ಬೆಂಗಳೂರು, [ಅ.14]: ಬೆಂಗ್ಳೂರಲ್ಲಿ ಮನೆ ಮುಂದೆ ನಿಲ್ಲಿಸಿರೋ ಗಾಡಿಗಳನ್ನ ಬಿಡಲ್ಲ ಮರಾಯ ಎನ್ನುವ ಮಾತು ಹಳ್ಳಿಗಳಲ್ಲಿ ಮಾತಾಡ್ತಾರೆ. ಕೇವಲ ಬೈಕ್ ಮಾತ್ರವಲ್ಲ ಮಾರಾಯ್ರೆ ಈಗ ಸಿಲಿಕಾನ್ ಸಿಟಿಯಲ್ಲಿ ಮನೆಯ ಟೆರೇಸ್‌ ಮೇಲೆ ಒಣಗಿ ಹಾಕಿದ ಮಹಿಳೆಯರ ಒಳಉಡುಪುಗಳೂ ಸಹ ಕಳ್ಳತನವಾಗ್ತಿವೆ.

ಹೌದು...ಇದು ಅಚ್ಚರಿ ಅನ್ನಿಸಿದರೂ ಸತ್ಯ. ಹಲಸೂರು ಕೆರೆ ಸಮೀಪದ ಕಲ್ಲಹಳ್ಳಿಯಲ್ಲಿರೋ ಅಪಾರ್ಟ್‌ಮೆಂಟ್‌ವೊಂದರ ನಿವಾಸಿಗಳಿಗೆ ಇಂತಹದೊಂದು  ತಲೆನೋವು ಶುರುವಾಗಿದೆ. ಮನೆ ಟೆರೇಸ್‌ ಮೇಲೆ ತೊಳೆದ ಒಣಗಿ ಹಾಕಿದ ಬಟ್ಟೆಗಳ ಪೈಕಿ ಕೇವಲ ಮಹಿಳೆಯರ ನೈಟಿ, ಪೆಟ್ಟಿಕೋಟ್ ಹಾಗೂ ಒಳ ಉಡುಪುಗಳನ್ನು ಮಾತ್ರ ಮಾಯವಾಗುತ್ತಿವೆ.

BMTC ಬಸ್‌ಗೆ ವಿಶೇಷ ದಾರಿ; ಪ್ರಯಾಣಿಕರೇ ನೆಮ್ಮದಿಯಿಂದ ಮಾಡಿ ಸವಾರಿ!

ಹೆಣ್ಮಕ್ಳ ಒಳಉಡುಪುಗಳು ಸೇರಿದಂತೆ ಚಪ್ಪಲಿಗಳನ್ನೂ ಕಳ್ಳರು ಬಿಡುತ್ತಿಲ್ಲ. ರಾತ್ರಿ 9.45 ರಿಂದ 10 ಗಂಟೆ ಸುಮಾರಿಗೆ ಇಂಥಾ ಘಟನೆಗಳು ನಡೆಯುತ್ತಿವೆ ಎನ್ನುವುದು ಸ್ಥಳೀಯರ ಮಾತು.

ಇದು ಯಾರ ಕೃತ್ಯ ಇರಬಹುದು ಅನ್ನೋದು ಯಾರಿಗೂ ಗೊತ್ತಾಗುತ್ತಿಲ್ಲ. ಡ್ರಗ್ಸ್‌ ವ್ಯಸನಿಗಳು ಇಂಥಾದ್ದೊಂದು ಕೃತ್ಯ ಎಸಗುತ್ತಿರಬಹುದು ಅನ್ನೋ ಸಂಶಯವನ್ನು ವ್ಯಕ್ತಪಡಿಸಿದ್ದಾರೆ. ಆದ್ರೆ ಖಚಿತತೆ ಇಲ್ಲ. ಇದ್ರಿಂದ ಇಲ್ಲಿನ ನಿವಾಸಿಗಳು ಪುಂಡರ ಉಪಟಳಕ್ಕೆ ರೋಸಿಹೋಗಿದ್ದಾರೆ.

12 ಕಡೆ ಪ್ರತ್ಯೇಕ ಬಸ್‌ ಮಾರ್ಗ ನಿರ್ಮಾಣ

ಈ ಬಗ್ಗೆ ಪೊಲೀಸರಿಗೂ ಸ್ಥಳೀಯರು ದೂರು ನೀಡಿದ್ಧಾರೆ. ಪೊಲೀಸರೂಂತೂ ತಾವು ಬೀಟ್ ಪ್ರಕಾರ ಕಾರ್ಯ ನಿರ್ವಹಿಸುತ್ತಿರೋದಾಗಿ ಹೇಳ್ತಾರೆ, ಆದ್ರೆ, ಪರಿಹಾರ ಮಾತ್ರ ಸಿಕ್ಕಿಲ್ಲ. ಅಷ್ಟೇ ಅಲ್ಲ, ಸಿಸಿಟಿವಿ ಅಳವಡಿಸುವಂತೆಯೂ ಪೊಲೀಸ್ ಕಮೀಷನರ್ ಮನವಿ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಲೀಸ್ ಕಮೀಷನರ್, ಸಿಸಿಟಿ ಅಳವಡಿಸುವಂತೆ ಸರ್ವಜ್ಞ ನಗರ ವಾರ್ಡ್‌ ಕಾರ್ಪೊರೇಟರ್  ಶಶಿರೇಖಾ ಮುಕುಂದ್ ಗೆ ಮನವಿ ಮಾಡಿದ್ದಾರೆ. ಆದ್ರೆ  ಕಾರ್ಪೊರೇಟರ್ ಇದ್ಯಾವುದಕ್ಕೂ ತಲೆಕೆಡಿಸಿಕೊಂಡಿಲ್ಲ. ಮತ್ತೊಂದು ಗಂಭೀರ ವಿಚಾರ ಅಂದ್ರೆ ಈ ಅಪಾರ್ಟ್‌ಮೆಂಟ್‌ಗಳಲ್ಲಿ ಒಬ್ಬೇ ಒಬ್ಬ ಸೆಕ್ಯುರಿಟಿ ಗಾರ್ಡ್‌ ಇಲ್ಲ. ಇದ್ರಿಂದಲೇ ಈ ರೀತಿ ಪ್ರಕರಣಗಳು ನಡೆಯುತ್ತಿವೆ. 

ಅಷ್ಟಕ್ಕೂ ಕೇವಲ ಹೆಣ್ಮಕ್ಳ ಒಳಉಡುಪುಗಳನ್ನೇ ಏಕೆ ಕದಿಯುತ್ತಾರೆ? ಇವರು ಕಳ್ಳರೋ? ಅಥವಾ ವಿಕೃತ ಕಾಮಿಗಳೋ? ಒಳಉಡುಪುಗಳನ್ನು ಕದ್ದಾದರೂ ಏನು ಮಾಡ್ತಾರೆ? ಎನ್ನುವುದನ್ನು ಸಿಕ್ಕಾಕೊಂಡಾಗ ಅವರನ್ನೇ ಕೇಳಿದಾಗ ಮಾತ್ರ ಈ ಎಲ್ಲಾ ಪ್ರಶ್ನೆಗಳಿ ಉತ್ತರ ಸಿಗಬಹುದೇನೋ.

ಇತ್ತೀಚೆಗೆ ಬೆಂಗಳೂರಿನಲ್ಲಿರುವ ಮಹಾರಾಣಿ ಕಾಲೇಜು ಮಹಿಳಾ ಹಾಸ್ಟೆಲ್ ಟೆರೇಸ್‌ ಮೇಲೆ ಯುವತಿಯ ಒಳಉಡುಪುಗಳನ್ನ ಕದಿಯುತ್ತಿದ್ದ ಓರ್ವ ಸೈಕೋನನ್ನು ಪೊಲೀಸರು ಬಂಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.