ಬೀದರ್‌[ನ.4]: ಮಂಡಲ ವಿರೋಧಿಸಿದವ್ರಿಗೂ ಜೈ ಅಂತೀರಾ, ಮೀಸಲಾತಿ ಪ್ರಶ್ನಿಸಿದವರಿಗೂ ಜೈ ಅಂತೀರಾ. ಅಷ್ಟಕ್ಕೂ ನಾನು ಶೋಷಿತರಿಗಾಗಿ ಹೋರಾಡಿದ್ರೆ ಜಾತಿವಾದಿ ಅಂತಾರೆ, ಶೋಷಿತರ ಪರ ರಥ ಎಳೀರಿ ನಾವು ಹಿಂದೆ ಇರ್ತೇವೆ ಎಂದ್ಹೇಳಿ ದೂರ ಹೋಗ್ತೀರಿ. ಹೀಗಾದ್ರೆ ಹೇಗೆ. ಅವರಾದ್ರೆ ವಿರೋಧ ಮಾಡಲಿ, ನೀವಾದ್ರೂ ನನ್ನ ಪರ ನಿಲ್ಲಬೇಕಲ್ಲವೇ ಎಂದು ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ನೆರೆದಿದ್ದ ಜನಸ್ತೋಮಕ್ಕೆ ಮನವಿಸಿದ್ದಾರೆ.

ಅವರು ಭಾನುವಾರ ಇಲ್ಲಿನ ಗಣೇಶ ಮೈದಾನದಲ್ಲಿಆಯೋಜಿಸಲಾಗಿದ್ದ ಶೋಷಿತ ವರ್ಗಗಳ ಬೃಹತ್ ಜನಜಾಗೃತಿ ಸಮಾವೇಶ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಶೋಷಿತ ಸಮಾಜಗಳು ತಮ್ಮ ಪರವಾಗಿ ನಿಲ್ಲುವವರ ಸಾಥ್ ನೀಡಿದ್ರೆ ಮಾತ್ರ ಸಮಾಜದಲ್ಲಿಆರ್ಥಿಕ, ಸಾಮಾಜಿತ ಅಭಿವೃದ್ಧಿಯ ಕನಸನ್ನು ಕಾಣಬಹುದು ಎಂದರು.

ವಿರೋಧಿಸಿದವರು ಯಾರು?: 

ಮಂಡಲ ವರದಿ ವಿರೋಧಿಸಿ ಶಾಲಾ ಮಕ್ಕಳಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದನೆ ಮಾಡಿದವರು ಯಾರು? ಎಸ್‌ಸಿ, ಎಸ್‌ಟಿ, ಬಿಸಿಎ ಹಾಗೂ ಒಬಿಸಿಗೆ ಒಟ್ಟು ಶೇ.51 ರಷ್ಟು ಮೀಸಲಾತಿ ಜಾರಿಗೆ ತಂದವರು ಯಾರು? ಹಾಗೆಯೇ ಅದನ್ನು ವಿರೋಧಿಸಿದವರು ಯಾರು? ಅಂದು ಇದೇ ಯಡಿಯೂರಪ್ಪ, ಈಶ್ವರಪ್ಪ ಪ್ರಶ್ನೆ ಮಾಡಿದ್ರಾ, ಶೋಷಿತರ ಅಭಿವೃದ್ಧಿ ಬಗ್ಗೆ ಚಿಂತಿಸಿದ್ರಾ ಎಂದು ಪ್ರಶ್ನಿಸಿದರು.

ಶೋಷಿತರು ದೊಡ್ಡ ಧ್ವನಿಯಾದಾಗ, ಸಂಘಟತನಾತ್ಮಕವಾಗಿ ಶಕ್ತಿಯುತವಾದಾಗ ಮಾತ್ರ ನಮ್ಮ ಹಕ್ಕು ಪಡೆಯಲು ಸಾಧ್ಯವಾಗುತ್ತೆ ಇಲ್ಲಾಂದ್ರೆ ನ್ಯಾಯ ವಿಳಂಬವಾಗ್ತದೆ. ಶೋಷಿತರಿಗೆ ಸಮಾಜದಲ್ಲಿನ ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ಸಿಕ್ಕಾಗ ಮಾತ್ರ ನಮಗೆ ಸಿಕ್ಕಿರುವ ದೇಶದ ಸ್ವಾತಂತ್ರ್ಯ ಸಾರ್ಥಕವಾಗುತ್ತದೆ ಎಂದು ಹೇಳಿದರು. ಅರ್ಜುನ್‌ಸಿಂಗ್ ಅವರು ಮಾನವ ಸಂಪನ್ಮೂಲ ಸಚಿವರಾಗಿದ್ದಾಗ ಸಂವಿಧಾನದಲ್ಲಿ ತಿದ್ದುಪಡಿ ತಂದು ಉನ್ನತ ಶಿಕ್ಷಣದಲ್ಲಿಯೂ ಮೀಸಲಾತಿ ತಂದರು. ಅದನ್ನು ವಿರೋಧಿಸಿದವರು ಇದೇ ಬಿಜೆಪಿಯವರು ಚತುರ್ವಣ ವ್ಯವಸ್ಥೆ ಒಪ್ಪಿದವರು. ಇನ್ನು 1995 ರಿಂದ ಜಿಪಂ, ತಾಪಂಗಳಲ್ಲಿಯೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ತಂದದ್ದು ಸಂವಿಧಾನಕ್ಕೆ 73 ಹಾಗೂ 5ನೇ ತಿದ್ದಪಡಿ ತಂದು ಜಾರಿಗೆ ತಂದವರು ರಾಜೀವ್ ಗಾಂಧಿ ಅವರು, ಅದನ್ನು ವಿರೋಧಿಸಿದವರು ಬಿಜೆಪಿಯವರು. ಈ ಸತ್ಯವನ್ನು ಅರಿಯಿರಿ ಅಪಪ್ರಚಾರಕ್ಕೆ ಬಲಿಯಾಗದರಿ ಎಂದು ಎಚ್ಚರಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಸಂದರ್ಭದಲ್ಲಿ ಶಾಸಕರಾದ ಕೆಪಿಸಿಸಿ ಕಾರ್ಯಾಧ್ಯಕ್ಷಈಶ್ವರ ಖಂಡ್ರೆ, ರಾಜಶೇಖರ ಪಾಟೀಲ್, ರಹೀಮ್ ಖಾನ್‌ಹಾಗೂ ಬಿ. ನಾರಾಯಣ, ವಿಜಯಸಿಂಗ್, ಚಂದ್ರಶೇಖರಪಾಟೀಲ್, ಎಚ್.ಎಂ.ರೇವಣ್ಣ, ಮಾವಳ್ಳಿ ಶಂಕರ, ಜಿಪಂಅಧ್ಯಕ್ಷೆ ಗೀತಾ ಚಿದ್ರಿ, ಪಂಡಿತ ಚಿದ್ರಿ, ಉತ್ತಪ ಪ್ರದೇಶ ಮಾಜಿಸಂಸದೆ ಸಾವಿತ್ರಿಬಾಯಿ ಫುಲೆ, ಅನೀಲಕುಮಾರ ಇದ್ದರು.