ಬೆಂಗಳೂರಿನ ಕೋರಮಂಗಲದಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ, ಸಂಚಾರ ಪೊಲೀಸರು ಪ್ರಮುಖ ಬದಲಾವಣೆಗಳನ್ನು ಪ್ರಕಟಿಸಿದ್ದಾರೆ. ವೈ.ಡಿ ಮಠ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗಗಳು ಮತ್ತು ಪಾರ್ಕಿಂಗ್ ಸ್ಥಳಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು (ಡಿ.29): ಹೊಸ ವರ್ಷದ ಸಂಭ್ರಮ ಬೆಂಗಳೂರಿನಲ್ಲಿ ವಿವಿಧಕಡೆ ನಡೆಯುತ್ತಿದೆ. ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ ಪ್ರಮುಖ ತಾಣವಾಗಿದ್ದರೆ, ಜೆನ್‌ಜೀ ಕಿಡ್ಸ್‌ಗಳ ಫೇವರಿಟ್‌ KORA ಅಂದರೆ, ಕೋರಮಂಗಲದಲ್ಲೂ ಭರ್ಜರಿ ಆಚರಣೆ ನಡೆಯುತ್ತದೆ. ಕಾರ್ಪೋರೇಟ್‌ ಕಂಪನಿಗಳ ಬೀಡಾಗಿರುವ ಕೋರಮಂಗಲದಲ್ಲಿ ಹೊಸ ವರ್ಷದ ಸಂಭ್ರಮಕ್ಕೆ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ. ಅವುಗಳ ವಿವರವನ್ನು ಟ್ರಾಫಿಕ್‌ ಪೊಲೀಸರು ಪ್ರಕಟಿಸಿದ್ದಾರೆ. ಕಾರು, ಬೈಕ್‌ನಲ್ಲಿ ಹೊಸ ವರ್ಷದಂದು KORA ಕಡೆ ಹೋಗೋದಿದ್ರೆ, ಈ ಬದಲಾವಣೆ ನೋಡಿಕೊಳ್ಳುವುದು ಒಳ್ಳೆಯದು.

ಕಾರ್ಯಕ್ರಮದ ಸ್ಥಳ :ವೈ.ಡಿ. ಮಠ ರಸ್ತೆ, ಕೋರಮಂಗಲ

ಸಂಚಾರ ನಿರ್ಬಂಧ

  1. ಕೋರಮಂಗಲದ ವೈ.ಡಿ ಮಠ ರಸ್ತೆಯಲ್ಲಿ ಸುಖಸಾಗರ ಜಂಕ್ಷನ್‌ನಿಂದ ಮೈಕ್ರೋಲ್ಯಾಂಡ್‌ ಜಂಕ್ಷನ್‌ವರೆಗೆ ಸಂಚಾರವನ್ನುತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.
  2. ವೈ.ಡಿ ಮಠ ರಸ್ತೆಗೆ ಸಂಪರ್ಕ ಕಲ್ಪಿಸುವ ಅಡ್ಡ ರಸ್ತೆಗಳಾದ ಜೆಎನ್‌ಸಿ ರೋಡ್‌, 4ನೇ ಬಿ ಕ್ರಾಸ್‌ರಸ್ತೆ, ಟಾನಿಕ್ ಹಿಂಭಾಗದರಸ್ತೆ, 12ನೇ ಹೆಚ್ ಮುಖ್ಯರಸ್ತೆಗಳಲ್ಲಿ ಸಂಚಾರವನ್ನುತಾತ್ಕಾಲಿಕವಾಗಿ ನಿರ್ಬಂಧಿಸಲಾಗಿರುತ್ತದೆ.

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ 

  1. ಆಡುಗೋಡಿ ಜಂಕ್ಷನ್ ಕಡೆಯಿಂದ ಯುಕೋ ಬ್ಯಾಂಕ್ ಜಂಕ್ಷನ್ ಮುಖಾಂತರ ಎನ್‌ಜಿವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಯುಕೋಬ್ಯಾಂಕ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆಯದೇ ಮಡಿವಾಳ ಚೆಕ್‌ಪೋಸ್ಟ್‌ ಕಡೆಗೆ ಸಾಗಿ ವಾಟರ್‌ಟ್ಯಾಂಕ್ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್ , ಎನ್.ಜಿ.ವಿ ಜಂಕ್ಷನ್‌ ಕಡೆಗೆ ಸಾಗುವುದು.
  2. ಮಡಿವಾಳ ಕಡೆಯಿಂದ ಯುಕೋಬ್ಯಾಂಕ್ ಜಂಕ್ಷನ್ ಮುಖಾಂತರ ಎನ್.ಜಿ.ವಿ ಜಂಕ್ಷನ್, ಸೋನಿವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ವಾಹನಗಳು ಯುಕೋಬ್ಯಾಂಕ್‌ ಜಂಕ್ಷನ್‌ಗೆ ಬರದೇ, ಅಯ್ಯಪ್ಪ ಜಂಕ್ಷನ್, ವಾಟರ್‌ಟ್ಯಾಂಕ್ ಜಂಕ್ಷನ್ ಮುಖಾಂತರ ಅಥವಾ ಮಡಿವಾಳ ಸಂತೇಬೀದಿ, ಕೃಪಾನಿಧಿ ಜಂಕ್ಷನ್, ಐಶ್ವರ್ಯ ಜಂಕ್ಷನ್, ವಿಪ್ರೋ ಜಂಕ್ಷನ್ ಮುಖಾಂತರ ಸೋನಿವರ್ಲ್ಡ್ ಜಂಕ್ಷನ್, ಎನ್.ಜಿ.ವಿ ಜಂಕ್ಷನ್ ಕಡೆಗೆ ಸಾಗುವುದು.

ಮಾರ್ಗ ಬದಲಾವಣೆ ಸ್ಥಳಗಳು 

  1. ಯುಕೋ ಬ್ಯಾಂಕ್‌ಜಂಕ್ಷನ್
  2. ಚೌಡೇಶ್ವರಿ ದೇವಸ್ಥಾನದ ಜಂಕ್ಷನ್
  3. ಸುಖಸಾಗರ್‌ ಜಂಕ್ಷನ್
  4. ಪಾರ್ಕಿಂಗ್ ನಿಷೇಧಿಸಿರುವ ಸ್ಥಳಗಳು :
  5. 80 ಅಡಿ ರಸ್ತೆಯಲ್ಲಿ ಯುಕೋ ಬ್ಯಾಂಕ್ ಜಂಕ್ಷನ್‌ನಿಂದ ಎನ್.ಜಿ.ವಿ ಬ್ಯಾಕ್‌ಗೇಟ್ ಜಂಕ್ಷನ್‌ವರೆಗೆ ರಸ್ತೆಯ ಎರಡೂಕಡೆ
  6. ಸೋಮೇಶ್ವರ ದೇವಸ್ಥಾನದ ರಸ್ತೆ (ಸ್ಮಶಾನ ಕ್ರಾಸ್‌ನಿಂದ-ಮೈಕ್ರೋಲ್ಯಾಂಡ್‌ ಜಂಕ್ಷನ್‌ವರೆಗೆ)

ವಾಹನಗಳ ಪಾರ್ಕಿಂಗ್ ಸ್ಥಳಗಳು :

  • ಮುನಿರೆಡ್ಡಿ ಕಲ್ಯಾಣ ಮಂಟಪದ ಎದರುಗಡೆಯ ಬಿ.ಬಿ.ಎಂ.ಪಿ ಮೈದಾನ
  • ಬೆಥನಿ ಶಾಲಾ ಪಕ್ಕದ ಬಿ.ಬಿ.ಎಂ.ಪಿ ಮೈದಾನ
  • 60 ಅಡಿ ಮಾದರಿರಸ್ತೆ ಎಡಭಾಗ (ಮುನಿರೆಡ್ಡಿ ಕಲ್ಯಾಣ ಮಂಟಪದಿಂದ ಕೆನರಾ ಬ್ಯಾಂಕ್‌ಜಂಕ್ಷನ್‌ವರೆಗೆ)
  • ಕ್ಯಾಬ್ ಮತ್ತು ಆಟೋ ಪಿಕ್‌ಅಪ್ ಪಿಕ್‌ಅಪ್ ಮತ್ತು ಡ್ರಾಪ್‌ಆಫ್ ಸ್ಥಳಗಳು :
  • ಯುಕೋಬ್ಯಾಂಕ್ ಸರ್ವೀಸ್‌ರಸ್ತೆಯಿಂದ ಸೆಂಟ್ ಜಾನ್ಸ್ ಆಸ್ಪತ್ರೆವರೆಗೆ
  • ಎನ್.ಜಿ.ವಿ ಬ್ಯಾಕ್‌ಗೇಟ್
  • ಸುಖಸಾಗರ್‌ಜಂಕ್ಷನ್

ಬಿ.ಎಂ.ಟಿ.ಸಿ. ಬಸ್ ಹಾಗೂ ಟೆಂಪೋ ಟ್ರಾವೆಲರ್ ವಾಹನಗಳ ಪ್ರಾರಂಭ ಸ್ಥಳಗಳು :

  1. ನೆಕ್ಸಸ್ ಮಾಲ್
  2. ಎನ್.ಜಿ.ವಿ. ಬ್ಯಾಕ್ ಗೇಟ್
  3. ಮಡಿವಾಳ ಚೆಕ್ ಪೋಸ್ಟ್

ಬಿ.ಎಂ.ಟಿ.ಸಿ. ಬಸ್ಸುಗಳು ಹಾಗೂ ಟಿ.ಟಿ. ವಾಹನಗಳು ಸಂಚರಿಸುವ ಮಾರ್ಗಗಳು :

  1. ಮಡಿವಾಳ ಚೆಕ್‌ಪೋಸ್ಟ್ ನಿಂದ ಬನಶಂಕರಿ ಬಸ್‌ನಿಲ್ದಾಣ(ಬಿ.ಟಿ.ಎಂ. ಮೂಲಕ)
  2. ಮಡಿವಾಳ ಚೆಕ್‌ಪೋಸ್ಟ್ ನಿಂದ ಎಲೆಕ್ಟ್ರಾನಿಕ್ ಸಿಟಿ(ಹೊಸೂರು ರಸ್ತೆಯ ಮೂಲಕ)
  3. ಮಡಿವಾಳ ಚೆಕ್‌ಪೋಸ್ಟ್ ನಿಂದ ಕೆ.ಆರ್.ಪುರಂ(ಹಳೇ ವಿಮಾನ ನಿಲ್ದಾಣ ರಸ್ತೆ ಮೂಲಕ, ಸುರಂಜನ್ ದಾಸ್ ರಸ್ತೆ)
  4. ಮಡಿವಾಳ ಚೆಕ್‌ಪೋಸ್ಟ್ ನಿಂದ ಮೀನಾಕ್ಷಿ ಟೆಂಪಲ್, ಬನ್ನೇರುಘಟ್ಟ(ಡೈರಿ ಸರ್ಕಲ್ ಮೂಲಕ)
  5. ಮಡಿವಾಳ ದಿಂದ ಸರ್ಜಾಪುರ
  6. ನೆಕ್ಸಸ್ ಮಾಲ್‌ನಿಂದ ದೇವನಹಳ್ಳಿ(ಮೇಕ್ರಿ ಸರ್ಕಲ್ ಮೂಲಕ)
  7. ನೆಕ್ಸಸ್ ಮಾಲ್(ಹೊಸೂರು ರಸ್ತೆ ಜಂಕ್ಷನ್) ನಿಂದ ಕೆ.ಆರ್. ಮಾರ್ಕೆಟ್(ಜೆ.ಸಿ. ರಸ್ತೆ ಮೂಲಕ)
  8. ನೆಕ್ಸಸ್ ಮಾಲ್(ಹೊಸೂರು ರಸ್ತೆ ಜಂಕ್ಷನ್ ) ನಿಂದ ಮೆಜೆಸ್ಟಿಕ್(ವಿಲ್ಸನ್ ಗಾರ್ಡನ್ ಮೂಲಕ)
  9. ಎನ್.ಜಿ.ವಿ. ಬ್ಯಾಕ್ ಗೇಟ್ ನಿಂದ ಹೆಬ್ಬಾಳ(ಇಂದಿರಾನಗರ ಮೂಲಕ)
  10. ಎನ್.ಜಿ.ವಿ. ಯಿಂದ ವೈಟ್‌ಫೀಲ್ಡ್( ಹೊರವರ್ತುಲ ರಸ್ತೆಯ ಮೂಲಕ)