ಬೀದರ್: ಋಣ ಸಮಾಧಾನ ಯೋಜನೆ, ಯಾರೂ ತಪ್ಪು ಭಾವಿಸಬಾರದು ಎಂದ ಡಿಸಿ
ಋಣ ಸಮಾಧಾನ ಯೋಜನೆ ಒಂದು ತಿಳುವಳಿಕೆ ಮಾಹಿತಿ ಪತ್ರವಾಗಿದೆ| ಈ ಬಗ್ಗೆ ಯಾರೂ ತಪ್ಪು ಭಾವಿಸಬಾರದು ಎಂದ ಜಿಲ್ಲಾಧಿಕಾರಿ|ಮಹಿಳಾ ರೈತ ಹಾಗೂ ಪುರುಷ ರೈತ ಎಂದು ವಿಂಗಡಿಸಿ ಡಿಸ್ಕೌಂಟ್‌ಗಳನ್ನು ಘೋಷಿಸಿರುವುದು ಸಮಂಜಸವಲ್ಲ ಎಂದು ವರದಿ ಮಾಡಿದ್ದ ಕನ್ನಡಪ್ರಭ, ಸುವರ್ಣ ನ್ಯೂಸ್ |ಈ ಯೋಜನೆಯು 2019 ರ ಡಿಸೆಂಬರ್ 310 ರವರೆಗೆ ಮಾತ್ರ ಇರುತ್ತದೆ| ಈ ಅವಧಿಯೊಳಗೆ ಆಸಕ್ತ ರೈತರು ಯೋಜನೆ ಲಾಭ ಪಡೆದು ಋಣಮುಕ್ತರಾಗಬಹುದು|
ಬೀದರ್[ನ.8]: ಋಣ ಸಮಾಧಾನ ಯೋಜನೆ ಒಂದು ತಿಳುವಳಿಕೆ ಮಾಹಿತಿ ಪತ್ರವಾಗಿದೆ, ಈ ಬಗ್ಗೆ ಯಾರೂ ತಪ್ಪು ಭಾವಿಸಬಾರದು ಎಂದು ಜಿಲ್ಲಾಧಿಕಾರಿ ಡಾ. ಎಚ್.ಆರ್. ಮಹಾದೇವ ಅವರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಾದ್ಯಂತ ರೈತರಿಗೆ ಓಟಿಎಸ್ ಪತ್ರದ ಆತಂಕ ಮನೆ ಮಾಡಿರುವ ಬೆನ್ನಲ್ಲಿಯೇ ಕನ್ನಡಪ್ರಭ, ಸುವರ್ಣ ನ್ಯೂಸ್ ವಿಶೇಷ ವರದಿ ಮಾಡಿ ಸತ್ತವರನ್ನೂ ಬಿಡ್ತಿಲ್ಲ ಬ್ಯಾಂಕ್‌ಗಳು ಎಂಬ ಶೀರ್ಷಿಕೆಯ ಅಡಿಯಲ್ಲಿ ಗಮನಸೆಳೆದಿತ್ತು. ಬ್ಯಾಂಕ್ ಗಳು ಓಟಿಎಸ್ ಪತ್ರ ನೀಡಿರುವುದು ರೈತರಲ್ಲಿ ಆತಂಕ ಮನೆ ಮಾಡಿದೆ. ಅಲ್ಲದೆ ಮಹಿಳಾ ರೈತ ಹಾಗೂ ಪುರುಷ ರೈತ ಎಂದು ವಿಂಗಡಿಸಿ ಡಿಸ್ಕೌಂಟ್‌ಗಳನ್ನು ಘೋಷಿಸಿರುವುದು ಸಮಂಜಸವಲ್ಲ ಎಂದಿತ್ತು.
ಸತ್ತವರ ಮನೆಗೂ ನೋಟಿಸ್ ನೀಡ್ತಿವೆ ಬ್ಯಾಂಕ್‌ಗಳು: ಕಂಗಾಲಾದ ರೈತಾಪಿ ವರ್ಗ
ಈ ಕುರಿತಂತೆ ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದು, ಈ ಯೋಜನೆಯು 2019 ರ ಡಿಸೆಂಬರ್ 310 ರವರೆಗೆ ಮಾತ್ರ ಇರುತ್ತದೆ. ಈ ಅವಧಿಯೊಳಗೆ ಆಸಕ್ತ ರೈತರು ಯೋಜನೆ ಲಾಭ ಪಡೆದು ಋಣಮುಕ್ತರಾಗಬೇಕು. ಈ ಅವಧಿಯೊಳಗೆ ಆಸಕ್ತ ರೈತರು ಯೋಜನೆಯ ಲಾಭ ಪಡೆದು ಋಣಮುಕ್ತರಾಗಬೇಕು. ಇದು ಒತ್ತಾಯಪೂರ್ವಕವಾಗಿ ಇರುವುದಿಲ್ಲ. ಸ್ವ-ಇಚ್ಛೆಯಿಂದ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು. ರೈತರನ್ನು ಸಂಪೂರ್ಣ ಋಣಮುಕ್ತರನ್ನಾಗಿಸಲು ಋಣ ಸಮಾಧಾನ ಯೋಜನೆ ಸಹಾಯವಾಗಲಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.