Asianet Suvarna News Asianet Suvarna News

ಮಹಿಳೆ ಪ್ರಾಣಕ್ಕೆ ಕುತ್ತು ತಂದ ಗರ್ಭಪಾತದ ಮಾತ್ರೆ: ಬ್ಲೀಡಿಂಗ್ ಹೆಚ್ಚಾಗಿ ಗೃಹಿಣಿ ಸಾವು

ಅಬಾರ್ಶನ್  ಮಾತ್ರೆಯಿಂದ ಬ್ಲಿಡಿಂಗ್ ಹೆಚ್ಚಾಗಿ ಗೃಹಿಣಿ  ಮೃತಪಟ್ಟ  ಆಘಾತಕಾರಿ ಘಟನೆ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ.  ಪ್ರೀತಿ ಕುಶ್ವಾಸ್  ಮೃತ ಮಹಿಳೆ.

mother of one died by heavy bleeding after she swallowing Abortion pill in Banglore akb
Author
First Published Dec 13, 2022, 9:29 PM IST

ಬೆಂಗಳೂರು: ಅಬಾರ್ಶನ್  ಮಾತ್ರೆಯಿಂದ ಬ್ಲಿಡಿಂಗ್ ಹೆಚ್ಚಾಗಿ ಗೃಹಿಣಿ  ಮೃತಪಟ್ಟ  ಆಘಾತಕಾರಿ ಘಟನೆ ಉದ್ಯಾನನಗರಿ ಬೆಂಗಳೂರಿನಲ್ಲಿ ನಡೆದಿದೆ.  ಪ್ರೀತಿ ಕುಶ್ವಾಸ್  ಮೃತ ಮಹಿಳೆ. ಗಂಡನಿಗೆ ತಿಳಿಸದೇ ಪ್ರೀತಿ ಅಬಾರ್ಷನ್ ಮಾತ್ರೆ ತೆಗೆದುಕೊಂಡಿದ್ದು, ಮಾತ್ರೆ ತೆಗೆದುಕೊಂಡ ನಂತರ ಮಹಿಳೆಗೆ ರಕ್ತಸ್ರಾವ ಹೆಚ್ಚಾಗಿದೆ. ನಂತರ ಮಹಿಳೆ ತನ್ನ ಪತಿಗೆ ಈ ವಿಚಾರ ತಿಳಿಸಿದ್ದು, ನಂತರ ಪತಿ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಪ್ರೀತಿ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. 

ಮೃತ ಮಹಿಳೆ ಪ್ರೀತಿಗೆ ಈಗಾಗಲೇ 11 ತಿಂಗಳ ಗಂಡು ಮಗುವಿದ್ದು, ಇತ್ತೀಚೆಗೆ ಮತ್ತೆ ಗರ್ಭ ನಿಂತಿರುವ ಹಿನ್ನೆಲೆಯಲ್ಲಿ ತಪಾಸಣೆ ನಡೆಸಿದಾಗ ಪ್ರೀತಿಗೆ ತಾನು ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಈ ವಿಚಾರವನ್ನು ಮಹಿಳೆ ಪತಿಗೆ ತಿಳಿಸಿದ್ದರು. ಈ ವೇಳೆ ಪತಿ ವೈದ್ಯರಲ್ಲಿಗೆ ತೆರಳುವ ಬಗ್ಗೆ ಪತ್ನಿಗೆ ಹೇಳಿದ್ದಾರೆ. ಆದರೆ ಇದಕ್ಕೆ ಒಪ್ಪದ ಪತ್ನಿ ಪ್ರೀತಿ ಗಂಡನಿಗೆ ತಿಳಿಸದೇ ಅಬಾರ್ಶನ್ ಮಾತ್ರ ತೆಗೆದುಕೊಂಡಿದ್ದು, ಬ್ಲೀಡಿಂಗ್ ಹೆಚ್ಚಾಗುತ್ತಿದ್ದಂತೆ ಪತಿಗೆ ಕರೆ ಮಾಡಿ ತಿಳಿಸಿದ್ದಾರೆ. ಆದರೆ ಪತಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮಹಿಳೆ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆಯ ಸಹೋದರ ಬೇಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಈ ದುರಂತದಿಂದ 11 ತಿಂಗಳ ಮಗು ತಾಯಿಯಿಲ್ಲದೇ ಅನಾಥವಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 


33 ವಾರದ ಗರ್ಭಪಾತಕ್ಕೆ ದಿಲ್ಲಿ ಹೈಕೋರ್ಟ್‌ ಅಸ್ತು

IVF Implantation Failure: ಐವಿಎಫ್ ಕೂಡ ವಿಫಲವಾಗಲು ಕಾರಣವೇನು ಗೊತ್ತಾ?

 

 

Follow Us:
Download App:
  • android
  • ios