2022 ಕವಾಸಕಿ ನಿನ್ಜಾ 400 ಮೋಟಾರ್‌ಸೈಕಲ್‌ ಬಿಡುಗಡೆ

ಕವಾಸಕಿ ಮೋಟಾರ್ಸ್‌ (Kawasaki Motors) ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದ್ದು, 2022 ನಿನ್ಜಾ 400 ಬೈಕ್‌ ಅನ್ನು ಇಂದು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ.

2022 Kawasaki Ninja 400 motor cycle to be launched on June 24

ಕೇಂದ್ರ ಸರ್ಕಾರ ದೇಶದಲ್ಲಿ ಮೋಟಾರ್‌ ವಾಹನಗಳಿಗೆ ಬಿಎಸ್6(BS )ಇಂಜಿನ್‌ ಕಡ್ಡಾಯಗೊಳಿಸಿದ ಹಿನ್ನೆಲೆಯಲ್ಲಿ ಹಲವು ಕಾರು ಮತ್ತು ಮೋಟಾರ್‌ಸೈಕಲ್‌ ತಯಾರಕ ಕಂಪನಿಗಳು ಅನಿವಾರ್ಯವಾಗಿ ತಮ್ಮ ಕೆಲ ವಾಹನಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಬೇಕಾಗಿತ್ತು. ಈ ಕಾಯ್ದೆ 2020ರ ಏಪ್ರಿಲ್‌ನಿಂದ ಜಾರಿಗೆ ಬಂದಿತ್ತು. ಈಗ ಆ ಕಂಪನಿಗಳು ತಮ್ಮ ಹಿಂದಿನ ವಾಹನಗಳನ್ನು ಹೊಸ ಇಂಜಿನ್ನೊಂದಿಗೆ ಮರು ಪರಿಚಯಿಸಲು ಮುಂದಾಗಿದೆ. ಇದರಲ್ಲಿ ಕವಾಸಕಿ ಮೋಟಾರ್‌ಸೈಕಲ್‌ ಕೂಡ ಒಂದು. 
ಕವಾಸಕಿ ಮೋಟಾರ್ಸ್ (Kawasaki Motors) ಭಾರತದಲ್ಲಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದ್ದು, 2022 ನಿನ್ಜಾ 400 ಬೈಕ್‌ ಅನ್ನು ಇಂದು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ಈ ಬೈಕ್‌ ಈ ಹಿಂದೆಯೂ ಭಾರತದಲ್ಲಿ ಲಭ್ಯವಿತ್ತಾದರೂ, ಕೇಂದ್ರ ಸರ್ಕಾರ ಜಾರಿಗೆ ತಂದ ಬಿಎಸ್‌ 6 ಎಮಿಷನ್‌ ಮಾನದಂಡಗಳ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳ ಹಿಂದೆ ಅದರ ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿತ್ತು. 

ಆದ್ದರಿಂದ ಈಗ ಭಾರತದಲ್ಲಿ 2022 ನಿನ್ಜಾ 400 ಗೆ ದೊಡ್ಡ ಬದಲಾವಣೆಯೊಂದಿಗೆ ಮತ್ತೆ ಬರಲಿದೆ. ಇದು ಬಿಎಸ್ 6 (BS6)ನ  399 ಸಿಸಿ (399cc) ಸಮಾನಾಂತರ-ಟ್ವಿನ್ ಎಂಜಿನ್ ಹೊಂದಿರಲಿದೆ. ಇದರ  ಮೋಟಾರ್ ಈಗ 44 ಬಿಎಚ್‌ಪಿ ಮತ್ತು 37ಎನ್‌ಎಮ್‌ ಟಾರ್ಕ್ ಉತ್ಪಾದಿಸುತ್ತದೆ. ಹಿಂದಿನ ಮೋಟಾರ್‌ಸೈಕಲ್‌ ಹೋಲಿಸಿದರೆ, ಇದರ ಟಾರ್ಕ್ ಕಡಿಮೆಯಿದೆ. ಹಿಂದಿನ ಬಿಎಸ್‌-4 ಇಂಜಿನ್‌ಗೆ ಹೋಲಿಸಿದರೆ ಒಟ್ಟಾರೆ ಔಟ್‌ಪುಟ್‌ ಹಿಂದಿನಂತೆಯೇ ಇದ್ದರೂ, ಟಾರ್ಕ್‌ ಮಾತ್ರ 1 ಎನ್‌ಎಂ ಕಡಿಮೆಯಾಗಿದೆ. ಇದು 6-ಸ್ಪೀಡ್‌ ಟ್ರಾನ್ಸ್‌ಮಿಷನ್‌ ಸ್ಲಿಪ್ಪರ್‌ ಕ್ಲಚ್‌ ಮೆಕ್ಯಾನಿಸಂ ಜೊತಗೆ ಬರುತ್ತದೆ.
ಹೊಸ 2022 ನಿನ್ಜಾ 400, ಶಾರ್ಪ್‌ ಟ್ವಿನ್‌-ಪಾಡ್‌ ಹೆಡ್‌ಲೈಟ್‌ಗಳು, ಫ್ರಂಟ್‌ ಟರ್ನ್ ಇಂಡಿಕೇಟರ್‌ಗಳು ಕೂಡ ಹಿಂದಿನ ಮಾದರಿಯದ್ದೇ ಮುಂದುವರಿಕೆಯಾಗಿರಲಿದೆ. ಇತರ ಹೊರಾಂಗಣ ವೈಶಿಷ್ಟ್ಯಗಳೆಂದರೆ ಸ್ಪ್ಲಿಟ್‌-ಸ್ಟೈಲ್‌ ಸೀಟ್‌, 14 ಲೀಟರ್‌ನ ಫ್ಯುಯಲ್‌ ಟ್ಯಾಂಕ್‌, ಸ್ಪೋರ್ಟಿ ಪೇಂಟ್‌ ಲಿವರಿ ಮತ್ತು ಡ್ಯುಯಲ್‌ ಟೋನ್‌ ಫಿನಿಷ್ ಹೊಂದಿರುವ ಬದಿಯಲ್ಲಿನ ಎಕ್ಸಾಸ್ಟ್. 
 ಹಸಿರು ಪವರ್‌ಟ್ರೇನ್ನ ಹೊರತಾಗಿ, 2022 ಕವಾಸಕಿ ನಿನ್ಜಾ 400 ಅಂತಾರಾಷ್ಟ್ರೀಯವಾಗಿ ಹೊಸ ಬಣ್ಣದಲ್ಲಿ ಬರುವ ಸಾಧ್ಯತೆಯಿದೆ. ಎಬೊನಿ (KRT ಆವೃತ್ತಿ) ಜೊತೆಗೆ ಲೈಮ್ ಗ್ರೀನ್ (ಹಸಿರು) ಮತ್ತು ಮೆಟಾಲಿಕ್ ಮ್ಯಾಟ್ ಕಾರ್ಬನ್ ಗ್ರೇ (ಬೂದು) ಜೊತೆಗೆ ಮೆಟಾಲಿಕ್ ಕಾರ್ಬನ್ ಗ್ರೇ (ಬೂದು) ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಭಾರತದಲ್ಲಿಯೂ ಅದೇ ಆಯ್ಕೆಗಳಲ್ಲಿ ನಾವು ನಿರೀಕ್ಷಿಸಬಹುದು.
ಆದರೆ,  ಉಳಿದ ಮೋಟಾರ್‌ಸೈಕಲ್ ಹಾರ್ಡ್‌ವೇರ್, ಸ್ಟೈಲಿಂಗ್ ಮತ್ತು ವೈಶಿಷ್ಟ್ಯಗಳ ವಿಷಯದಲ್ಲಿ ಹಿಂದಿನ ಮೋಟಾರ್‌ ಸೈಕಲ್‌ನ ವಿನ್ಯಾಸ, ಇಂಜಿನಿಯರಿಂಗ್‌ ಕೌಶಲ್ಯವನ್ನೇ ಮುಂದುವರಿಸಲಾಗಿದೆ. 

ಕವಾಸಿಕಿ ಝಡ್ ಎಕ್ಸ್ ಬೆಲೆ ಏನು?

ಈ ಹಿಂದೆ ನಿನ್ಜಾ 400 ಭಾರತದಲ್ಲಿ ಸೀಮಿತಿ ಸಂಖ್ಯೆಯಲ್ಲಿ ಲಭ್ಯವಿತ್ತು. ಆದೆ, ಹೊಸ 2022 ಮಾದರಿ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಕವಾಸಕಿ ನಿನ್ಜಾ 400,  ಹೊಸದಾಗಿ ಬಿಡುಗಡೆಯಾದ ಕೆಟಿಎಂ ಆರ್‌ಸಿ 390 (KTM RC 390) ಹಾಗೂ ಟಿವಿಎಸ್‌ ಅಪಾಚೆ ಆರ್‌ ಆರ್ 310 (TVS Apache RR 310) ಗೆ ಸ್ಪರ್ಧೆ ನೀಡಲಿದೆ.ಇದರ ಬೆಲೆ 4.98 ಲಕ್ಷ ರೂ., ಎಕ್ಸ್ ಶೋರೂಂ ಎಂದು ನಿರೀಕ್ಷಿಸಲಾಗುತ್ತಿದೆ. ಇದು ಹಿಂದಿನ ಮಾದರಿಗಿಂತ ಹೆಚ್ಚಿನ ಬೆಲೆ ಹೊಂದಿರುವ ಸಾಧ್ಯತೆಯಿದೆ. ಬಿಎಸ್6 ಎಮಿಷನ್ ನಿಯಮದಿಂದ ಮಾರುತಿ ಸುಜುಕಿ ಓಮ್ನಿ, ಜಿಪ್ಸಿ, ಟಾಟಾ ನ್ಯಾನೋ, ಫಿಯೆಟ್ ಪುಂಟೊ ಮತ್ತು ಮಹೀಂದ್ರ ಇ2ಒ ದಂತಹ ವಾಹನಗಳ ಉತ್ಪಾದನೆ ಸ್ಥಗಿತಗೊಂಡಿತ್ತು. ಜೊತೆಗೆ, ಹ್ಯುಂಡೈ ಇಯಾನ್ ಮತ್ತು ಹೋಂಡಾ ಬ್ರಿಯೊ ಉತ್ಪಾದನೆಗಳು ಕೂಡ ಸ್ಥಗಿತಗೊಂಡಿತ್ತು.

ಕವಾಸಕಿ W175 ಬೆಲೆ ಏನು?
 

Latest Videos
Follow Us:
Download App:
  • android
  • ios