ಸ್ಟಿಂಗ್ ಆಪರೇಷನ್ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಈ ಕುರಿತು ತಮಗೆ ಮೊದಲೇ ಮಾಹಿತಿ ಇತ್ತು ಎಂದು ಬಾಂಬ್ ಸಿಡಿಸಿದ್ದಾರೆ. ಪೂರ್ಣ ವಿವರ ಇಲ್ಲಿದೆ.

ಸ್ಟಿಂಗ್‌ ವಿಚಾರದ ಕುರಿತು ಮೊದಲ ಬಾರಿ ಮೌನ ಮುರಿದ ನನ್ನನ್ನು ಬ್ಲಾಕ್‌ಮೇಲೆ ಮಾಡಲು ಪ್ರಯತ್ನ ಮಾಡಲಾಗಿತ್ತು. ಈ ವರ್ಷದ ಸೆಪ್ಟೆಂಬರ್ ನಲ್ಲಿ ಈ ವಿಚಾರ ಗೊತ್ತಾಯಿತು. ಒಬ್ಬ ಪತ್ರಕರ್ತ ಹಾಗೂ ಮತ್ತೊಬ್ಬ ಮಹಿಳೆ ಇದನ್ನ ಮಾಡಿದ್ದಾರೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು ಎಂದು ಮೊದಲ ಬಾರಿಗೆ ಸ್ಟಿಂಗ್‌ ವಿಚಾರದ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಮಾತಾನಾಡಿದ್ದಾರೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಸತ್ಯ ಗೊತ್ತಾಗಲಿ!

ನನಗೆ ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿಲ್ಲ. ಜನರಿಗೆ ಸತ್ಯ ಗೊತ್ತಾಗಬೇಕೆಂಬ ಕಾರಣಕ್ಕಾಗಿಯೇ ನಾನು ದೂರು ಕೊಟ್ಟಿದ್ದೇನೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ, ಇದೀಗ ಸುಳ್ಳಿನ ಆರೋಪ ಎಂದಿದ್ದಾರೆ. ಅಷ್ಟೇ ಅಲ್ಲ ಇದರಲ್ಲಿ ಯಾವ ಸತ್ಯಾಂಶವೂ ಕೂಡ ಇಲ್ಲ. 8 ವರ್ಷ ಸಿಎಂ ಅವಧಿಯಲ್ಲಿ ಇಂತಹ ಯತ್ನ ನಡೆಯಲಿಲ್ಲ. ಇದು ಈಗ ನಡೆದಿದೆ ಎಂದಿದ್ದಾರೆ.

ಸ್ಟಿಂಗ್ ಮಾಡಿದವರ ಉದ್ದೇಶ ಸಫಲ ಆಗುವುದಿಲ್ಲ!

ಅಲ್ಲದೇ ನನ್ನ ಮೇಲೆ ಯಾವತ್ತು ಇಂತಹ ಆರೋಪ ಬಂದೇ ಇರಲಿಲ್ಲ. ವಿಚಾರ ಗೊತ್ತಾದ ಕೂಡಲೇ ನಾನೇ ಸ್ವಯಂಪ್ರೇರಿತವಾಗಿ ದೂರು ಕೊಟ್ಟಿದ್ದೇನೆ. ನನ್ನ ಪರವಾಗಿ ಯಾರು ಇರುವುದು ಬೇಡ. ನನಗೆ ಯಾರ ನೈತಿಕ ಬೆಂಬಲ ಮತ್ತೊಂದು ಬೇಡ. ಯಾಕೆಂದರೆ ನಾನು ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲ. ತಪ್ಪೇ ಮಾಡಿಲ್ಲದ ಮೇಲೆ ಬೆಂಬಲ ಯಾಕೆ ಬೇಕು. ರಾಜಕೀಯ ಕಾರಣಕ್ಕೆ ಕೆಲವರು ಮಾತನಾಡುತ್ತಿದ್ದಾರೆ, ಮಾತನಾಡಲಿ ಎಂದಿದ್ದಾರೆ.

ನನಗೆ ಸರ್ಕಾರದ ತನಿಖೆ ಮೇಲೆ ಬಂಬಿಕೆ ಇದೆ!

ಮತ್ತೆ ಸುಧೀರ್ಘ ಹೇಳಿಕೆಯತ್ತ ಸಾಗಿದ ಸಿದ್ದರಾಮಯ್ಯ ಇದಕ್ಕೆ ಎಸ್ಐಟಿ ಅಥವಾ ಇನ್ನೂ ಉನ್ನತ ಮಟ್ಟದ ತನಿಖೆ ಅಗತ್ಯ ಇಲ್ಲ. ಈ ನಿಟ್ಟಿನಲ್ಲಿ ಸರ್ಕಾರ ನಡೆಸುವ ತನಿಖೆ ಮೇಲೆ ನನಗೆ ನಂಬಿಕೆ ಇದೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಯಾವ ಹಾದಿಯಲ್ಲಿ ತನಿಖೆ ಸಾಗಿಸುತ್ತದೆಯೋ? ಇದರ ಹಿಂದೆ ಈ ಹಿಂದೆ ಯತೀಂದ್ರ ಸಿದ್ದರಾಮಯ್ಯ ಹೇಳಿದಂತೆ ಸ್ವ ಪಕ್ಷದವರೇ ಇದ್ದಾರಾ? ಅಥವಾ ಬೇರೆ ಯಾರದ್ದಾದರೂ ಕೈ ವಾಡವಿದೆಯಾ ಎನ್ನುವುದನ್ನು ಈಗ ಕಾದು ನೋಡಬೇಕಿದೆ.

ಸಿದ್ದರಾಮಯ್ಯ ಹೇಳಿದ ಅರ್ಥವೇನು!

ಒಂದೆಡೆ ಯತೀಂದ್ರ ಸಿದ್ದರಾಮಯ್ಯನವರ ಈ ಹೇಳಿಕೆ, ಮತ್ತೊಂದೆಡೆ ಸಿದ್ದರಾಮಯ್ಯನವರು ಇಂದು ಹೇಳಿದ ಈ ಹೇಳಿಕೆ ತೀವ್ರವಾಗಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಅಲ್ಲದೇ ಮಾಜಿ ಸಿಎಂ ಕುಮಾಸ್ವಾಮಿ ಅವರು ಹೇಳಿದ್ದ ಕೆಲ ಹೇಳಿಕೆಗಳಿಗೆ ಈಗ ಮತ್ತೆ ಚೈತನ್ಯ ಸಿಕ್ಕಂತಾಗಿದೆ. ಒಟ್ಟಿನಲ್ಲಿ ಸಂಪೂರ್ಣವಾಗಿ, ಇದು ಯಾವ ಹಂತ ತಲುಪತ್ತದೆ ಎನ್ನುವ ವಿಷಯ ಕೂತುಹಲ ಸೃಷ್ಟಿಸಿದೆ.