CCB ಮಿಂಚಿನ ಕಾರ್ಯಚರಣೆ: ಅಕ್ರಮವಾಗಿ ನೆಲೆಸಿದ್ದ 30ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳ ಬಂಧನ

ಸಿಸಿಬಿ ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 30ಕ್ಕೂ ಹೆಚ್ಚು ಬಾಂಗ್ಲಾ ಪ್ರಜೆಗಳನ್ನು ಬಂಧಿಸಿದ್ದಾರೆ. ಅಷ್ಟೇ ಅಲ್ಲದೇ ಮನೆ ಬಾಡಿಗೆ ನೀಡುವ ಮಾಲೀಕರಿಗೆ ನಗರ ಪೊಲೀಸ್ ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.

more than 30 bangladeshis arrested for illegally residing in bengaluru

ಬೆಂಗಳೂರು, [ಅ.26]: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ  30ಕ್ಕೂ ಹೆಚ್ಚು ಬಾಂಗ್ಲಾದೇಶಿಯರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಈ ಬಗ್ಗೆ ನಗರ ಪೊಲೀಸ್​ ಆಯುಕ್ತ ಭಾಸ್ಕರ್​ ರಾವ್​  ಮಾಹಿತಿ ನೀಡಿದ್ದು, ಶನಿವಾರ ಬೆಳಗ್ಗೆ ಅಧಿಕಾರಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದು ತಿಳಿಸಿದರು.

ಡಿಕೆಶಿಗೆ ಅದ್ಧೂರಿ ಸ್ವಾಗತ, ತಡಬಡಾಯಿಸಿದ ರಶ್ಮಿಕಾ; ಅ.26ರ ಟಾಪ್ 10 ಸುದ್ದಿ!

ಮಾರತ್‌ಹಳ್ಳಿ ಸುತ್ತಮುತ್ತ ಅಕ್ರಮವಾಗಿ ಬಾಂಗ್ಲಾ ವಲಸಿಗರು ನೆಲೆಸಿದ್ದರು. ಸುಮಾರು 30ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅದರಲ್ಲಿ ಇವರೆಲ್ಲಾ ಬಿಬಿಎಂಪಿಯಲ್ಲಿ ಟೆಂಡರ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಅವರನ್ನೆಲ್ಲ ವಾಪಸ್ ಅವರ ದೇಶಕ್ಕೆ ಗಡಿಪಾರು ಮಾಡುವ ಪ್ರಕ್ರಿಯೆ ಪ್ರಾರಂಭಿಸಿದ್ದೇವೆ ಎಂದು ತಿಳಿಸಿದರು.

ಕಳೆದ‌ ವಾರ 20 ಜನ ಆಫ್ರಿಕನ್ನರನ್ನು ಬಂಧಿಸಿದ್ದೆವು. ಇವರೆಲ್ಲ ವಿದ್ಯಾರ್ಜನೆ ಹೆಸರಲ್ಲಿ ನಮ್ಮ ದೇಶಕ್ಕೆ ಬರುತ್ತಾರೆ. ಬಳಿಕ ವೀಸಾ ಮತ್ತು ಪಾಸ್‌ಪೋರ್ಟ್ ಅವಧಿ ಮುಕ್ತಾಯವಾದರೂ ವಾಪಸ್‌ ಹೋಗುವುದಿಲ್ಲ. ಬದಲಾಗಿ ಇಲ್ಲಿಯೇ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ವಾಸ್ತವ ಸ್ಥಿತಿಯನ್ನು ಆಯುಕ್ತರು ಬಿಚ್ಚಿಟ್ಟರು.

ಆಶ್ರಯ ಕೊಟ್ಟವರ ಮೇಲೂ ಕೇಸ್: ನಗರದಲ್ಲಿ ಅಕ್ರಮ ವಲಸಿಗರಿಗೆ ಆಶ್ರಯ ಕೊಟ್ಟವರ ಮೇಲೂ ಕ್ರಿಮಿನಲ್ ಕೇಸ್ ಹಾಕಲಾಗಿದೆ. ಇವರೆಲ್ಲ ಯಾರೆಂದು ತಿಳಿಯದೇ ಮನೆ ಬಾಡಿಗೆ ನೀಡಿದ್ದಕ್ಕೆ ಕೇಸ್‌ ಬುಕ್ ಮಾಡಲಾಗಿದೆ ಎಂದರು. 

ಇನ್ನು ಅವರು ಯಾರು?ಏನು? ಎನ್ನುವುದನ್ನು ಹಿನ್ನೆಲೆ ತಿಳಿದಯೇ ಮನೆ ಬಾಡಿಗೆ ನೀಡಿದರೇ ಮುಲಾಜಿಲ್ಲದೇ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಹೇಳಿದ ಹಣ ಕೊಡುತ್ತಾರೆ ಎಂದು ಬಯೋಡಟಾ ಗೊತ್ತಲ್ಲದೇ ಅಪರಿಚಿತರಿಗೆ ಮನೆ ಬಾಡಿಗೆ ನೀಡುವ ಮನೆ ಮಾಲೀಕರು ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಕೇಸ್ ಎದುರಿಸಲು ಸಿದ್ಧರಾಗಿ.

Latest Videos
Follow Us:
Download App:
  • android
  • ios