Asianet Suvarna News Asianet Suvarna News

ಹಿರಿಯ ಕವಿ ಪ್ರೊ. ನಿಸಾರ್‌ ಅಹಮದ್‌ಗೆ ‘ಕನ್ನಡ ರತ್ನ’ ಪ್ರಶಸ್ತಿ

‘ಕನ್ನಡ ರತ್ನ’ ಪ್ರಶಸ್ತಿಗೆ ಹಿರಿಯ ಕವಿ ಕೆ.ಎಸ್‌.ನಿಸಾರ್‌ ಅಹಮದ್‌ ಭಾಜನ| ಡಾ.ವಿಷ್ಣು ಸೇನಾ ಸಮಿತಿ ‘ಕನ್ನಡ ರಾಜ್ಯೋತ್ಸವ’ ಪ್ರಯುಕ್ತ ಕೊಡಮಾಡುವ ಪ್ರಶಸ್ತಿ| ಡಾ.ವಿಷ್ಣುವರ್ಧನ್‌ ನೆನಪಿನಲ್ಲಿ ಪ್ರತಿ ರಾಜ್ಯೋತ್ಸವದಂದು ಕನ್ನಡಿಗರೊಬ್ಬರಿಗೆ ಈ ಪ್ರಶಸ್ತಿಯನ್ನು ಸಮಿತಿಯು ನೀಡುತ್ತಾ ಬಂದಿದೆ| 

Pro. Nisar Ahmad got Kannada Ratna Award
Author
Bengaluru, First Published Oct 31, 2019, 8:00 AM IST

ಬೆಂಗಳೂರು[ಅ.30]:  ಡಾ.ವಿಷ್ಣು ಸೇನಾ ಸಮಿತಿ ‘ಕನ್ನಡ ರಾಜ್ಯೋತ್ಸವ’ ಪ್ರಯುಕ್ತ ಕೊಡಮಾಡುವ ಪ್ರಸಕ್ತ ಸಾಲಿನ ‘ಕನ್ನಡ ರತ್ನ’ ಪ್ರಶಸ್ತಿಗೆ ಹಿರಿಯ ಕವಿ  ಪ್ರೊ. ಕೆ.ಎಸ್‌.ನಿಸಾರ್‌ ಅಹಮದ್‌ ಭಾಜನರಾಗಿದ್ದಾರೆ.

ಕನ್ನಡದ ಮೇರುನಟ ಡಾ.ವಿಷ್ಣುವರ್ಧನ್‌ ನೆನಪಿನಲ್ಲಿ ಪ್ರತಿ ರಾಜ್ಯೋತ್ಸವದಂದು ಕನ್ನಡಿಗರೊಬ್ಬರಿಗೆ ಈ ಪ್ರಶಸ್ತಿಯನ್ನು ಸಮಿತಿಯು ನೀಡುತ್ತಾ ಬಂದಿದೆ. ಈವರೆಗೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಸಾಹಿತಿ ರಾ.ನಂ.ಚಂದ್ರಶೇಖರ್‌, ಕನ್ನಡ ಪರ ಹೋರಾಟಗಾರ ಶ್ರ.ದೇ.ಪಾಶ್ರ್ವನಾಥ್‌, ಕಸಾಪ ಕಾರ್ಯದರ್ಶಿ ವ.ಚ.ಚನ್ನೇಗೌಡ ಮತ್ತು ಉತ್ತರ ಕರ್ನಾಟಕದ ಶರಣು ಬಿ.ಗದ್ದುಗೆ ಅವರಿಗೆ ನೀಡಿ ಗೌರವಿಸಲಾಗಿದೆ. ಈ ಬಾರಿಯ 6ನೇ ಸಾಲಿನ ಪ್ರಶಸ್ತಿಗೆ ನಿತ್ಯೋತ್ಸವ ಕವಿ ನಿಸಾರ್‌ ಅಹಮದ್‌ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಫಲಪುಷ್ಪ, ಸ್ಮರಣಿಕೆ ಜತೆಗೆ 20 ಸಾವಿರ ರು. ನಗದು ಒಳಗೊಂಡಿದೆ. ಬುಧವಾರ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್‌ ಅವರು ಕೆ.ಎಸ್‌.ನಿಸಾರ್‌ ಅಹಮದ್‌ ಅವರ ನಿವಾಸಕ್ಕೆ ಭೇಟಿ ನೀಡಿ ಸಕಲ ಗೌರವಗಳೊಂದಿಗೆ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ಬಗ್ಗೆ ಮಾತನಾಡಿದ ಕವಿ ಪ್ರೊ. ಕೆ.ಎಸ್‌.ನಿಸಾರ್‌ ಅಹಮದ್‌, ನಟ ಡಾ.ವಿಷ್ಣುವರ್ಧನ್‌ ಅವರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ಸ್ವೀಕರಿಸಲು ಅತ್ಯಂತ ಹರ್ಷ ಪಡುತ್ತೇನೆ ಎಂದು ಹೇಳಿದ್ದಾರೆ. 

Follow Us:
Download App:
  • android
  • ios