Asianet Suvarna News Asianet Suvarna News

ನೈಸ್ ರಸ್ತೆ ಬಳಸುವ ಪ್ರಯಾಣಿಕರೇ ಗಮನಿಸಿ; ಟ್ರಾಫಿಕ್ ಕಿರಿಕಿರಿ ತಪ್ಪಿಸಿ!

ಬೆಂಗಳೂರಿನಲ್ಲಿ ನೈಸ್ ರಸ್ತೆಯಲ್ಲಿ ಪ್ರಯಾಣಿಸಿದರೆ ಟ್ರಾಫಿಕ್ ಮುಕ್ತ, ಸಿಗ್ನಲ್ ಸಮಸ್ಯೆಗಳಿಲ್ಲ. ಹೀಗಾಗಿ ಬಹುತೇಕರು ನೈಸ್ ರಸ್ತೆಯನ್ನು ಅವಲಂಬಿಸಿದ್ದಾರೆ. ಇದೀಗ ನೈಸ್ ರಸ್ತೆಯಲ್ಲಿ 3 ತಿಂಗಳ ಕಾಲ ಟ್ರಾಫಿಕ್ ಕಿರಿಕಿರಿ ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಕುರಿತು ನೈಸ್ ರಸ್ತೆ ಅಧೀಕೃತ ಪ್ರಕಟಣೆ ಹೊರಡಿಸಿದೆ.
 

Nice road users traffic would be disturbed for about 3 month due to resurfacing road bengaluru
Author
Bengaluru, First Published Mar 11, 2020, 5:58 PM IST

ಬೆಂಗಳೂರು(ಮಾ.11): ನೈಸ್ ರಸ್ತೆಯಲ್ಲಿ ಪ್ರಯಾಣ ಮಾಡಿದರೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತವಾಗಬಹುದು. ಆದರೆ ಸದ್ಯ ನೈಸ್ ರಸ್ತೆಯಲ್ಲಿ ಕಾಮಗಾರಿಯಿಂದ ಪ್ರಯಾಣಿಕರು ಕಿರಿಕಿರಿ ಅನುಭವಿಸಬೇಕಾಗಿದೆ. ಹೊಸೂರ್ ಟೋಲ್‌ನಿಂದ ತಮುಕೂರು ರೋಡ್ ಟೋಲ್ ವರೆಗಿನ ರಸ್ತೆಯಲ್ಲಿ ಕಾಮಗಾರಿ ಆರಂಭಿಸಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವವರು ಟ್ರಾಫಿಕ್ ಕಿರಿಕಿರಿಗೆ ತುತ್ತಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಇಂದಿನಿಂದ ನೈಸ್ ರಸ್ತೆ ಟೋಲ್‌ನಲ್ಲೂ ಫಾಸ್ಟ್ಯಾಗ್; ನಗದು ವ್ಯವಹಾರ್ ಬಂದ್!

ಇಂದಿನಿಂದ( ಮಾರ್ಚ್ 11 ರಿಂದ) ನೈಸ್ ರಸ್ತೆಯ ಹೊಸೂರ್ ಟೋಲ್‌ನಿಂದ ತಮುಕೂರು ರೋಡ್ ಟೋಲ್ ವರೆಗಿನ  ರಸ್ತೆ ಕಾಮಗಾರಿ ಆರಂಭವಾಗಿದೆ. ಹೀಗಾಗಿ ಸುಮಾರು 2 ಕಿ.ಮೀ ವರೆಗೆ ರಸ್ತೆ ಬಂದ್ ಮಾಡಿ ಒನ್ ವೇ ರಸ್ತೆಯಲ್ಲಿ ಟುವೇ ರಸ್ತೆಯನ್ನಾಗಿ ಮಾಡಲಾಗಿದೆ.  ಸುಮಾರು 3 ತಿಂಗಳ ಕಾಲ ಕಾಮಗಾರಿ ನಡೆಯಲಿದೆ. ಈ ವೇಳೆ ಪ್ರಯಾಣಿಕರಿಗೆ ಸಮಸ್ಯೆಯಾಗಲಿದೆ. ಅಡಚಣೆಗೆ ಕ್ಷಮಿಸಿ ಎಂದು ನೈಸ್ ಅಥಾರಿಟಿ ಪ್ರಕಟಣೆಯಲ್ಲಿ ಹೇಳಿದೆ.

ಹೊಸೂರು ರಸ್ತೆ ಟೋಲ್ ಮೂಲಕ ಸಾಗಿ ತುಮಕೂರು ರೋಡ್ ಟೂಲ್ ವರೆಗಿನ ರಸ್ತೆಯಲ್ಲಿ ಪ್ರಯಾಣಿಸುವವರಿಗೆ ಈ ಸಮಸ್ಯೆಗೆ ಎದುರಾಗಲಿದೆ. ಇನ್ನುಳಿದ ನೈಸ್ ರಸ್ತೆಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ನೈಸ್ ರೋಡ್ ಟೋಲ್ ಮ್ಯಾನೇಜರ್ ಮಯೂಖ ದೇವಾಗ್ನಿ ಎಂ. ಹೇಳಿದ್ದಾರೆ.

Follow Us:
Download App:
  • android
  • ios