Asianet Suvarna News Asianet Suvarna News

ಔರಾದ್‌: ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸಚಿವ ಚವ್ಹಾಣ್ ದಿಢೀರ್ ಭೇಟಿ

ವಸತಿ ನಿಲಯಕ್ಕೆ ಸಚಿವ ಚವ್ಹಾಣ್ ದಿಢೀರ್ ಭೇಟಿವನಮಾರಪಳ್ಳಿ ವಸತಿ ನಿಲಯದಲ್ಲಿ ಮಕ್ಕಳೊಂದಿಗೆ ಸಮಯ ಕಳೆದು ಸಮಸ್ಯೆಗಳನ್ನ ಆಲಿಸಿದ ಸಚಿವ ಚವ್ಹಾಣ್ | ಸ್ವಚ್ಛತೆ ಸೇರಿದಂತೆವಸತಿ ನಿಲಯದ ಅಡುಗೆ ಮನೆ, ಶೌಚಾಲಯ ತಪಾಸಣೆ | ಆಹಾರ ಪದಾರ್ಥಗಳ ಶುಚಿ ರುಚಿಯನ್ನೂ ಪರಿಶೀಲನೆ ನಡೆಸಿದ ಸಚಿವರು| 

Minister Prabhu Chauhan Visit Kittur Chennamma Residential School in Aurad
Author
Bengaluru, First Published Nov 12, 2019, 1:26 PM IST

ಔರಾದ್‌[ನ.12]: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸೋಮವಾರ ತಾಲೂಕಿನ ವನಮಾರಪಳ್ಳಿ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆಯೇ ವಸತಿ ಶಾಲೆಯ ಮಕ್ಕಳು ರಸ್ತೆಗಿಳಿದು ವ್ಯವಸ್ಥೆ ಸರಿಪಡಿಸುವಂತೆ ಪ್ರತಿಭಟನೆ ಮಾಡಿರುವ ಹಿನ್ನೆಲೆ ಸಚಿವ ಪ್ರಭು ಚವ್ಹಾಣ ಅವರ ಭೇಟಿ ಮಹತ್ವ ಪಡೆದುಕೊಂಡಿದ್ದು, ತಾಲೂಕು ಸೇರಿದಂತೆ ಜಿಲ್ಲೆಯ ವಸತಿ ಶಾಲೆಯ ವ್ಯವಸ್ಥೆ ಸರಿಪಡಲು ದಿಟ್ಟ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಿಗ್ಗೆ ಪ್ರಾರ್ಥನಾ ಸಮಯದಲ್ಲಿಯೇ ಸಚಿವಚವ್ಹಾಣ ಭೇಟಿ ನೀಡಿದ್ದು, ವಸತಿ ನಿಲಯದಲ್ಲಿನವಿದ್ಯಾರ್ಥಿ ನಿಲಯದ ಕೊಠಡಿಗಳು, ಭೋಜನಾಲಯ, ಅಡಿಗೆ ಮನೆಯ ಸ್ವಚ್ಛತೆ ಹಾಗೂ ಮಕ್ಕಳಿಗೆ ವಿತರಿಸಲು ತಯಾರಿಸಲಾಗುತ್ತಿದ್ದ ಆಹಾರ ಪದಾರ್ಥಗಳ ಶುಚಿ, ರುಚಿ ಪರಿಶೀಲನೆ ನಡೆಸಿದರು. ಅಡುಗೆ ಸಿಬ್ಬಂದಿ, ವಾರ್ಡನ್ ಹಾಗೂ ಪ್ರಾಂಶುಪಾಲರಿಗೆ ಪ್ರತ್ಯೇಕವಾಗಿ ಕರೆಯಿಸಿ ಕೆಲ ದಿನಗಳ ಹಿಂದೆ ನಡೆದ ಮಕ್ಕಳ ಪ್ರತಿಭಟನೆ ಪುನಃ ಮರುಕಳಿಸದಂತೆ ನೋಡಿಕೊಳ್ಳಬೇಕು. ಗ್ರಾಮೀಣ ಭಾಗದ ಮಕ್ಕಳಿಗೆ ಸರ್ಕಾರ ಎಲ್ಲ ರೀತಿಯಿಂದ ಅನುಕೂಲಗಳನ್ನು ಒದಗಿಸುತ್ತಿದ್ದರೂ ಸಂಬಂಧಿತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಮಕ್ಕಳಿಗೆ ಸೌಲಭ್ಯಗಳನ್ನು ತಲುಪಿಸುವಲ್ಲಿ ವಿಫಲವಾಗುತ್ತಿರುವುದು ಸರಿಯಲ್ಲ ಎಂದರು. 

ವಸತಿ ಶಾಲೆಯ ಅಡುಗೆ ಮನೆ, ಶೌಚಾಲಯ, ಮಕ್ಕಳಿರುವ ಕೊಠಡಿಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು. ಕೂಡಲೇ ಸ್ವಚ್ಛಗೊಳಿಸಬೇಕು. ಪ್ರತಿ ದಿನವೂ ತಪ್ಪದೇ ಸ್ವಚ್ಛತಾ ಕೆಲಸ ಮಾಡಬೇಕು. ಮಕ್ಕಳಿಗೆ ಕುಡಿಯಲುಶುದ್ಧ ನೀರನ್ನೆ ಪೂರೈಸಬೇಕು ಎಂದು ಸೂಚಿಸಿದರು.

ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಆಧ್ಯತೆ ನೀಡಿ, ಉತ್ತಮವಾಗಿ ಪಾಠ ಮಾಡಬೇಕು. ವಿದ್ಯಾಭ್ಯಾಸದಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ವಿಶೇಷ ತರಗತಿಗಳನ್ನು ನಡೆಸಬೇಕು. ಮಕ್ಕಳ ಆಟೋಟಕ್ಕೆ ಅಗತ್ಯವಾದ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಮುಖ್ಯಶಿಕ್ಷಕರಿಗೆ ಹಾಗೂ ಶಿಕ್ಷಕರಿಗೆ ಸೂಚಿಸಿದರು.

ವಸತಿ ಶಾಲೆಯಲ್ಲಿ ಮಕ್ಕಳ ಅನುಕೂಲಕ್ಕಾಗಿ ಘಂಟೆಯ ವ್ಯವಸ್ಥೆ ಮಾಡಿಸುವಂತೆ ಸಚಿವರು 15000 ರು. ನಗದು ಹಣ ನೀಡಿದರು. ಈ ವೇಳೆ ಮುಖ್ಯ ಶಿಕ್ಷಕಿ ಶಕುಂತಲಾ ಬಿರಾದಾರ್, ಮುಖಂಡರಾದ ನಾಗನಾಥ ಮೋರ್ಗೆ, ಬಾಲಾಜಿ ಗಾಯಕವಾಡ, ಸುರೇಶ, ಸಾಯಿನಾಥ ಸೇರಿದಂತೆ ಇನ್ನಿತರರಿದ್ದರು. 

Follow Us:
Download App:
  • android
  • ios