ಇಂದಿನಿಂದ ನೈಸ್ ರಸ್ತೆ ಟೋಲ್‌ನಲ್ಲೂ ಫಾಸ್ಟ್ಯಾಗ್; ನಗದು ವ್ಯವಹಾರ್ ಬಂದ್!
ಬೆಂಗಳೂರಿನ ನೈಸ್ ರಸ್ತೆಯಲ್ಲೂ ಇದೀಗ ಫಾಸ್ಟ್ಯಾಗ್ ಕಡ್ಡಾಯಮಾಡಲಾಗಿದೆ. ಕೇಂದ್ರ ರಸ್ತೆ ಸಾರಿಗೆ ಇಲಾಖೆ ಕಡ್ಡಾಯ ನಿಯಮ ಡಿಸೆಂಬರ್ 15 ರಿಂದ ಜಾರಿಯಾಗಲಿದೆ. ಆದರೆ ನೈಸ್ ರಸ್ತೆಯಲ್ಲಿ ಇಂದಿನಿಂದ ಫಾಸ್ಟ್ಯಾಗ್ ಟೋಲ್ ಸಂಗ್ರಹ ಆರಂಭವಾಗಿದೆ.
ಬೆಂಗಳೂರು(ಅ.01): ಟೋಲ್ ಸಂಗ್ರಹ ಮಾದರಿ ಬದಲಾಗಿದೆ. ಎಲ್ಲವೂ ಡಿಜಿಟಲೀಕರಣವಾಗುತ್ತಿದೆ. ಈಗಾಗಲೇ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಫಾಸ್ಟ್ಯಾಗ್ ಮೂಲಕವೇ ಟೋಲ್ ಹಣ ಪಾವತಿ ಕಡ್ಡಾಯಮಾಡಿದೆ. ಡಿಸೆಂಬರ್ 15 ರಿಂದ ದೇಶಾದ್ಯಂತ ಈ ನಿಯಮ ಜಾರಿಯಾಗುತ್ತಿದೆ. ಎಲ್ಲಾ ವಾಹನಗಳು ಫಾಸ್ಟ್ಯಾಗ್ ಕಡ್ಡಾಯವಾಗಿ ಹೊಂದಿರಲೇಬೇಕು. ಇದೀಗ ಬೆಂಗಳೂರಿನ ನೈಸ್ ರಸ್ತೆಯಲ್ಲೂ ಫಾಸ್ಟ್ಯಾಗ್ ಕಡ್ಡಾಯ ಮಾಡಲಾಗಿದೆ. ಈ ನಿಯಮ ಇಂದಿನಿಂದ(ಡಿ.01) ಜಾರಿಯಾಗಿದೆ.
ಇದನ್ನೂ ಓದಿ: ವಾಹನಗಳಿಗೆ ಫಾಸ್ಟ್ಯಾಗ್ ಕಡ್ಡಾಯ, ತಿಳಿದುಕೊಳ್ಳಿ ಮಾಹಿತಿ
ಇದುವರೆಗೆ ನೈಸ್ ರಸ್ತೆಯಲ್ಲಿ ನಗದು ಮೂಲಕವೇ ಟೋಲ್ ಪಾವತಿ ಮಾಡಲಾಗುತ್ತಿತ್ತು. ಕೇಂದ್ರ ಸರ್ಕಾರಗ ಫಾಸ್ಟ್ಯಾಗ್ ಕಡ್ಡಾಯ ನಿಯಮದ ಬೆನ್ನಲ್ಲೇ ನೈಸ್ ರಸ್ತೆ ಕೂಡ ಡಿಜಿಟಲೀಕರಣ ಮಾಡಿದೆ. ನೈಸ್ ರಸ್ತೆಯಲ್ಲಿರುವ 8 ಟೋಲ್ ಪ್ರವೇಶ ದ್ವಾರ ಹಾಗೂ ಹೊರಹೋಗುವ ದ್ವಾರದಲ್ಲಿ ಲೇಸರ್ ಸ್ಕ್ಯಾನರ್ ಹಾಗೂ ಕ್ಯಾಮರ ಅಳವಡಿಸಲಾಗಿದೆ.
ಇದನ್ನೂ ಓದಿ: ಫಾಸ್ಟ್ಯಾಗ್ ಅಳವಡಿಕೆ, ಬಳಕೆ ಕುರಿತ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ:
ನೈಸ್ ರಸ್ತೆಯಲ್ಲಿನ ಪ್ರವೇಶದ್ವಾರದಲ್ಲಿ ಫಾಸ್ಟ್ಯಾಗ್ ಸ್ಕ್ಯಾನ್ ಆಗಲಿದೆ. ಬಳಿಕ ಸಾವರರು ಹೊರಹೋಗುವ ದ್ವಾರದಲ್ಲಿ ಹಣ ಕಡಿತಗೊಳ್ಳಲಿದೆ. ಪ್ರಯಾಣಿಕರ ಪ್ರಯಾಣಕ್ಕೆ ಅನುಗುಣವಾಗಿ ದರ ಕಡಿತಗೊಳ್ಳಲಿದೆ. ಹೊಸೂರು ರೋಡ್, ಬನ್ನೇರ್ಘಟ್ಟ ರೋಡ್, ಕನಕಪರ ರೋಡ್, ಮೈಸೂರು ರೋಡ್, ಮಾಗಡಿ ರೋಡ್, ತುಮಕೂರು ರೋಡ್, ಲಿಂಕ್ ರೋಡ್ ಹಾಗೂ ನೈಸ್ ರೋಡ್ ಇಂಟರ್‌ಚೇಂಜ್‍ಗಲ್ಲಿ ಸ್ಕ್ಯಾನರ್ ಅಳವಡಿಸಲಾಗಿದೆ.
ಕೇಂದ್ರ ಸರ್ಕಾರ ಡಿಸೆಂಬರ್ 1 ರಿಂದ ಫಾಸ್ಟ್ಯಾಗ್ ಕಡ್ಡಾಯ ಮಾಡಿತ್ತು. ಆದರೆ ಕಾಲವಕಾಶ ಕೋರಿ ಹಲವು ಚಾಲಕ ಸಂಘಟನೆಗಳು ಮನವಿ ಮಾಡಿತ್ತು. ಇಷ್ಟೇ ಅಲ್ಲ, ಸಮರ್ಪಕವಾಗಿ ಫಾಸ್ಟ್ಯಾಗ್ ಪೂರೈಕೆಯಾಗದ ಕಾರಣ, ಹೆಚ್ಚಿನ ವಾಹನ ಮಾಲೀಕರು ಫಾಸ್ಟ್ಯಾಗ್ ಖರೀದಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಫಾಸ್ಟ್ಯಾಗ್ ಗಡುವನ್ನು ಡಿಸೆಂಬರ್ 15ಕ್ಕೆ ವಿಸ್ತರಿಸಿದೆ. ಆದರೆ ನೈಸ್ ರಸ್ತೆ ಡಿಸೆಂಬರ್ 1 ರಿಂದಲೇ ಫಾಸ್ಟ್ಯಾಗ್ ಟೋಲ್ ಸಂಗ್ರಹ ಆರಂಭಿಸಿದೆ.
ಡಿಸೆಂಬರ್ 1ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: