ವಾಹನ ಖರೀದಿಸುವ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಬಜಾಜ್ ಚೇತಕ್ ಬೈಕ್ ಬೆಲೆ ಭಾರಿ ಏರಿಕೆ ಹೆಚ್ಚಾಯ್ತು ಎಲೆಕ್ಟ್ರಿಕ್ ಸ್ಕೂಟರ್‌ ಬೇಡಿಕೆ

ನವದೆಹಲಿ(ಜು.10): ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗಿದೆ. ಇತ್ತ ಕಚ್ಚಾವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಹೀಗಾಗಿ ಬಹುತೇಕ ಆಟೋಮೊಬೈಲ್ ಕಂಪನಿಗಳು ವಾಹನಗಳ ಬೆಲೆ ಏರಿಕೆ ಮಾಡುತ್ತಿದೆ. ಇದೀಗ ಬಜಾಜ್ ಸರದಿ. ಬಜಾಜ್ ಚೇತಕ್ ಸ್ಕೂಟರ್ ಬೆಲೆ ಒಂದೇ ಸಮನೆ 13,000 ರೂಪಾಯಿ ಹೆಚ್ಚಳವಾಗಿದೆ. ಇದು ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲು ಇಚ್ಚಿಸಿದ ಗ್ರಾಹಕರಿಗೆ ತೀವ್ರ ತಲೆನೋವು ತಂದಿದೆ.

2019ರಲ್ಲಿ ಬಜಾಜ್ ತನ್ನ ಐಕಾನಿಕ್ ಸ್ಕೂಟರ್ ಚೇತಕ್ ಹೆಸರಿನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತ್ತು. ಇದುವರಗೆ 14,000ಕ್ಕೂ ಹೆಚ್ಚು ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವಾಗಿದೆ. ಇನ್ನು 16,000ಕ್ಕೂ ಹೆಚ್ಚು ಬುಕಿಂಗ್ ಆರ್ಡರ್ ಉತ್ಪಾದನೆ ನಡೆಯುತ್ತಿದೆ. ಬೇಡಿಕೆ ಹೆಚ್ಚಾಗುತ್ತಿರುವ ಕಾರಣ ಬಜಾಜ್ ಪುಣೆಯ ಅಕುರ್ಡಿ ಬಳಿ ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಉತ್ಪದನಾ ಘಟಕ ಆರಂಭಿಸಿದೆ. ಇದರ ಬೆನಲ್ಲೇ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದೆ.

Electric Scooter ಹೊಸ 6 ನಗರ ಸೇರಿದಂತೆ 20 ನಗರಗಳಲ್ಲಿ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ, 2,000 ರೂಗೆ ಬುಕಿಂಗ್!

ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಇದೀಗ 1,54,181 ರೂಪಾಯಿ(ಎಕ್ಸ್ ಶೋ ರೂಂ) ಆಗಿದೆ. ಈ ಮೊದಲು 1,41,440 ರೂಪಾಯಿ(ಎಕ್ಸ್ ಶೋ ರೂಂ) ಆಗಿತ್ತು. ಶೇಕಡಾ 9.01 ರಷ್ಟು ಬೆಲೆ ಹೆಚ್ಚಳವಾಗಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ ಸ್ಕೂಟರ್ ದರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಬಜಾಜ್ 750ಕೋಟಿ ರೂಪಾಯಿ ಹೂಡಿಕೆ ಮಾಡಿ ಹೊಸ ಘಟಕ ಆರಂಭಿಸಿದೆ. 

ಮೂರು ದಶಕಗಳ ಕಾಲ ಆಟೋಮೊಬೈಲ್‌ ಇಂಡಸ್ಟ್ರಿಯ ಓಡುವ ಕುದುರೆ ಎಂದೇ ಪ್ರಸಿದ್ಧವಾಗಿದ್ದ ಬಜಾಜ್‌ ಚೇತಕ್‌ ಸ್ಕೂಟರ್‌ ಮೂರು ವರ್ಷಗಳ ಹಿಂದೆ ಎಲೆಕ್ಟ್ರಿಕ್‌ ಸ್ಕೂಟರ್‌ ರೂಪದಲ್ಲಿ ಮತ್ತೆ ಮಾರುಕಟ್ಟೆಗೆ ಅಡಿ ಇಟ್ಟಿತು. ಇದೀಗ ಚೇತಕ್‌ ಇವಿ ಸ್ಕೂಟರ್‌ ಉತ್ಪಾದಿಸುವ ಹೊಸ ಘಟಕವೊಂದು ಉದ್ಘಾಟನೆಗೊಂಡಿದೆ. ಪುಣೆಯ ಅಕುರ್ಡಿಯಲ್ಲಿ ಆರಂಭವಾಗಿರುವ ಈ ಘಟಕ ವರ್ಷಕ್ಕೆ 5 ಲಕ್ಷ ಸ್ಕೂಟರ್‌ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಬಜಾಜ್‌ ಗ್ರೂಫ್ಸ್‌ನ ಅಧ್ಯಕ್ಷರಾಗಿದ್ದ ದಿ.ರಾಹುಲ್‌ ಬಜಾಜ್‌ ಅವರ ಜನ್ಮದಿನದಂದು ಈ ಘಟಕ ಉದ್ಘಾಟನೆಗೊಂಡಿತು. 70 ರ ದಶಕದಲ್ಲಿ ಚೇತಕ್‌ ಸ್ಕೂಟರ್‌ ಆರಂಭವಾದ ಜಾಗದಲ್ಲೇ ಈ ಹೊಸ ಘಟಕ ನಿರ್ಮಾಣವಾಗಿದೆ.

Electric Scooter ಹುಬ್ಬಳ್ಳಿಯಲ್ಲಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಆರಂಭ, ಕೇವಲ 2,000 ರೂ!

 ಒಮ್ಮೆ ಚಾಜ್‌ರ್‍ ಮಾಡಿದರೆ ಎಕಾನಮಿ ಮೋಡ್‌ನಲ್ಲಿ 95 ಕಿ.ಮೀ. ಚಲಿಸುತ್ತದೆ. ಸ್ಪೋಟ್ಸ್‌ರ್‍ ಮೋಡ್‌ನಲ್ಲಿ 85 ಕಿ.ಮೀ. ದೂರ ಸಾಗಲಿದೆ. 3 kwh ಬ್ಯಾಟರಿ ಹೊಂದಿದೆ. 5 ತಾಸುಗಳಲ್ಲಿ ಇದು ಚಾರ್ಜ್ ಆಗಲಿದೆ. 1 ಗಂಟೆಯಲ್ಲಿ 25% ಚಾರ್ಜ್ ಮಾಡಬಹುದಾಗಿದೆ. ಸಂಪೂರ್ಣ ಮೆಟಲ್‌ ಬಾಡಿ ಹೊಂದಿರುವ ದೇಶದ ಮೊದಲ ಸ್ಕೂಟರ್‌ ಇದಾಗಿದ್ದು, ಸ್ಕೂಟರ್‌ಗೆಂದೇ ಆ್ಯಪ್‌ ವಿನ್ಯಾಸಗೊಳಿಸಲಾಗಿದೆ. ಚಾರ್ಜಿಂಗ್‌, ಸ್ಥಳ ಎಲ್ಲವನ್ನೂ ಅದು ತೋರಿಸುತ್ತದೆ. ಬ್ರೇಕ್‌ ಅದುಮಿದಾಗ ಸೃಷ್ಟಿಯಾಗುವ ಬಿಸಿಯನ್ನು ಚಲನಶಕ್ತಿಯಾಗಿ ಪರಿವರ್ತಿಸುತ್ತದೆ. ಸ್ಕೂಟರ್‌ ಖರೀದಿಸುವ ಗ್ರಾಹಕರ ಮನೆಯಲ್ಲಿ ಕಂಪನಿಯೇ ಚಾರ್ಜರ್‌ ಅಳವಡಿಸಿಕೊಡುತ್ತದೆ. ಈ ಸ್ಕೂಟರ್‌ನಲ್ಲಿ ರಿವರ್ಸ್‌ ಗೇರ್‌ನಂತಹ ಹೊಸ ಅಂಶಗಳು ಇವೆ. ಸ್ಕೂಟರ್‌ಗೆ 3 ವರ್ಷ ಅಥವಾ 50 ಸಾವಿರ ಕಿ.ಮೀ.ವರೆಗೆ ವಾರಂಟಿ ಇದೆ. 3 ಸರ್ವಿಸ್‌ ಉಚಿತ ನೀಡಲಾಗಿದೆ.