Asianet Suvarna News Asianet Suvarna News

Auto Expo 2023 ಹೆಚ್ಚು ಸ್ಪೋರ್ಟೀವ್, ಟಾರ್ಕ್ ಕ್ರಾಟೋಸ್ X ಎಲೆಕ್ಟ್ರಿಕ್ ಬೈಕ್ ಅನಾವರಣ!

ಟಾರ್ಕ್ ಮೋಟಾರ್ಸ್ ಇದೀಗ ಹೊಚ್ಚ ಹೊಸ ಕ್ರಾಟೋಸ್ ಎಲೆಕ್ಟ್ರಿಕ್ ಬೈಕ್ ಅನಾವರಣ ಮಾಡಿದೆ. ಪೆಟ್ರೋಲ್ ಬೈಕ್ ರೀತಿ ಅತ್ಯಂತ ಆಕರ್ಷಕ ಬೈಕ್ ಇದಾಗಿದ್ದು, ಹೈ ಪರ್ಫಾಮೆನ್ಸ್ ನೀಡಲಿದೆ. ಈ ಬೈಕ್ ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡಿದೆ.

Auto Expo 2023 TORK Motors unveiled all new electric motorcycle Kratos X with faster and better performance ckm
Author
First Published Jan 11, 2023, 7:42 PM IST

ನವದೆಹಲಿ(ಜ.11)  ಭಾರತದ ಮೊದಲ ಎಲೆಕ್ಟ್ರಿಕ್ ಮೋಟಾರ್ಸೈಕಲ್ ತಯಾರಕ ಟಾರ್ಕ್ ಮೋಟಾರ್ಸ್ ಹೊಸ ಎಲೆಕ್ಟ್ರಿಕ್ ಬೈಕ್ ಕಾಟ್ರೋಸ್‌ x  ಅನಾವಾರಣ ಮಾಡಿದೆ. ದೆಹಲಿಯ ಆಟೋ ಎಕ್ಸ್‌ಪೋ 2023ರಲ್ಲಿ ಈ ಇವಿ ಬೈಕ್ ಅನಾವರಣಗೊಂಡಿದೆ. ಕಾಟ್ರೋಸ್‌ x  ಅತ್ಯುತ್ತಮ ದರ್ಜೆಯ ತಾಂತ್ರಿಕ ವೈಶಿಷ್ಟ್ಯಗಳು ಮತ್ತು ವಿನ್ಯಾಸ ಹೊಂದಿದೆ.   ಮುಂದಿನ ಜನರೇಶನ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳು ಮಾತ್ರವಲ್ಲದೆ, ವಿಶೇಷ ಚಾರ್ಜಿಂಗ್ ವ್ಯವಸ್ಥೆಯನ್ನು ಸಹ ಬ್ರಾಂಡ್ ಪ್ರದರ್ಶಿಸಿದೆ. ಪೆಟ್ರೋಲ್ ಆಧಾರಿತ ಮೋಟಾರ್‌ಸೈಕಲ್‌ಗಿಂತಲೂ ಎಲೆಕ್ಟ್ರಿಕ್ ಮೋಟಾರ್‌ಸೈಕಲ್  ಬಳಸುವುದರಿಂದ ಆಗುವ ಅನುಕೂಲಗಳು ಮತ್ತು ಲಾಭದಾಯಕತೆಯ ಬಗ್ಗೆ ಸಂದರ್ಶಕರನ್ನು ಸಂವೇದನಾಶೀಲಗೊಳಿಸಲು ಹೆಚ್ಚುವರಿಯಾಗಿ ಇದನ್ನು ಪ್ರದರ್ಶಿಸಲಾಗಿದೆ. ಆಟೋ ಎಕ್ಸ್‌ಪೋ 2023 ಜನವರಿ 18ರ ವರೆಗೆ ಇರಲಿದೆ. ಇದರಿಂದ ಈ ದಿನಾಂಕದ ವರದೆ ಟಾರ್ಕ್ ಕಾಟ್ರೋಸ್‌ x  ಆರ್ ಕುರಿತ ಗ್ರಾಹಕರ ಯಾವುದೇ ಪ್ರಶ್ನೆ, ಸಂದೇಹಗಳಿಗೆ ಇಲ್ಲೇ ಉತ್ತರ ಸಿಗಲಿದೆ. ಹಣಕಾಸು ನೆರವು, ಲೋನ್, ಇಎಂಐ ಸೇರಿದಂತೆ ಯಾವುದೇ ಮಾಹಿತಿಯನ್ನು ಇಲ್ಲಿ ಪಡೆದುಕೊಳ್ಳಬಹುದು.  

ಈ ಸ್ಪೋರ್ಟಿಯರ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ ಅನ್ನು ಅತ್ಯುತ್ತಮ ಆರಾಮದಾಯಕತೆ, ಉತ್ತಮ ಕಾರ್ಯಕ್ಷಮತೆ ಮತ್ತು ವರ್ಧಿತ ಸವಾರಿ ಅನುಭವಕ್ಕಾಗಿ ವಿನ್ಯಾಸಗೊಳಿಸಲಾಗಿದೆ.ಕಾಟ್ರೋಸ್‌ x ಆರ್ ಮುಖ್ಯಾಂಶವೆಂದರೆ ಇದು ಉತ್ಕೃಷ್ಟ ಪವರ್‌ಟ್ರೇನ್ ಹೊಂದಿದ್ದು, ಇದರ ಪರಿಣಾಮವಾಗಿ ಉತ್ತಮ ಪವರ್ ಡೆಲಿವರಿಗಾಗಿ ಹೆಚ್ಚಿನ ಟಾರ್ಕ್ ಉತ್ಪತ್ತಿಯಾಗುತ್ತದೆ. ತಂತ್ರಜ್ಞಾನವು ಕ್ರಿಯಾತ್ಮಕ ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ನ ಅವಿಭಾಜ್ಯ ಅಂಗವಾಗಿರುತ್ತದೆ. ಡಿಸ್ಪ್ಲೇ ಇನ್ಸ್‌ಟ್ರುಮೆಂಟೇಶನ್ ಸಹ ಅತ್ಯಂತ ಪ್ರಾಯೋಗಿಕವಾಗಿದೆ. ಇದು ವ್ಯಾಪಕ ಶ್ರೇಣಿಯ ಮಾಹಿತಿಯನ್ನು ತೋರಿಸುತ್ತದೆ. ಮೋಟಾರ್‌ಸೈಕಲ್‌ನಲ್ಲಿರುವ ಸುರಕ್ಷತಾ ವೈಶಿಷ್ಟ್ಯಗಳ ಸರಣಿಯು ಸವಾರಿ ಅನುಭವವನ್ನು ಇನ್ನಷ್ಟು ಸುರಕ್ಷಿತವಾಗಿಸುತ್ತದೆ.

Electric Bike 1 ಗಂಟೆಯಲ್ಲಿ ಚಾರ್ಜ್, 120 KM ಮೈಲೇಜ್, ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆ!

ಕ್ರಾಟೊಸ್‌ʼ ಶ್ರೇಣಿಯ ಪರಿಚಯದ ನಂತರ, ಈ ಶ್ರೇಣಿಯ ಮೋಟಾರ್‌ಸೈಕಲ್‌ಗಳು ಎಲೆಕ್ಟ್ರಿಕ್ ಮೋಟಾರ್ಸೈಕಲ್ ವಿಭಾಗದಲ್ಲಿ ಬಲಿಷ್ಠ ಹೆಸರನ್ನು ಸೃಷ್ಟಿಸಿವೆ.  ಆಕ್ಸಿಯಲ್ ಫ್ಲಕ್ಸ್ ಮೋಟಾರ್ ಒದಗಿಸುವ ಕೆಲವೇ ಕೆಲವು ವಾಹನಗಳಲ್ಲಿ ಒಂದೆನಿಸಿದೆ. ಪರಿಷ್ಕೃತ ಲೈವ್ ಡ್ಯಾಶ್, ಫಾಸ್ಟ್ ಚಾರ್ಜಿಂಗ್ ಪೋರ್ಟ್, ಸುಧಾರಿತ ಫ್ರಂಟ್ ಮತ್ತು ರಿಯರ್ ಬ್ಲಿಂಕರ್‌ಗಳು ಇತ್ಯಾದಿಗಳನ್ನು ʻಸುಧಾರಿತ ಕಾಟ್ರೋಸ್‌ x ಮೋಟಾರ್‌ಸೈಕಲ್‌ಗಳಲ್ಲಿನ ಕೆಲವು ಗಮನಾರ್ಹ ಬದಲಾವಣೆಗಳಲ್ಲಿ ಸೇರಿವೆ. ಈ ಮೋಟಾರ್‌ಸೈಕಲ್‌ ಈಗ ಸಂಪೂರ್ಣ ಕಪ್ಪು ಮೋಟಾರ್ ಮತ್ತು ಬ್ಯಾಟರಿ ಪ್ಯಾಕ್ ಜೊತೆಗೆ ವರ್ಧಿತ ಸೊಗಸಿಗಾಗಿ ಸ್ಟೈಲಿಶ್ ಡೆಕಾಲ್‌ಗಳನ್ನು ಹೊಂದಿರುತ್ತದೆ. ಅಸ್ತಿತ್ವದಲ್ಲಿರುವ ಗ್ರಾಹಕರು ವ್ಯತ್ಯಾಸದ ಮೊತ್ತವನ್ನು ಪಾವತಿಸುವ ಮೂಲಕ ತಮ್ಮ ಪ್ರಸ್ತುತ ಮೋಟಾರ್‌ಸೈಕಲ್‌ ಅನ್ನು ನವೀಕರಿಸಬಹುದು. ಜೆಟ್ ಬ್ಲ್ಯಾಕ್ ಮತ್ತು ವೈಟ್ ಎಂಬ ಎರಡು ಎರಡು ಹೊಸ ರೂಪಾಂತರಗಳಲ್ಲಿ ʻಸುಧಾರಿತ ಕ್ರಾಟೋಸ್ ಆರ್ʼ ಲಭ್ಯವಿರುತ್ತದೆ.

10 ರೂಗೆ 150 ಕಿ.ಮೀ ಮೈಲೇಜ್, 6 ಜನರ ಪ್ರಯಾಣಸಿಬಲ್ಲ ಎಲೆಕ್ಟ್ರಿಕ್ ಬೈಕ್‌ಗೆ ಮನಸೋತ ಮಹೀಂದ್ರ!

ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗವನ್ನು ಹೆಚ್ಚು ಲಭ್ಯ ಮತ್ತು ಪ್ರಾಯೋಗಿಕವಾಗಿ ಮಾಡಲು ʻಟಾರ್ಕ್ ಮೋಟಾರ್ಸ್ʼ ಬದ್ಧವಾಗಿದೆ.   KRATOS ಶ್ರೇಣಿಯಲ್ಲಿ ವೇಗದ, ಉತ್ತಮ ಮತ್ತು ಮತ್ತಷ್ಟು ಶಕ್ತಿಯುತ ಬೈಕ್ ಪರಿಚಯಿಸುತ್ತೇವೆ. ಅನುಭವಿ ಮತ್ತು ಪ್ರತಿಭಾವಂತ ವೃತ್ತಿಪರರ ತಂಡದಿಂದ ಸಂಪೂರ್ಣವಾಗಿ ಆಂತರಿಕವಾಗಿ ನಿರ್ಮಿಸಲಾದ ಕಾಟ್ರೋಸ್‌ x ಸವಾರರ ಮೋಜಿನ ಪ್ರಯಾಣಗಳಿಗೆ ಪರಿಪೂರ್ಣ ಸಂಗಾತಿಯಾಗುತ್ತದೆ ಮತ್ತು ತನ್ನದೇ ಆದ ಯಶೋಗಾಥೆಯನ್ನು ಸೃಷ್ಟಿಸುತ್ತದೆ ಎಂಬ ವಿಶ್ವಾಸ ನಮಗಿದೆ. ನಾವು ನಮ್ಮ ಅಸ್ತಿತ್ವದಲ್ಲಿರುವ ಉತ್ಪನ್ನಗಳನ್ನು ನಿರಂತರವಾಗಿ ಸುಧಾರಿಸುತ್ತಿದ್ದೇವೆ. ಜೊತೆಗೆ, ಗ್ರಾಹಕರ ಪ್ರತಿಕ್ರಿಯೆ ಮತ್ತು ಅರ್ಹ ಸಂಶೋಧನಾ ಮತ್ತು ಅಭಿವೃದ್ಧಿ ತಂಡದಿಂದ ವ್ಯಾಪಕ ಸಂಶೋಧನೆಯ ಆಧಾರದ ಮೇಲೆ ಹೊಸ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ.ಕಾಟ್ರೋಸ್‌ x ತಾಜಾ ಆವೃತ್ತಿಯು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಪರಿಪೂರ್ಣ ಸಂಗಾತಿಯನ್ನು ಹುಡುಕುತ್ತಿರುವ ಮೋಟಾರ್‌ಸೈಕಲ್ ಉತ್ಸಾಹಿಗಳನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಸಾಟಿಯಿಲ್ಲದ ಸವಾರಿ ಅನುಭವವು ನಮ್ಮ ಉತ್ಪನ್ನಗಳ ಅಗಾಧ ಯಶಸ್ಸಿನ ಹಿಂದಿನ ಪ್ರಮುಖ ಅಂಶವಾಗಿದ್ದು, ಇದು ನಮ್ಮ ಬ್ರಾಂಡ್‌ ಪಾಲಿಗೆ ಅನನ್ಯವಾದುದು ಎಂದು ಟಾರ್ಕ್‌ ಮೋಟಾರ್ಸ್‌ʼನ ಸ್ಥಾಪಕ ಮತ್ತು ಸಿಇಒ ಶ್ರೀ ಕಪಿಲ್ ಶೆಲ್ಕೆ  ಹೇಳಿದ್ದಾರೆ.  

Follow Us:
Download App:
  • android
  • ios