Asianet Suvarna News Asianet Suvarna News

ಬೆಂಗಳೂರು ಟ್ರಾಫಿಕ್ ಪಿತಾಮಹ, ಸೋಶಿಯಲ್ ಮೀಡಿಯಾ ಗುನ್ನ.. ಸಖತ್ ಮಜಾ ಇದೆ!

ಸೋಶಿಯಲ್ ಮೀಡಿಯಾದಲ್ಲಿ ಪ್ರತಿಧ್ವನಿಸಿದ ಬೆಂಗಳೂರು ಟ್ರಾಫಿಕ್ ಸಮಸ್ಯೆ/ ಸಾವಿರಾರು ಟ್ವೀಟ್ ಗಳು/ ನೂರಾರು ಹೊಸ ಹೊಸ ಐಡಿಯಾಗಳು

Twitterati watches on with laughter as Bengaluru Traffic comes to halt
Author
Bengaluru, First Published Oct 15, 2019, 7:34 PM IST

ಬೆಂಗಳೂರು(ಅ.15)  ಬೆಂಗಳೂರು ಟ್ರಾಫಿಕ್ ಬಗ್ಗೆ ಹೊಸದಾಗಿ ಹೇಳುವುದು ಏನಿದೆ? ಪ್ರತಿ ದಿನ ಅದೆಷ್ಟೋ ಜನ ಶಾಪ ಹಾಕುತ್ತಲೇ ಇರುತ್ತಾರೆ. ಮಾಧ್ಯಮಗಳು ಮತ್ತು ಪತ್ರಿಕೆಯಲ್ಲಿ ಅಂಥ ದೊಡ್ಡ ಚರ್ಚೆಗಳೇನೂ ಆಗುವುದಿಲ್ಲ ಬಿಡಿ. 

ಆದರೆ ಅಕ್ಟೋಬರ್ 14 ರಂದು ಅದು ಹೇಗೆ ಟ್ರಾಫಿಕ್ ನಲ್ಲಿ ಮಹಾನಗರದ ಜನ ಸಿಕ್ಕಿ ಹಾಕಿಕೊಂಡಿದ್ದರು ಎಂಬುದನ್ನು ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿಯಲ್ಲಿ ವಿಡಂಬನಾತ್ಮಕವಾಗಿ ಬಣ್ಣಿಸಿದೆ.

ಜನರು ಟ್ರಾಫಿಕ್ ನಿಯಮಗಳನ್ನು ಜವಾಬ್ಗದಾರಿಯುತವಾಗಿ ಪಾಲನೆ ಮಾಡುತ್ತಿಲ್ಲ ಎಂಬ ಆರೋಪ ಬಂದಿದ್ದಕ್ಕೂ ಈ ಟ್ರಾಫಿಕ್ ಸಮಸ್ಯೆ ದೊಡ್ಡ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯಿತು.

ನೂರಾಮೂರು ಸಾರಿ ಉಲ್ಲಂಘನೆ ಮಾಡಿದವ 104ನೇ ಸಾರಿ ಸಿಕ್ಕಿಬಿದ್ದ, ದಂಡ ಎಷ್ಟು ಬಿತ್ತು?

ಟ್ರಾಫಿಕ್ ಸಮಸ್ಯೆಗೆ ಮಾತ್ರ ಸೋಶಿಯಲ್ ಮೀಡಿಯಾದ ಡಿಸ್ಕಶನ್ ನಿಲ್ಲಲಿಲ್ಲ. ನಿಧಾನವಾಗಿ ರಾಜಕಾರಣದ ಟರ್ನ್ ಪಡೆದುಕೊಂಡಿತು.

ನಮಗೆ ಅತ್ಯುತ್ತಮ ಗುಣಮಟ್ಟದ ರಸ್ತೆ ಬೇಕು, ಸಾರ್ವಜನಿಕ ಸಂಪರ್ಕ ಸಾರಿಗೆ ಇನ್ನಷ್ಟು ಉತ್ತಮವಾಗಬೇಕು, ಕಸ ಸಮಸ್ಯೆಗೆ ಮುಕ್ತಿ ಕಾಣಬೇಕು, ಕುಡಿಯುವ ನೀರು ಸಮಸ್ಯೆ ಸಂಪೂರ್ಣ ಬಗೆಹರಿಯಬೇಕು. ಮುಂದಿನ ಐದು ವರ್ಷದಲ್ಲಿ ಈ ಎಲ್ಲ ಕೆಲಸಗಳು ಆಗಬೇಕು ಎಂಬ ಒತ್ತಾಯ ಜೋರಾಗಿಯೇ ಕೇಳಿಬಂತು.

ಕೆಲವು ಟ್ವೀಟ್ ಗಳು ಟ್ರಾಫಿಕ್ ಮುಕ್ತ ಬೆಂಗಳೂರು ಹೇಗೆ? ಎಂಬ ಸಲಹೆಗಳನ್ನು ನೀಡಿದವು. ಸಾರ್ವಜನಿಕ ಸಾರಿಗೆ ಮಹತ್ವವನ್ನು ಕೆಲವರು ಸಾರಿದರು.

ಕಳೆದ ಚುನಾವಣೆಯಲ್ಲಿ ಬೆಂಗಳೂರಿಗರು ಮತದಾನ ಮಾಡಿದ್ದಾರೆಯೇ? ಈಗ ಟ್ರಾಫಿಕ್ ಬಗ್ಗೆ ಮಾತನಾಡಲು ಅಂಥವರಿಗೆ ಹಕ್ಕು ಇದೆಯೇ? ಎಂಬ ಪ್ರಶ್ನೆಗಳು ತೂರಿ ಬಂದವು...

 

 

Follow Us:
Download App:
  • android
  • ios