ದಸರಾ ಹಬ್ಬದ ಪ್ರಯುಕ್ತ ಬಜಾಜ್ ಇದೀಗ ತನ್ನ ಎಲ್ಲಾ ಮಾಡೆಲ್ ಪಲ್ಸರ್ ಬೈಕ್‌ಗೆ ಭಾರಿ ಡಿಸ್ಕೌಂಟ್ ಘೋಷಿಸಿದೆ. ಇದರ ಪರಿಣಾಮ ಇದೀಗ ಬಜಾಜ್ ಪಲ್ಸರ್ ಕೈಗೆಟುಕುವ ದರದಲ್ಲಿ ಲಭ್ಯವಿದೆ.

ನವದೆಹಲಿ(ಅ.06) ದಸರಾ ಹಬ್ಬದ ಸಂಭ್ರಮದಲ್ಲಿ ಹಲವು ಆಟೋಮೊಬೈಲ್ ಕಂಪನಿಗಳು ಡಿಸ್ಕೌಂಟ್ ಸೇರಿದಂತೆ ಹಲವು ಕೊಡುಗೆ ಘೋಷಿಸಿದೆ. ಇದೀಗ ಬಜಾಜ್ ತನ್ನ ಜನಪ್ರಿಯ ಪಲ್ಸರ್ ಬೈಕ್‌ಗಳ ಮೇಲೆ ಒಟ್ಟು 10,000 ರೂಪಾಯಿ ಡಿಸ್ಕೌಂಟ್ ಆಫರ್ ನೀಡಿದೆ.ಇದು ಪಲ್ಸರ್ ಎನ್160 ಯಿಂದ ಎನ್‌ಎಸ್ 200 ಸೇರಿದಂತೆ ಆಯ್ದ ಪಲ್ಸರ್ ಬೈಕ್‌ಗೆ ಆಫರ್ ಅನ್ವಯವಾಗಲಿದೆ. ಈ ಹಬ್ಬದ ಋತುವಿನಲ್ಲಿ ಬೈಕ್ ಖರೀದಿಸುವ ಗ್ರಾಹಕರು ಈ ವಿಶೇಷ ಡಿಸ್ಕೌಂಟ್ ಆಫರ್ ಪಡೆದುಕೊಳ್ಳಲು ಸಾಧ್ಯವಿದೆ.

ಪಲ್ಸರ್ 125 ಕಾರ್ಬನ್ ಫೈಬರ್, ಎನ್ಎಸ್ 125, ಎನ್150, ಪಲ್ಸರ್ 150, ಪಲ್ಸರ್ ಎನ್160, ಎನ್ಎಸ್ 160, ಎನ್‌ಎಸ್ 200 ಹಾಗೂ ಎನ್250 ಬೈಕ್‌ಗೆ ಒಟ್ಟು 10,000 ರೂಪಾಯಿ ಡಿಸ್ಕೌಂಟ್ ಆಫರ್ ಲಭ್ಯವಿದೆ. ಒಟ್ಟು 10,000 ರೂಪಾಯಿ ಡಿಸ್ಕೌಂಟ್ ಆಫರ್ ಎರಡು ವಿಭಾಗವಾಗಿ ವಿಂಗಡಿಸಲಾಗಿದೆ. ಕೊಡುಗೆ ಅನ್ವಯಿಸುವ ಬೈಕ್ ಖರೀದಿಸುವ ಗ್ರಾಹಕರು ಮೊದಲು 5,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಪಡೆಯಲಿದ್ದಾರೆ.ಇನ್ನು ಗ್ರಾಹಕರು ಪೈನ್ ಲ್ಯಾಬ್ ಮಶೀನ್ ಡೀಲರ್ ಮೂಲಕ ಹೆಚ್‌ಡಿಎಫ್‌ಸಿ ಕ್ರಿಡಿಟ್ ಕಾರ್ಡ್ ಬಳಸಿದರೆ 5,000 ರೂಪಾಯಿ ಕ್ಯಾಶ್‌ಬ್ಯಾಕ್ ಆಫರ್ ಪಡೆಯಲಿದ್ದಾರೆ. ಒಟ್ಟು 10,000 ರೂಪಾಯಿ ಡಿಸ್ಕೌಂಟ್ ಸಿಗಲಿದೆ.

ಬಜಾಜ್ ಫ್ರೀಡಂ ಬೈಕ್‌ಗಿಂತ ಕಡಿಮೆ ಬೆಲೆ, ಮತ್ತೊಂದು CNG ಬೈಕ್‌ ಶೀಘ್ರದಲ್ಲಿ ಬಿಡುಗಡೆ!

ಪಲ್ಸರ್ ಅತ್ಯಂತ ಜನಪ್ರಿಯ ಬೈಕ್. ಈ ಬೈಕ್‌ಗೆ ಭಾರಿ ಬೇಡಿಕೆ ಇದೆ. ಡೀಲರ್‌ಶೀಪ್ ಮಾತ್ರವಲ್ಲ, ಬಜಾಜ್ ವೆಬ್‌ಸೈಟ್ ಮೂಲಕವೂ ಬೈಕ್ ಬುಕ್ ಮಾಡಿಕೊಳ್ಳಬಹುದು. ಇಷ್ಟೇ ಅಲ್ಲ ಬಜಾಜ್ ಪಲ್ಸಾರ್ ಈಗಾಗಲೇ ಅಮೇಜಾನ್ ಹಾಗೂ ಪ್ಲಿಪ್‌ಕಾರ್ಟ್ ಮೂಲಕ ಮಾರಾಟ ಆರಂಭಸಿದೆ. ಇ ಕಾಮರ್ಸ್ ಮೂಲಕ ಕೆಲ ಬ್ಯಾಂಕ್ ಕಾರ್ಡ್ ಆಫರ್ ಲಭ್ಯವಿದೆ.

2024ರಲ್ಲಿ ಪಲ್ಸಾರ್ ಹಲವು ಅಪ್‌ಡೇಟ್ ಮೂಲಕ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಹೆಚ್ಚುವರಿ ಫೀಚರ್ಸ್, ಗ್ರಾಹಕರ ರೈಡ್‌ಗೆ ಅನುಗುಣವಾಗಿ ಹಲವು ಬದಲಾವಣೆ ಮಾಡಲಾಗಿದೆ. 2024ರಲ್ಲಿ ಬಜಾಜ್ ಪಲ್ಸಾರ್ ಭಾರಿ ಬೇಡಿಕೆ ಪಡದುಕೊಂಡಿದೆ. ಇದೀಗ ಆಫರ್ ಮೂಲಕ ಬಜಾಜ್ ಮಾರಾಟದಲ್ಲೂ ಗಣನೀಯ ಏರಿಕೆ ಕಾಣುವ ವಿಶ್ವಾಸವಿದೆ ಎಂದು ಬಜಾಜ್ ಬ್ಯೂಸಿನೆಟ್ ಯೂನಿಟ್ ಅಧ್ಯಕ್ಷ ಸಾಗರ್ ಖಂಡೆ ಹೇಳಿದ್ದಾರೆ.

ಬಜಾಜ್ ಪಲ್ಸರ್ ಬೈಕ್ ಮೇಲೆ ಡಿಸ್ಕೌಂಟ್ ಆಫರ್‌ನಿಂದ ಬೈಕ್ ಪ್ರಿಯರು ಸಂತಸಗೊಂಡಿದ್ದಾರೆ. ಈ ಕುರಿತು ಹಲವು ವಿಚಾರಣೆ ಕರೆಗಳು ಬರುತ್ತಿದೆ. ಬುಕಿಂಗ್ ಪ್ರಮಾಣ ಹೆಚ್ಚಾಗಿದೆ. ಇಷ್ಟೇ ಅಲ್ಲ ಶೀಘ್ರದಲ್ಲೇ ಹೊಸ ಬೈಕ್ ಮಾರುಕಟ್ಟೆಗೆ ಪ್ರವೇಶಿಸಲಿದೆ ಎಂದು ಸಾರಂಗ ಖಾನಡೆ ಹೇಳಿದ್ದಾರೆ.

ಫಿಕ್ಸೆಡ್ ಡೆಪಾಸಿಟ್ ಉಳಿತಾಯ ನಿಮ್ಮನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುತ್ತಾ?