‘ನುಡಿದಂತೆ ನಡೆದರೆ ಭಗವಂತನ ಸಾಕ್ಷಾತ್ಕಾರ’
ಬಸವತತ್ವಗಳ ಪರಿಪಾಲನೆ ಇಂದಿನ ಸಮಾಜಕ್ಕೆ ಎಷ್ಟು ಅಗತ್ಯವಾಗಿದೆ ಎಂಬುದನ್ನು ಖ್ಯಾತ ಸಾಹಿತಿ ವೀಣಾ ಬನ್ನಂಜೆ ತೆರೆದಿರಿಸಿದರು.
ಬೆಂಗಳೂರು[ ಜೂ.16] ‘ಭಗವಂತನ ಸಾಕ್ಷಾತ್ಕಾರ ತುಂಬಾ ಕಠಿಣ, ಬಸವಣ್ಣನವರು ತಮ್ಮ ವಚನಗಳಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ. ನುಡಿದಂತೆ ನಡೆಯುವುದು ಶರಣರ ತತ್ವ...ಶರಣರು ಹಾಕಿಕೊಟ್ಟ ಹಾದಿಯಲ್ಲೇ ನಡೆದರೆ ಸಂತೃಪ್ತ ಬದುಕಿನ ಸಾಕ್ಷಾತ್ಕಾರ ಸಾಧ್ಯ’ ಖ್ಯಾತ ಸಾಹಿತಿ ವೀಣಾ ಬನ್ನಂಜೆ ತಿಳಿಸಿದರು.
ಬೆಂಗಳೂರಿನ ಜೀವನ್ ಭೀಮಾ ನಗರದಲ್ಲಿ ಬಸವ ಜಯಂತಿ ಹಾಗೂ ಭಜನಾ ಹಾಡುಗಳ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿ ಶರಣರ ತತ್ವಗಳನ್ನು ಮತ್ತೊಮ್ಮೆ ತೆರೆದಿರಿಸಿದರು.
ನಿವೃತ್ತ ಡಿಐಜಿ ಸಿದ್ದರಾಮಪ್ಪ ಮಾತನಾಡಿ, ಇಂದು ಬದುಕಿನ ಮೌಲ್ಯಗಳು ನಶಿಸುತ್ತಿವೆ, ಹಿರಿಯರು ಮತ್ತು ಪೋಷಕರು ಯುವ ಪೀಳಿಗೆಗೆ ಶರಣರ ತತ್ವ ಸಿದ್ದಾಂತಗಳ ಬಗ್ಗೆ ಹೇಳಬೇಕಿದೆ ಬಸವಣ್ಣ ಹಾಗೂ ಶರಣರ ವಚನಗಳು ಇಂದಿನ ಯುವ ಪೀಳಿಗೆಗೆ ಹೆಚ್ಚು ಮಹತ್ವ ಹಾಗೂ ಪ್ರಸ್ತುತ ಎಂದು ಪ್ರತಿಪಾದಿಸಿದರು.
SSLC ಮತ್ತು PUC ನಲ್ಲಿ ಅತಿ ಹೆಚ್ಚುಅಂಕ ಪಡದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಚಂದ್ರಶೇಖರ್ ಒಡೆಯರ್, ನಿವೃತ್ತ ಅಧಿಕಾರಿ ವೈ.ಆರ್ ಪಾಟೀಲ್ , ಎಸ್. ವಿಶ್ವೇಶ್ವರಪ್ಪ ಮತ್ತು ಜೀವನ್ ಭೀಮಾ ನಗರದ ಬಸವ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.