ಬೆಂಗಳೂರು[ಜೂ. 16]  ಕನ್ನಡಪ್ರಭ ಮತ್ತು ಸುವರ್ಣ ನ್ಯೂಸ್ ಸಹಯೋಗದಲ್ಲಿ ರೋಟರಿ ಕ್ಲಬ್ ನೆಲಮಂಗಲ ‘ರೋಟರಿ ರಸಸಂಜೆ ’ ಕಾರ್ಯಕ್ರಮ ಹಮ್ಮಿಕೊಂಡಿದೆ.

ಜೂನ್ 17, ಸೋಮವಾರ ಸಂಜೆ 5.30ಕ್ಕೆ ತುಮಕೂರು ರಸ್ತೆಯ ಎಂವಿಎಂ ಕನ್ವೆಷನ್ ಹಾಲ್ ನಲ್ಲಿ ರಸಸಂಜೆ ಅನಾವರಣವಾಗಲಿದೆ.  ಕಿರುತೆರೆ ಮತ್ತು ಹಿರಿತೆರೆಯ ಹೆಸರಾಂತ ಕಲಾವಿದರು ಪಾಲ್ಗೊಂಡು ಭರಪೂರ ಮನರಂಜನೆ ನೀಡಲಿದ್ದಾರೆ.

ಕಾರ್ಯಕ್ರಮದಲ್ಲಿ ನಟಿ ಶುಭಾ ಪೂಂಜಾ, ಮಜಾ ಟಾಕೀಸ್​ನ ನಯನಾ, ರೆಮೋ, ಗಾಯಕರಾದ ಚೈತ್ರಾ ಹಾಗೂ ಗೋವಿಂದ್, ಟಿವಿ ರಿಯಾಲಿಟಿ ಶೋ ವಿನ್ನರ್​​ ಮಧುಸೂಧನ್ ಹಾಗೂ ಕನ್ನಡ ಕೋಗಲೆ ಖ್ಯಾತಿಯ ಅರ್ಜುನ್ ಇಟಗಿ , ವಾಸಿಮ್, ಮಿಮಿಕ್ರಿ ಗೋಪಿ ಸೇರಿದಂತೆ ಅನೇಕರು ಮನರಂಜಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ ಮಂಜುನಾಥ್ ಪಾಟೀಲ್-9845147054, ಇಟಿ ಕೇರ್ ರಾಜು-9448000064, ಕೆ. ಮಂಜುನಾಥ್-9902885888, ಸಿಜಿ ಮಂಜುನಾಥ ಗೌಡ-9844044788, ಲೊಕೇಶ್- 9513336626, ಎಂ.ಎನ್ ಹರೀಶ್ ಕುಮಾರ್- 9845165732ಗೆ ಸಂಪರ್ಕಿಸಬಹುದು. ಕಾರ್ಯಕ್ರಮದಲ್ಲಿ ಸಂಗ್ರಹವಾದ ಮೊತ್ತವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸುವುದುದಾಗಿ ಸಂಘಟಕರು ತಿಳಿಸಿದ್ದಾರೆ.

"