರಿನಲ್ಲಿರುವ ಸಿಂಪಲ್ ಎನರ್ಜಿ ಘಟಕದಲ್ಲಿ ಸ್ಕೂಟರ್ ಉತ್ಪಾದನೆಯಾಗುತ್ತಿದೆ. ಈ ಘಟಕದಲ್ಲಿ ವರ್ಷಕ್ಕೆ 10 ಲಕ್ಷ ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಮುಂದಿನ ವಾರದಿಂದ ಹೂಸೂರು ಘಟಕದಲ್ಲಿ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಗೊಳ್ಳಲಿದೆ. ಇದರ ಜೊತೆಗೆ ತಮಿಳುನಾಡಿನ ಧರ್ಮಪುರಿಯಲ್ಲಿ 600 ಎಕರೆ ಪ್ರದೇಶದಲ್ಲಿ ಹೊಸ ಘಟಕ ನಿರ್ಮಾಣಗೊಳ್ಳುತ್ತಿದೆ. ಈ ಘಟಕದಲ್ಲಿ ವಾರ್ಷಿಕವಾಗಿ 12.5 ಮಿಲಿಯನ್ ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.
ಭಾರತದಲ್ಲಿ ಸದ್ಯ ಬೌನ್ಸ್, ಓಲಾ, ಒಕಿನವಾ ಸೇರಿದಂತೆ 20ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಅತೀ ಕಡಿಮೆ ಬೆಲೆಯಿಂದ 2 ಲಕ್ಷ ರೂಪಾಯಿ ಅಧಿಕ ಬೆಲೆಯ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಬೈಕ್ ಕೂಡ ಹೆಚ್ಚು ಬಿಡುಗಡೆಯಾಗುತ್ತಿದೆ. ಈ ಮೂಲಕ ವಿಶ್ವದಲ್ಲೇ ಅತೀ ಹೆಚ್ಚು ಎಲೆಕ್ಟ್ರಿಕ್ ಬೈಕ್ ಲಭ್ಯವಿರುವ ಹಾಗೂ ಉತ್ಪಾದನೆಯಾಗುತ್ತಿರುವ ತಾಣವಾಗಿ ಭಾರತ ಹೊರಹೊಮ್ಮಿದೆ