ರೇಸಿಂಗ್ ಅನುಭವಕ್ಕೆ ಮತ್ತಷ್ಟು ಥ್ರಿಲ್; ಭಾರತದಲ್ಲಿ BMW M1000 RR ಬೈಕ್ ಬಿಡುಗಡೆ !

ಭಾರತದಲ್ಲಿ ರೇಸಿಂಗ್ ಅನುಭವವನ್ನು ಮತ್ತಷ್ಟು ಹೆಚ್ಚಿಸಲು BMW ಇಂಡಿಯಾ ಹೊಸ ಬೈಕ್ ಬಿಡುಗಡೆ ಮಾಡಿದೆ. ಹೊಚ್ಚ ಹೊಸ M ಸೀರಿಸ್ ಬೈಕ್ ಇದಾಗಿದೆ. ಆಲ್-ನ್ಯೂ BMW M1000 RR ಬೈಕ್ ಬೆಲೆ ಹಾಗೂ ಇತರ ವಿಶೇಷತೆ ಇಲ್ಲಿದೆ.

Al new BMW M 1000 RR racing bike launched in India ckm

ನವದೆಹಲಿ(ಮಾ.25):  BMW ಮೋಟೊರಾಡ್ ಇಂಡಿಯಾ ಆಲ್-ನ್ಯೂ BMW M1000 RR  ಭಾರತದ BMW ಮೋಟೊರಾಡ್‍ನಿಂದ ಮೊದಲ M ಮಾಡೆಲ್ ಬಿಡುಗಡೆ ಮಾಡಿದೆ. ಹೊಚ್ಚ ಹೊಸ BMW M1000 RR ಬೈಕ್ ಇದೀಗ ಭಾರತದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಥ್ರಿಲ್ಲಿಂಗ್ ಅನುಭವಕ್ಕಾಗಿ ಭಾರತದ BWM ಮಾಲೀಕರಿಗೆ ಸಫಾರಿ 2021 ಆರಂಭ!

BMW ಮೋಟೊರಾಡ್ ವಿಶ್ವದ ಅತ್ಯಂತ ಶಕ್ತಿಯುತ ಪದ ಒ ತತ್ವವನ್ನು ಅನುಸರಿಸುತ್ತದೆ. ಇದು ವಿಶ್ವದಾದ್ಯಂತ ರೇಸಿಂಗ್‍ನ ಯಶಸ್ಸಿಗೆ ಪರ್ಯಾಯ ಹೆಸರಾಗಿದೆ ಮತ್ತು ರೈಡರ್‌ಗಳಿಗೆ ಕಾರ್ಯಕ್ಷಮತೆ, ಅನನ್ಯತೆ ಮತ್ತು ವೈಯಕ್ತಿಕತೆಗಳ ಕುರಿತು ಹೆಚ್ಚಿನ ಬೇಡಿಕೆಗಳ ಗುರಿ ಹೊಂದಿದೆ. ಎರಡು ವೇರಿಯೆಂಟ್‌ನಲ್ಲಿ ಬೈಕ್ ಲಭ್ಯವಿದೆ. ಆಲ್ ನ್ಯೂ BMW M1000 RR ಬೆಲೆ 42,00,000 ರೂಪಾಯಿ, ಇನ್ನು BMW M1000 RR ಕಾಂಪಿಟೀಶನ್ ಬೈಕ್ ಬೆಲೆ 45,00,000 ರೂಪಾಯಿ(ಎಕ್ಸ್ ಶೋ ರೂಂ).

ಸಂಪೂರ್ಣ ಮನಃಶ್ಯಾಂತಿಗೆ ಎಲ್ಲ BmW ಮೋಟೊರಾಡ್ ಬೈಕ್ `ಮೂರು ವರ್ಷ, ಅನಿಯಮಿತ ಕಿಲೋಮೀಟರ್’ ಸ್ಟಾಂಡರ್ಡ್ ವಾರೆಂಟಿಯೊಂದಿಗೆ ಬಂದಿದ್ದು ನಾಲ್ಕು ಮತ್ತು ಐದನೇ ವರ್ಷಕ್ಕೂ ವಾರೆಂಟಿ ವಿಸ್ತರಿಸುವ ಆಯ್ಕೆ ಹೊಂದಿದೆ. ರೋಡ್-ಸೈಡ್ ಅಸಿಸ್ಟೆನ್ಸ್, 24x7 365 ದಿನಗಳ ಪ್ಯಾಕೇಜ್ ಬ್ರೇಕ್‍ಡೌನ್ ಮತ್ತು ಟೌವಿಂಗ್ ಸನ್ನಿವೇಶಗಳಲ್ಲಿ ಪ್ರಾಮಾಣಿಕ ಸೇವೆಗಳನ್ನು ಮತ್ತಷ್ಟು ದೃಢಪಡಿಸುತ್ತದೆ.

ಭಾರತದಲ್ಲಿ BMW RnineT ಮತ್ತು BMW RnineT ಸ್ಕ್ರಾಂಬ್ಲರ್ ಬೈಕ್ ಬಿಡುಗಡೆ

ಆಲ್-ನ್ಯೂ BMW M1000 RR ಮೊದಲ BMW ಮೋಟೊರಾಡ್‍ನ ಮೊದಲ M ಮಾಡೆಲ್ ಆಗಿದೆ ಮತ್ತು BMW S 1000 RR ಆಧರಿಸಿದೆ.  ನೇರವಾಗಿ ವೃತ್ತಿಪರ ರೇಸಿಂಗ್‍ನಿಂದ ಬಂದಿವೆ ಮತ್ತು ಶುದ್ಧ ರೇಸಿಂಗ್ ತಂತ್ರಜ್ಞಾನ, ಉನ್ನತ ಕಾರ್ಯಕ್ಷಮತೆ  ಹೊಂದಿದೆ. 

“ಆಲ್-ನ್ಯೂ BMW M1000 RR ರೇಸ್‍ಟ್ರ್ಯಾಕ್‍ನಲ್ಲಿ ಜನಿಸಿದೆ ಮತ್ತು ಗರಿಷ್ಠ ಬದ್ಧತೆಯನ್ನು ಹೊಂದಿದೆ ಹಾಗೂ ಸಾಧಿಸುವ ಸಂಕಲ್ಪ ಹೊಂದಿದೆ. BMW M  ತತ್ವವನ್ನು ಆಧರಿಸಿದ್ದು ಆಕಾಂಕ್ಷೆಯಿಂದ ನಿರ್ಮಾಣವಾಗಿದೆ ಮತ್ತು ಉನ್ನತ ಕಾರ್ಯಕ್ಷಮತೆಯ ಶುದ್ಧ ರೇಸಿಂಗ್ ತಂತ್ರಜ್ಞಾನವನ್ನು ಮೋಟಾರ್‍ಸ್ಪೋರ್ಟ್ ಮತ್ತು ರೋಮಾಂಚಕ ಚಾಲನೆಯ ಪರಿಪೂರ್ಣತೆಯನ್ನು ರಸ್ತೆ ಮೇಲೆ ಬಯಸುವವರಿಗೆ ನೀಡುತ್ತದೆ. ಅತ್ಯಂತ ಶಕ್ತಿಯುತ BMW ಮೋಟೊರಾಡ್ ಸೂಪರ್‍ಬೈಕ್ ಬಿಡುಗಡೆ ಮಾಡಲು ನಾವು ಬಹಳ ಸಂತೋಷಗೊಂಡಿದ್ದೇವೆ, ಅದರ ಶಕ್ತಿಯುತ ಎಂಜಿನ್, ಅಭಿವ್ಯಕ್ತಿಯ ವಿನ್ಯಾಸ ಮತ್ತು ವಿಶೇಷವಾದ ಸಜ್ಜಿನೊಂದಿಗೆ ಆಲ್-ನ್ಯೂ BMW M1000 RR ರೇಸ್‍ಟ್ರ್ಯಾಕ್‍ನಲ್ಲಿ ಮತ್ತು ಪ್ರತಿನಿತ್ಯದ ಬಳಕೆಗೆ ಸಂಪೂರ್ಣ ಸಂತೋಷ ನೀಡುತ್ತದೆ ಎಂದು BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್  ವಿಕ್ರಮ್ ಪಾವಾಹ್ ಹೇಳಿದ್ದಾರೆ. 

Latest Videos
Follow Us:
Download App:
  • android
  • ios