Asianet Suvarna News Asianet Suvarna News

ನಗರದ 85 ರಸ್ತಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್

ಸ್ಮಾರ್ಟ್ ಪಾರ್ಕಿಂಗ್’ ಹೆಸರಿನಲ್ಲಿ ಬಿಬಿಎಂಪಿ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಚಾಲನೆ ನೀಡಲು ಮುಂದಾಗಿದ್ದು, ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ‘ಕಸ್ತೂರ್ ಬಾ ರಸ್ತೆ’ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. 

Smart Parking Servive in 85 Roads in Bengaluru
Author
Bengaluru, First Published Nov 7, 2019, 7:55 AM IST

ವಿಶ್ವನಾಥ ಮಲೆಬೆನ್ನೂರು

ಬೆಂಗಳೂರು [ನ.07]:  ಬಿಬಿಎಂಪಿಯು ‘ಸ್ಮಾರ್ಟ್ ಪಾರ್ಕಿಂಗ್’ ಹೆಸರಿನಲ್ಲಿ ಪಾರ್ಕಿಂಗ್ ಶುಲ್ಕ ಸಂಗ್ರಹಕ್ಕೆ ಚಾಲನೆ ನೀಡಲು ಮುಂದಾಗಿದ್ದು, ಈ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ‘ಕಸ್ತೂರ್ ಬಾ ರಸ್ತೆ’ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮಾಸಾಂತ್ಯದೊಳಗೆ ಈ ರಸ್ತೆಯಲ್ಲಿ ‘ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆ’ ಜಾರಿಗೆ ಬರಲಿದೆ.

ಸಾರ್ವಜನಿಕ- ಖಾಸಗಿ ಸಹಭಾಗಿತ್ವದಲ್ಲಿ ಬಿಬಿಎಂಪಿಯು ನಗರದ 85 ರಸ್ತೆಗಳಲ್ಲಿ ‘ಸ್ಮಾರ್ಟ್ ಪಾರ್ಕಿಂಗ್’ ವ್ಯವಸ್ಥೆ ಜಾರಿಗೆ ಯೋಜನೆ ಸಿದ್ಧಪಡಿಸಿ, ಕಾರ್ಯಾದೇಶ ನೀಡಿದೆ. ವಾಹನ ನಿಲುಗಡೆಗೆ ಬೇಕಾದ ಸಿದ್ಧತೆಗೆ ಗುತ್ತಿಗೆದಾರರಿಗೆ 8 ತಿಂಗಳು ಕಾಲಾವಕಾಶ ನೀಡಲಾಗಿದೆ. ನವೆಂಬರ್ ಅಂತ್ಯದೊಳಗೆ ಕಸ್ತೂರಿ ಬಾ ರಸ್ತೆಯಲ್ಲಿ ಡಿಜಿಟಲ್ ಆಧಾರಿತ ಶುಲ್ಕ ಪಾವತಿಸುವ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಸುಮಾರು 700 ಮೀಟರ್ ಉದ್ದದ ಕಸ್ತೂರಿ ಬಾ ರಸ್ತೆಯ ಒಂದು ಭಾಗದಲ್ಲಿ ಬೈಕ್ ಹಾಗೂ ಕಾರು ಸೇರಿದಂತೆ ಒಟ್ಟು 200 ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ವಾಹನಗಳ ಸುರಕ್ಷತೆಗೆ ನಿಲುಗಡೆ ಸ್ಥಳದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತದೆ.

ವಾರ್ಷಿಕ 31 ಕೋಟಿ ಆದಾಯ: ಗುತ್ತಿಗೆ ಪಡೆದಿರುವ ಸಂಸ್ಥೆ 85 ರಸ್ತೆಗಳಲ್ಲಿ ಸ್ಮಾರ್ಟ್ ಪಾರ್ಕಿಂಗ್‌ಗೆ ಬೇಕಾದ ಮೂಲಸೌಕರ್ಯ ಅಳವಡಿಕೆ ಮಾಡಬೇಕು. ಪಾಲಿಕೆಗೆ ವರ್ಷಕ್ಕೆ 31 ಕೋಟಿಯಂತೆ ಮುಂದಿನ 10 ವರ್ಷದಲ್ಲಿ ಪಾಲಿಕೆಗೆ ಶುಲ್ಕ ಪಾವತಿಸಬೇಕು. ಹತ್ತು ವರ್ಷಕ್ಕೆ ಬಿಬಿಎಂಪಿಗೆ ಸುಮಾರು 315.60 ಕೋಟಿ ಆದಾಯ ಬರಲಿದೆ. 85 ರಸ್ತೆಗಳಲ್ಲಿ 3,600 ಕಾರುಗಳು ಹಾಗೂ 10 ಸಾವಿರ ದ್ವಿಚಕ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗುತ್ತಿದೆ

ರಸ್ತೆಗಳು : ಕಸ್ತೂರ್ ಬಾ ರಸ್ತೆ, ಅವೆನ್ಯೂ, ರೇಸ್‌ಕೋರ್ಸ್, ಕನ್ನಿಂಗ್‌ಹ್ಯಾಮ್, ಕಮರ್ಶಿಯಲ್ ಸ್ಟ್ರೀಟ್, ಎಸ್‌ಸಿ ರೋಡ್, ಡಿಕನ್ಸನ್ ರೋಡ್, ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ರಾಜಾರಾಮ್ ಮೋಹನ್ ರಾಯ್ ರಸ್ತೆ, ಮಲ್ಯ ಆಸ್ಪತ್ರೆ ರಸ್ತೆ, ರೆಸಿಡೆನ್ಸಿ ರಸ್ತೆ, ಎನ್‌ಆರ್ ರಸ್ತೆ, ಎಸ್‌ಪಿ ರೋಡ್, ೬ನೇ ಕ್ರಾಸ್, 5 ನೇ ಮುಖ್ಯ ರಸ್ತೆ, ಧನ್ವಂತರಿ ರಸ್ತೆ, ನೃಪತುಂಗ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಡಿಸ್ಟಿಕ್ಟ್ ಆಫೀಸ್ ರಸ್ತೆ, ಕಾಳಿದಾಸ ರಸ್ತೆ, ಲಿಂಕ್ ರೋಡ್, ರಾಮಚಂದ್ರ ರಸ್ತೆ, ರೈಲ್ವೆ ಪ್ಯಾರಲಲ್ ರಸ್ತೆ, ಪ್ಯಾಲೇಸ್ ಕ್ರಾಸ್ ರಸ್ತೆ, ಮೈನ್ ಗಾರ್ಡ್ ಕ್ರಾಸ್ ರಸ್ತೆ, ಲೇಡಿ ಕರ್ಜನ್ ರಸ್ತೆ, ಕ್ರೆಸೆಂಟ್ ರಸ್ತೆ, ಮಿಲ್ಲರ್ಸ್‌ ರಸ್ತೆ, ಮಿಲ್ಲರ್ಸ್ ಟ್ಯಾಂಕ್ ಬಂಡ್ ರಸ್ತೆ, ಅಲಿಸ್ಕರ್ ರಸ್ತೆ, ಸೇಂಟ್ ಜಾನ್ಸ್ ಚರ್ಚ್ ರಸ್ತೆ, ಕೆನ್ಸಿಂಗ್‌ಟನ್ ರಸ್ತೆ, ವೀರಪಿಳ್ಳೈ ರಸ್ತೆ, ಡಿಸ್ಪೆನ್ಸರಿ ರಸ್ತೆ, ಇಬ್ರಾಹಿಂ ಸಾಹೇಬ್ ಸ್ಟ್ರೀಟ್, ಮೀನಾಕ್ಷಿ ಕೋಯಿಲ್ ರಸ್ತೆ, ನಾರಾಯಣಪಿಳ್ಳೈ ರಸ್ತೆ, ಸೆಪ್ಪಿಂಗ್ಸ್ ರೋಡ್, ಧರ್ಮರಾಜ ಕೋಯಿಲ್ ಸ್ಟ್ರೀಟ್, ಹೈನೆಸ್ ರೋಡ್, ಹಾಸ್ಪಿಟಲ್ ರಸ್ತೆ, ಕಾಮರಾಜ ರಸ್ತೆ, ಗಂಗಾಧರ ಚೆಟ್ಟಿರಸ್ತೆ, ವುಟ್ ಸ್ಟ್ರೀಟ್, ಕ್ಯಾಸ್ಟ್ಯೆಲ ಸ್ಟ್ರೀಟ್, ಬ್ರುಂಟನ್ ರೋಡ್, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ಸ್ ರಸ್ತೆ, ಚರ್ಚ್ ಸ್ಟ್ರೀಟ್, ಗ್ರ್ಯಾಂಟ್ ರೋಡ್, ಹೇಯಸ್ ರಸ್ತೆ, ಕಾನ್ವೆಂಟ್ ರಸ್ತೆ, ಪಂಪ ಮಹಾಕವಿ ರಸ್ತೆ, 2 ನೇ ಮುಖ್ಯರಸ್ತೆ, ೩ನೇ ಕ್ರಾಸ್ ಮಿಶನ್ ರಸ್ತೆ, ಬಿವಿಕೆ ಅಯ್ಯಂಗಾರ್ ರಸ್ತೆ, ಚಿಕ್ಕಪೇಟೆ ಮುಖ್ಯರಸ್ತೆ, ಎ.ಎಸ್ ಚಾರ್ ರಸ್ತೆ, ಬಳೆಪೇಟೆ ಮುಖ್ಯರಸ್ತೆ, ಬನ್ನಪ್ಪ ಪಾರ್ಕ್ ರಸ್ತೆ, ಕಬ್ಬನ್‌ಪೇಟೆ ಮುಖ್ಯರಸ್ತೆ, ಹಾಸ್ಪಿಟಲ್ ರಸ್ತೆ, ಕೆ.ವಿ.ಟೆಂಪಲ್ ರೋಡ್, ಕಿಲಾರಿ ರಸ್ತೆ, ನಗರ್ತ ಪೇಟೆ ಮುಖ್ಯರಸ್ತೆ, ಪೊಲೀಸ್ ಸ್ಟೇಷನ್ ರಸ್ತೆ, ಆರ್.ಟಿ.ಸ್ಟ್ರೀಟ್, ಸುಲ್ತಾನ್‌ಪೇಟೆ ಮುಖ್ಯರಸ್ತೆ, ಸ್ಯಾಂಕಿ ರೋಡ್,  8ನೇ ಮುಖ್ಯರಸ್ತೆ, ಜಸ್ಮಾ ಭವನ್ ರಸ್ತೆ, ಎಡ್ವರ್ಡ್ ರಸ್ತೆ, ಅಣ್ಣಾಸ್ವಾಮಿ ರಸ್ತೆ, ತಿಮ್ಮಯ್ಯ ರಸ್ತೆ, ಬ್ರಾಡ್ವೇ ರಸ್ತೆ, ಸೇಂಟ್ ಜಾನ್ಸ್ ರಸ್ತೆ, ಓಸ್ಬಾಮೆ ರಸ್ತೆ, ಶಿವಾಜಿ ರಸ್ತೆ, ಚಿಕ್ಕ ಬಜಾರ್ ರಸ್ತೆ, ಜೈನ್ ಟೆಂಪಲ್ ರಸ್ತೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆ್ಯಪ್ ಮಾಹಿತಿ : ಪಾರ್ಕಿಂಗ್ ಶುಲ್ಕ ವಸೂಲಿ ಮತ್ತು ಟಿಕೆಟ್ ನೀಡುವುದಕ್ಕೆ ಪಾರ್ಕಿಂಗ್ ಮೀಟರ್ ಯಂತ್ರಗಳನ್ನು ಅಳವಡಿಸಲಾಗುತ್ತಿದೆ. ಸವಾರರು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಪ್ರತಿದಿನ ವಾಹನ ನಿಲ್ಲಿಸುವುರಾದರೆ ಸ್ಮಾರ್ಟ್ ಕಾರ್ಡ್ ಪಡೆದುಕೊಂಡು ಶುಲ್ಕ ಪಾವತಿಸಲು ಅವಕಾಶ ಇರುತ್ತದೆ. ಇನ್ನು ಸ್ಮಾರ್ಟ್ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಮೊಬೈಲ್ ಆ್ಯಪ್ ಅಭಿವೃದ್ಧಿ ಪಡಿಸಿದ್ದು, ಇದನ್ನು ಡೌನ್‌ಲೋಡ್ ಮಾಡಿಕೊಂಡರೆ ವಾಹನ ಸವಾರರು ಯಾವ ರಸ್ತೆಯಲ್ಲಿ ಪಾರ್ಕಿಂಗ್ ಜಾಗ ಖಾಲಿ ಇದೆ ಎಂಬುದನ್ನು ತಿಳಿಯ ಬಹುದಾಗಿದೆ. ಅಷ್ಟೇ ಅಲ್ಲ ಮುಂಗಡವಾಗಿಯೂ ತಮ್ಮ ವಾಹನಗಳ ನಿಲುಗ ಡೆಗೆ ಸ್ಥಳವನ್ನು ಕಾಯ್ದಿರಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios