ಬೆಂಗಳೂರು(ಡಿ.16): ವಿಶ್ವದ ಜನಪ್ರಿಯ ಭಾರತೀಯ ಮೋಟರ್ ಸೈಕಲ್ ಕಂಪನಿಯಾಗಿರುವ ಬಜಾಜ್ ಆಟೋ, ತನ್ನ ಹೊಚ್ಚ ಹೊಸ ಪ್ಲಾಟಿನಾ 100 ಕಿಕ್ ಸ್ಟಾರ್ಟ್ (KS)ಬಿಡುಗಡೆ ಮಾಡಿದೆ. ಪ್ಲಾಟಿನ ಬ್ರ್ಯಾಂಡ್‍ನ ಸಾಬೀತಾಗಿರುವ `ಕಂಫೋರ್ಟಿಕ್ ತಂತ್ರಜ್ಞಾನ’ ನೊಂದಿಗೆ ಅತ್ಯುತ್ತಮವಾದ ಆರಾಮವನ್ನು ನೀಡುವ ಬೈಕ್ ಇದಾಗಿದೆ. ಇದರಲ್ಲಿನ ಸ್ಪ್ರಿಂಗ್ ಆನ್ ಸ್ಪ್ರಿಂಗ್ ನೈಟ್ರಾಕ್ಸ್ ಅನ್ನು ಹೊಂದಿದ್ದು, ದೂರದ ಪ್ರಯಾಣಗಳಲ್ಲಿ ಶೇ.15 ರಷ್ಟು ಹೆಚ್ಚು ಆರಾಮದಾಯಕತೆಯನ್ನು ನೀಡುತ್ತದೆ. ಬೈಕ್ ಸವಾರರು ಮತ್ತು ಹಿಂಬದಿ ಸವಾರರಿಬ್ಬರಿಗೂ ಆರಾಮವನ್ನು ನೀಡಲಿದ್ದು, ಇದರಲ್ಲಿನ ಟ್ಯೂಬ್‍ಲೆಸ್ ಟೈರ್‍ಗಳು ಚಾಲನೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುವ ಭರವಸೆಯನ್ನು ನೀಡುತ್ತದೆ.

ಬಜಾಜ್ ಪಲ್ಸರ್ 125 ಡಬಲ್ ಸೀಟ್ ಬೈಕ್ ಬಿಡುಗಡೆ!.

ಈ ಹೊಸ ಪ್ಲಾಟಿನಾ 100KS  ತನ್ನ ವಿಶಿಷ್ಟವಾದ ಮತ್ತು ಸೊಗಸಾದ ಹ್ಯಾಂಡ್ ಗಾರ್ಡ್‍ಗಳಿಂದಾಗಿ ರೀಫ್ರೆಶ್ ನೋಟವನ್ನು ಹೊಂದಿದ್ದು, ಎಲ್ಲರನ್ನೂ ಆಕರ್ಷಿಸುತ್ತದೆ. ಅತ್ಯುತ್ತಮ ರಕ್ಷಣಾತ್ಮಕ ವೈಶಿಷ್ಟ್ಯತೆಗಳನ್ನು ಹೊಂದಿರುವ ಈ ಬೈಕ್‍ನ ಬೆಲೆ 51,667 ರೂಪಾಯಿಗಳಾಗಿದೆ(ಎಕ್ಸ್-ಶೋರೂಂ ಬೆಲೆ). ಈ ಹೊಸ ಪ್ಲಾಟಿನಾ 100(KS)  ಎರಡು ಆಕರ್ಷಕವಾದ ಬಣ್ಣಗಳಾದ ಕಾಕ್‍ಟೈಲ್ ವೈನ್ ರೆಡ್ & ಎಬೊನಿ ಬ್ಲ್ಯಾಕ್ ವಿತ್ ಸಿಲ್ವರ್ ಬಣ್ಣದಲ್ಲಿ ಬರಲಿದ್ದು, ಭಾರತದಲ್ಲಿನ ಎಲ್ಲಾ ಬಜಾಜ್ ಆಟೋ ಡೀಲರ್‍ಶಿಪ್‍ಗಳಲ್ಲಿ ಲಭ್ಯವಿದೆ.

ಹೊಸ ಪ್ಲಾಟಿನಾ 100KS ಹಲವು ವೈಶಿಷ್ಟ್ಯತೆಗಳನ್ನು ಹೊಂದಿದೆ:

  • ಅಧಿಕ ಶಾಕ್ ಡ್ಯಾಂಪನಿಂಗ್‍ಗೆ ಸ್ಪ್ರಿಂಗ್ ಆನ್ ಸ್ಪ್ರಿಂಗ್ ನೈಟ್ರೊಕ್ಸ್ ಸಸ್ಪೆನ್ಷನ್.
  • ಶ್ರಮವಿಲ್ಲದ ರೈಡ್‍ಗೆ ನೆರವಾಗುವ ಟ್ಯೂಬ್‍ಲೆಸ್ ಟೈರ್‍ಗಳು
  • ಹೆಚ್ಚುವರಿ ಆರಾಮದಾಯಕತೆಗೆ ಹ್ಯಾಂಡ್ ಗಾರ್ಡ್‍ಗಳು
  • 20% ಉದ್ದದ ಫ್ರಂಟ್ & ರಿಯರ್ ಸಸ್ಪೆನ್ಷನ್ ಇರುವುದರಿಂದ ಜರ್ಕ್‍ಗಳನ್ನು ಕಡಿಮೆ ಮಾಡುತ್ತದೆ.
  • ರೈಡರ್ ಮತ್ತು ಹಿಂಬದಿ ಸವಾರರಿಗೆ ಕ್ವಿಲ್ಟೆಡ್ ಸೀಟ್ ಆರಾಮವನ್ನು ನೀಡುತ್ತದೆ.
  • ಎಲ್‍ಇಡಿ ಡಿಆರ್‍ಎಲ್ ಹೆಡ್‍ಲ್ಯಾಂಪ್‍ಗಳು ಹೆಚ್ಚು ಸ್ಟೈಲ್ ಆಗಿದ್ದು, ಸ್ಪಷ್ಟವಾದ ಗೋಚರತೆಯನ್ನು ನೀಡುತ್ತವೆ.
  • ಬಿಗಿಯಾದ ಕಂಫೊರ್ಟೆಬಲ್ ಗ್ರಿಪ್‍ಗೆ ರಕ್ಷಣಾತ್ಮಕವಾದ ಟ್ಯಾಂಕ್ ಪ್ಯಾಡ್
  • ಹೊಸದಾಗಿ ವಿನ್ಯಾಸಗೊಳಿಸಲಾಗಿರುವ ಇಂಡಿಕೇಟರ್‍ಗಳು ಮತ್ತು ಮಿರರ್‍ಗಳು
  • ಸುಪೀರಿಯರ್ ಗ್ರಿಪ್‍ಗಾಗಿ ವಿಸ್ತಾರವಾದ ರಬ್ಬರ್ ಫುಟ್‍ಪ್ಯಾಡ್‍ಗಳು

ಬ್ರ್ಯಾಂಡ್ ಪ್ಲಾಟಿನಾ ತನ್ನ ಸರಿಸಾಟಿಯಿಲ್ಲದ ಆರಾಮದಾಯಕತೆಯ ವೈಶಿಷ್ಟ್ಯತೆಯನ್ನು ಹೊಂದಿದೆ. ಇದು ಬೈಕ್ ಪ್ರಿಯರ ಅತ್ಯುತ್ತಮ ಮೋಟರ್ ಸೈಕಲ್‍ಗಳಲ್ಲಿ ಒಂದಾಗಿದೆ. ನಮ್ಮ ಪ್ಲಾಟಿನಾ ಶ್ರೇಣಿಯು ಕಳೆದ 15 ವರ್ಷಗಳಲ್ಲಿ 72 ಲಕ್ಷ ಮೋಟರ್ ಸೈಕಲ್‍ಗಳನ್ನು ಮಾರಾಟ ಮಾಡಲಾಗಿದೆ. ಹೊಸ ಪ್ಲಾಟಿನಾ 100ಏS ಪ್ಲಾಟಿನಾ ಶ್ರೇಣಿಗೆ ಉತ್ತಮ ಸೇರ್ಪಡೆಯಾಗಿದೆ. ಇದು ಅಪ್ರತಿಮವಾದ ಆರಾಮ, ಹೆಚ್ಚಿನ ವೈಶಿಷ್ಟ್ಯಗಳು ಹಾಗೂ ಉತ್ತಮ ಮೈಲೇಜ್ ನೀಡುವ ಮೋಟರ್ ಸೈಕಲ್ ಆಗಿದೆ ಎಂದು ಬಜಾಜ್ ಆಟೋ ಲಿಮಿಟೆಡ್‍ನ ಮಾರುಕಟ್ಟೆ ಮುಖ್ಯಸ್ಥ ನಾರಾಯಣ ಸುಂದರರಾಮನ್ ಹೇಳಿದರು.