ಬೆಂಗಳೂರು [ನ.09]: ಯುವತಿಯೊಬ್ಬಳು ಸಾಫ್ಟ್‌ವೇರ್ ಉದ್ಯೋಗಿಯೊಬ್ಬರ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಟೆಕಿ ಸುಜೀತ್ ಕುಮಾರ್ ಎಂಬುವರು ಯುವತಿ ಪ್ರಿಯಾ ಸಿಂಗ್ ಎಂಬಾಕೆ ವಿರುದಟಛಿ ದೂರು ನೀಡಿದ್ದಾರೆ. ಕಾಡುಗೋಡಿ ನಿವಾಸಿಯಾಗಿರುವ ಸುಜೀತ್ ಜಾಯ್ ರೈಡ್ ಆ್ಯಪ್ ಅಪ್ಲಿಕೇಷನ್‌ನ ಮೂಲಕ ಯುವತಿ ಪರಿಚಯವಾಗಿದೆ. 

ಪ್ರಿಯಾ ಸಿಂಗ್ ನನ್ನ ಖಾಸಗಿ ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಸುತ್ತಿದ್ದಾಳೆ ಎಂದು ಟೆಕಿ ಸುಜಿತ್‌ಕುಮಾರ್ ದೂರು ನೀಡಿದ್ದಾರೆ. ಅ.೨೮ರಂದು ವಿಡಿಯೋ ಕರೆ ಮಾಡಿಸಿಕೊಂಡಿದ್ದ ಯುವತಿ, ಹಣ ಕೊಡದಿದ್ದರೆ, ಸಾಮಾಜಿಕ ಜಾಲ ತಾಣದಲ್ಲಿ ಖಾಸಗಿ ವಿಡಿಯೋಗಳನ್ನು ಹಾಕುವುದಾಗಿ ಬೆದರಿಕೆವೊಡ್ಡಿದ್ದಾಳೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆದರಿದ ಸುಜಿತ್ ಅ.28ರಂದು ಯುವತಿಗೆ ಪೇಟಿಎಂ ಮಾಡಿದ್ದಾರೆ. ಬಳಿಕ ನ.೧ರಂದು ಕೂಡ 15 ಸಾವಿರವನ್ನು ಗೂಗಲ್ ಪೇ ಮಾಡಿಸಿಕೊಂಡಿದ್ದಾಳೆ. ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಹೆದರಿದ ಟೆಕಿ ಯುವತಿ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖ ಲಿಸಿಕೊಂಡು ಯುವತಿ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಯುವತಿ ಹೆಸರಿನಲ್ಲಿ ಬೇರೆ ಅವರು ಖಾತೆ ತೆರೆದು ಬ್ಲ್ಯಾಕ್‌ಮೇಲ್ ಮಾಡಿರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದರು.