Asianet Suvarna News Asianet Suvarna News

29 ವರ್ಷ ಹಳೆಯ ಬಜಾಜ್ ಚೇತಕ್‌ ಸ್ಕೂಟರ್‌ಗೆ ಮರುಜೀವ: ವಿಡಿಯೋ ವೈರಲ್

29 ವರ್ಷ ಹಳೆಯ ಚೇತಕ್‌ ಸ್ಕೂಟರ್‌ ಅನ್ನು ಅಂದವಾಗಿ ಮರುಜೋಡಣೆ ಮಾಡಲಾಗಿದೆ. ಈ ವೀಡಿಯೊವನ್ನು ಮುಂಡೋಡಿ ವ್ಲಾಗ್ಸ್‌ (MUNDODI VLOGS) ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.

29 years old Bajaj Chethak restored: Video viral
Author
Bangalore, First Published Jul 24, 2022, 6:04 PM IST

ಒಂದು ಕಾಲದಲ್ಲಿ ಪ್ರತಿ ಮನೆಯಲ್ಲೂ ಸಾಮಾನ್ಯವಾಗಿದ್ದ ಸ್ಕೂಟರ್ (Scooter) ಎಂದರೆ ಬಜಾಜ್‌ ಚೇತಕ್ (Bajaj Chetak). ಇಂದಿನ ಪೀಳಿಗೆಯ ಬಹುತೇಕ ಜನರು ಚೇತಕ್ನಲ್ಲಿ ದ್ವಿಚಕ್ರ ವಾಹನವನ್ನು ಚಾಲನೆ ಮಾಡಲು ಕಲಿತಿರಬಹುದು. ಬಜಾಜ್ ಚೇತಕ್ ಭಾರತೀಯ ಮೋಟಾರು ಇತಿಹಾಸದ ಪ್ರಮುಖ ಭಾಗವಾಗಿದೆ. ಈಗ ಎಲೆಕ್ಟ್ರಿಕ್ ಸ್ಕೂಟರ್ನ (Electric scooter) ರೂಪದಲ್ಲಿ ಚೇತಕ್ ಮರಳಿ ಬಂದಿದ್ದರೂ, ಮೂಲ ಚೇತಕ್ ಸ್ಕೂಟರ್ಗೆ ಇನ್ನೂ ಅಭಿಮಾನಿಗಳಿದ್ದಾರೆ. ಹಲವರು ತಮ್ಮ ಹಳೆಯ ಸ್ಕೂಟರ್ ಅನ್ನು ಇನ್ನೂ ಉತ್ತಮವಾಗಿ ನಿರ್ವಹಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬರು 29 ವರ್ಷ ಹಳೆಯ ಚೇತಕ್‌ ಸ್ಕೂಟರ್‌ ಅನ್ನು ಅಂದವಾಗಿ ಮರುಜೋಡಣೆ ಮಾಡಿದ್ದಾರೆ.

ಈ ವೀಡಿಯೊವನ್ನು ಮುಂಡೋಡಿ ವ್ಲಾಗ್ಸ್ (MUNDODI VLOGS) ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವೀಡಿಯೊದಲ್ಲಿ, ಅವರು 1993 ರ ಮಾಡೆಲ್ ಬಜಾಜ್ ಚೇತಕ್ ಸ್ಕೂಟರ್ನಲ್ಲಿ ಮಾಡಿದ ಎಲ್ಲಾ ಮರುಜೋಡಣೆ ಬಗ್ಗೆ ವಿವರಣೆ ನೀಡಿದ್ದಾರೆ. ಸ್ಕೂಟರ್ ವಾಸ್ತವವಾಗಿ ಅವರ ಕ್ಲೈಂಟ್ಗೆ (client) ಸೇರಿದ್ದಾಗಿದ್ದು, ಅದು ಅವನ ಬಳಿಗೆ ಬಂದಾಗ ಬಹಳ ಕೆಟ್ಟ ಸ್ಥಿತಿಯಲ್ಲಿತ್ತು. ಅದರ ವೈಭವವನ್ನು ಮರಳಿ ತರಲು ಸ್ಕೂಟರ್ ಅನ್ನು ಸಂಪೂರ್ಣವಾಗಿ ಮರುಜೋಡಿಸಬೇಕಿತ್ತು. ಸ್ಕೂಟರ್ನಲ್ಲಿದ್ದ ಹಲವು ಪ್ಯಾನೆಲ್ಗಳು ತುಕ್ಕು ಹಿಡಿಯಲು ಪ್ರಾರಂಭಿಸಿದ್ದವು ಮತ್ತು ಬಣ್ಣವೂ ಮಸುಕಾಗಲು ಪ್ರಾರಂಭಿಸಿತ್ತು.

ನಂತರ ತುಕ್ಕು ಹಿಡಿದಿದ್ದ ಎಲ್ಲಾ ಫಲಕಗಳನ್ನು ಸರಿಪಡಿಸಿ, ಸ್ಕೂಟರ್‌ಗೆ ಸಂಪೂರ್ಣ ನೀಲಿ ಬಣ್ಣದಿಂದ ಪೇಂಟ್‌ ಮಾಡಲಾಗಿದೆ ಮತ್ತು ಸ್ಕೂಟರ್ಗೆ ರೆಟ್ರೋ ಲುಕ್ ನೀಡಲು ಕೆಲವು ಬಿಟ್ಗಳನ್ನು ಕೂಡ ಸೇರಿಸಲಾಗಿ. ಉದಾಹರಣೆಗೆ ಮುಂಭಾಗದ ಚಕ್ರಗಳನ್ನು ಉಕ್ಕಿನ ರಿಮ್ಗಳನ್ನು ಚಿತ್ರಿಸಲಾಗಿದೆ. ರಿಮ್ನಿಂದ ಕಿತ್ತು ಬಂದಿದ್ದ ಎಲ್ಲಾ ಬಣ್ಣವನ್ನು ತೆಗೆದು ಚಕ್ರಗಳಿಗೆ ಕ್ರೋಮ್ ಲೇಪನ ನೀಡಿಲಾಗಿದೆ. ಮುಂಭಾಗದ ಸಸ್ಪೆನ್ಷನ್‌ ಕೂಡ ಇದೇ ರೀತಿಯ ಮೇಕ್‌ ಓವರ್ (make over) ಅನ್ನು ಪಡೆದುಕೊಂಡಿದೆ. ಮುಂಭಾಗದ ಚಕ್ರದ ಕವರ್ ಮೇಲೆ ಕ್ರೋಮ್‌ ಫಿನಿಷಿಂಗ್ (crome finishing) ನೀಡಲಾಗಿದೆ.

ಇದನ್ನೂ ಓದಿ: ಬೌನ್ಸ್ ಇನ್ಫಿನಿಟಿ ಈಗ ಫ್ಲಿಪ್ಕಾರ್ಟ್ನಲ್ಲಿ ಲಭ್ಯ: ಖರೀದಿ ಹೇಗೆ

ಸ್ಕೂಟರ್ನ ಮುಂಭಾಗದ ಮಡ್ಗಾರ್ಡ್ ಮುಂಭಾಗದಲ್ಲಿ ಕ್ರೋಮ್ ಫಿನಿಷ್‌ ನೀಡಲಾಗಿದ್ದು, ಹೆಡ್ಲ್ಯಾಂಪ್‌ಗೆ ಕೂಡ ಹೊಸ ವಿನ್ಯಾಸ ನೀಡಲಾಗಿದೆ. ಮೂಲ ಬಜಾಜ್ ಲೋಗೋ (bajaj logo) ಮತ್ತು ಚೇತಕ್ ಬ್ರ್ಯಾಂಡಿಂಗ್ (chetak branding) ಅನ್ನು ಮರುಸ್ಥಾಪಿಸಲಾಗಿದೆ. ಓಆರ್‌ವಿಎಂಗಳಿಗೆ ರೆಟ್ರೋ ಲುಕ್‌ ಕೊಡಲು ಕ್ರೋಮ್‌ ಫಿನಿಷ್‌ ನೀಡಲಾಗಿದೆ. ಚೇತಕ್ನ ಫುಟ್ ಬೋರ್ಡ್ ವಿಶಾಲವಾಗಿದ್ದು, ಇದರಲ್ಲಿನ ರಬ್ಬರ್ ಮ್ಯಾಟ್ಗಳ ಬದಲಿಗೆ ಲೋಹದ ಶೀಟ್‌ಗಳನ್ನು ಅಳವಡಿಸಲಾಗಿದೆ. ಇವುಗಳ ಮೇಲೆ ಯಾವುದೇ ತೊಂದರೆಗಳಿಲ್ಲದೆ ನೀರು ಹರಿಯುವಂತೆ ವ್ಯವಸ್ಥೆ ಮಾಡಲಾಗಿದೆ. ಸ್ಪೇರ್ ವೀಲ್ ಅನ್ನು ಹಿಂಬದಿಯಿಂದ ತೆಗೆದುಹಾಕಲಾಗಿದೆ ಮತ್ತು ಅಚ್ಚುಕಟ್ಟಾದ ನೋಟ ಒದಗಿಸಲು ಮುಂಭಾಗದಲ್ಲಿ ಇರಿಸಲಾಗಿದೆ. ಏಕರೂಪದ ನೋಟವನ್ನು ಪಡೆಯಲು ಅದಕ್ಕೆ ಕೂಡ ಕ್ರೋಮ್‌ ಫಿನಿಷ್‌ ನೀಡಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಯಮಹಾ ಭರ್ಜರಿ ಕೊಡುಗೆ, ಅತ್ಯಾಧುನಿಕ ತಂತ್ರಜ್ಞಾನದ ಬೈಕ್ ಬಿಡುಗಡೆಗೆ ತಯಾರಿ!

ಸ್ಕೂಟರ್ನಲ್ಲಿ ಸವಾರರ ಆಸನದ ಅಡಿಯಲ್ಲಿ ಸ್ಪ್ರಿಂಗ್ಗಳಿದ್ದು, ಆರಾಮದಾಯಕ ಸವಾರಿಯ ಅನುಭವ ನೀಡುತ್ತದೆ. ಪಿಲಿಯನ್ ಸೀಟ್ ಗ್ರ್ಯಾಬ್ ಹ್ಯಾಂಡಲ್ ಹೊಂದಿದೆ.ಸ್ಕೂಟರ್ ಅನ್ನು ಸಣ್ಣ ಗೀರುಗಳಿಂದ ರಕ್ಷಿಸಲು ಸೈಡ್ ಪ್ಯಾನೆಲ್ಗಳ ಸುತ್ತಲೂ ತೆಳುವಾದ ಲೋಹ ಮೆಷ್‌ ನೀಡಲಾಗಿದೆ. ಇದರ ಎಂಜಿನ್ ಅನ್ನು ಸಹ ಪುನಃಸ್ಥಾಪಿಸಲಾಗಿದ್ದು, ಕಾರ್ಬ್ಯುರೇಟರ್, ಪಿಸ್ಟನ್ ಮತ್ತು ಇನ್ನೂ ಹೆಚ್ಚಿನ ಭಾಗಗಳನ್ನು ಬದಲಾಯಿಸಲಾಯಿತು. ಈ ಸ್ಕೂಟರ್ನಲ್ಲಿ ಮಾಡಿದ ಕೆಲಸವು ತುಂಬಾ ಅಚ್ಚುಕಟ್ಟಾಗಿ ಕಾಣುತ್ತದೆ. ಧ್ರುವ ಮುಂಡೋಡಿ ಸ್ಕೂಟರ್ ಅನ್ನು ಅಚ್ಚುಕಟ್ಟಾಗಿ ಮರುಜೋಡಿಸಿದ್ದಾರೆ.ಇದು ಹೊಸತನ ಹೊಂದಿದ ಹಳೆಯ ಸ್ಕೂಟರ್‌ನಂತೆಯೇ ಕಾಣುವುದರಲ್ಲಿ ಅಚ್ಚರಿ ಏನಿಲ್ಲ. 

Follow Us:
Download App:
  • android
  • ios