ಏನು ಅರಿಯದ ಪುಟ್ಟ ಕಂದಮ್ಮ. ಕೇವಲ 4 ವರ್ಷ ವಯಸ್ಸು, ನರ್ಸರಿ ಶಾಲೆಗೆ ತೆರಳಿದ್ದ ಈ ಬಾಲಕಿ ಮೇಲೆ ರಾಕ್ಷಸಿ ಕೃತ್ಯ ನಡೆದಿದೆ. ಬಾಲಕಿ ಮೇಲೆ ಅತ್ಯಾ*ರ ಎಸಗಿದ ಘಟನೆ ಬೆಳಕಿಗೆ ಬಂದಿದೆ.

ಬೀದರ್ (ಜು.25) ದೇಶದಲ್ಲೇ ವರದಿಯಾಗುತ್ತಿರುವ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ನಾಗರೀಕರ ಸಮಾಜವ ತಲೆ ತಗ್ಗಿಸುವಂತೆ ಮಾಡಿದೆ. ಬೀದರ್ ಜಿಲ್ಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಅತ್ಯಾ*ರ ಎಸಗಿದ ಘಟನೆ ಬೆಳಕಿಗೆ ಬಂದಿದೆ. ನರ್ಸರಿ ಶಾಲೆಗೆ ತೆರಳಿ, ಮರಳಿ ಬರುವಾಗ ಮಗುವಿನ ಗುಪ್ತಾ*ಗದಿಂದ ರಕ್ತಸ್ರಾವವಾಗುತ್ತಿರುವ ಪತ್ತೆಯಾಗಿದೆ. ಮಗು ಭಯ ಹಾಗೂ ಆಘಾತದಿಂದ ಸಂಪೂರ್ಣ ಅಸ್ವಸ್ಥವಾಗಿದ್ದಾಳೆ. ಇದೀಗ ಬಾಲಕಿಗೆ ತೀವ್ರ ನಿಘಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದರೆ, ಆರೋಪಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

4 ವರ್ಷದ ಬಾಲಕಿ ಮೇಲೆ ಎರಗಿದ ಕಾಮುಕರು

ನರ್ಸಲಿ ತೆರಳುತ್ತಿದ್ದ 4 ವರ್ಷದ ಬಾಲಕಿ ಆಕೆ. ಸ್ವಚ್ಚಂದವಾಗಿ ಆಟವಾಡುತ್ತಾ, ಪೋಷಕರು ತೋಳಲ್ಲಿ ಹಾಯಾಗಿದ್ದ ಪುಟ್ಟ ಕಂದನ ಮೇಲೆ ಈ ಪೈಶಾಚಿಕ ಕೃತ್ಯ ಎಸಗಲಾಗಿದೆ. ನರ್ಸರಿ ಶಾಲೆಗೆ ತೆರಳಿ-ಮರಳಿ ಬರುವ ನಡುವೆ ಈ ಘಟನೆ ನಡೆದಿದೆ. ಆರೋಪಿಯ ಸುಳಿವು ಪತ್ತೆಯಾಗಿಲ್ಲ.

ಶಾಲೆಯಿಂದ ಮರಳಿದ ಬಾಲಕಿ ನೋಡಿ ತಾಯಿಗೆ ಆಘಾತ

ಶಾಲೆಯಿಂದ ಮರಳಿದ ಬಾಲಕಿ ಸಂಪೂರ್ಣ ಅಸ್ವಸ್ಥಗೊಂಡಿದ್ದಳು. ರಕ್ತಸ್ರಾವ ಗಮನಿಸಿದ ತಾಯಿ ಮತ್ತಷ್ಟು ಗಾಬರಿಗೊಂಡಿದ್ದಾರೆ. ಇತ್ತ ಮಗುವಿನ ಆರೋಗ್ಯ ಕೂಡ ಕ್ಷೀಣಿಸಿತೊಡಗಿದೆ. ತಕ್ಷಣವೇ ಮಗುವನ್ನು ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೇ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಗೊಂಡಿದೆ. ಆರೋಪಿ ಕುರಿತು ಯಾವುದೇ ಸುಳಿವು ಪತ್ತೆಯಾಗಿಲ್ಲ. ಆದರೆ ಆರೋಪಿ ಪತ್ತೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.

ಶೀಘ್ರ ಚೇತರಿಕಗೆ ಹಲವರ ಪ್ರಾರ್ಥನೆ

4 ವರ್ಷದ ಕಂದಮ್ಮ ಶೀಘ್ರ ಚೇತರಿಸಿಕೊಳ್ಳಲು ಹಲವರು ಪ್ರಾರ್ಥಿಸಿದ್ದಾರೆ. ಆಸ್ಪತ್ರೆ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಾಲಕಿ ಆರೋಗ್ಯದ ಕುರಿತು ವೈದ್ಯರ ತಂಡ ನಿಘಾವಹಿಸಿದೆ.