ಬೀದರ್[ನ.8]:  ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ಹೈಕಮಾಂಡ್ ತುಂಬಾ ಕಿರುಕುಳ ನೀಡುತ್ತಿದೆ. ಹೀಗಾಗಿ ನಿಮಗೇನಾದರೂ ಸ್ವಾಭಿಮಾನ ಇದ್ದರೆ ಕಾಂಗ್ರೆಸ್ ಪಕ್ಷ ಸೇರಿಕೊಳ್ಳಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಬಿಎಸ್ವೈಗೆ ಆಹ್ವಾನ ನೀಡಿದ್ದಾರೆ. 

ಶುಕ್ರವಾರ ಜಿಲ್ಲೆಯ  ಭಾಲ್ಕಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಶ್ವರ ಖಂಡ್ರೆ ಅವರು, ಕರ್ನಾಟಕದಲ್ಲಿ ಉಂಟಾದ ಮಹಾ ಪ್ರವಾಹಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹೇಳಲು ಹೋದರೆ ಪ್ರಧಾನಿ ಭೇಟಿಗೆ ಅವಕಾಶ ಕೊಟ್ಟಿಲ್ಲ. ಇದು ಕೇವಲ ಯಡಿಯೂರಪ್ಪ ಅವರಿಗೆ ಮಾಡಿದ ಅವಮಾನವಲ್ಲ, ಕರ್ನಾಟಕದ 7 ಕೋಟಿ ಕನ್ನಡಿಗರಿಗೆ ಮಾಡಿದಂತ ಅವಮಾನವಾಗಿದೆ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೀಗಾಗಿ ಯಡಿಯೂರಪ್ಪ ಅವರಿಗೆ ನಿಜಾವಾಗ್ಲೂ ಸ್ವಾಭಿಮಾನ ಇದ್ದರೆ, ನಮ್ಮ ಪಕ್ಷಕ್ಕೆ ಬನ್ನಿ ಎಂದು ಓಪನ್ ಆಗಿಯೇ ಯಡಿಯೂರಪಪ ಅವರಿಗೆ ಆಫರ್ ನೀಡಿದ್ದಾರೆ.