ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಸಾರ್ವಜನಿಕರ ಸುರಕ್ಷತೆಗಾಗಿ ಡಿ.31ರ ರಾತ್ರಿಯಿಂದ ಪ್ರಮುಖ ರಸ್ತೆಗಳಲ್ಲಿ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ ಸೇರಿದಂತೆ ಹಲವು ಕಡೆ ವಾಹನ ಪ್ರವೇಶ ಮತ್ತು ನಿಲುಗಡೆಯನ್ನು ನಿಷೇಧಿಸಲಾಗಿದೆ.
ಬೆಂಗಳೂರು (ಡಿ.29): ಡಿಸೆಂಬರ್ 31 ರಂದು ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಜನರು, ವಾಹನ ಸವಾರರು ಮತ್ತು ಪಾದಚಾರಿಗಳು ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾರ್ಕ್ಸ್ ರೋಡ್, ಮತ್ತು ಚರ್ಚ್ ಸ್ಟ್ರೀಟ್‌ನಲ್ಲಿ ಹಾಗೂ ನಗರದ ಇತರೆ ಸ್ಥಳಗಳಲ್ಲಿ ಸೇರಿ ಹೊಸವರ್ಷ ಆಚರಣೆ ಮಾಡಲಾಗುತ್ತದೆ.ಈ ಕಾರ್ಯಕ್ರಮದ ಅಂಗವಾಗಿ ಡಿ.31ರ ರಾತ್ರಿಯಿಂದ ಜನವರಿ 1ರ ಮದ್ಯರಾತ್ರಿಯವರೆಗೆ ಸಾರ್ವಜನಿಕರ ಸುರಕ್ಷತೆ ಹಾಗೂ ಸುಗಮ ಸಂಚಾರದ ಹಿತದೃಷ್ಟಿಯಿಂದ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಸೆಂಟ್ ಮಾರ್ಕ್ಸ ರಸ್ತೆ, ಮತ್ತು ರೆಸಿಡೆನ್ಸಿ ರಸ್ತೆ ಹಾಗೂ ನಗರದ ಕೆಲವು ರಸ್ತೆಗಳಲ್ಲಿ ಸೂಕ್ತ ಸಂಚಾರ ಮಾರ್ಪಾಡುಗಳನ್ನು ಮಾಡಲಾಗಿದ್ದು, ವಿವರ ಕೆಳಕಂಡಂತೆ ಇದೆ.
ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಕ್ಕೆ ಸಂಚಾರ ಭಾರೀ ಬದಲು
ಡಿ.31ರ ರಾತ್ರಿ 8 ಗಂಟೆಯಿಂದ ಜ.1ರ ಮಧ್ಯರಾತ್ರಿ 2 ಗಂಟೆಯ ವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗೂ ಕರ್ತವ್ಯ ನಿರತ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಉಳಿದ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ.
- ಎಂ.ಜಿ.ರಸ್ತೆ ಅನಿಲ್ ಕುಂಬ್ಳೆ ವೃತ್ತದಿಂದ ಮೆಯೋ ಹಾಲ್ ಬಳಿಯ ರೆಸಿಡೆನ್ಸಿ ರಸ್ತೆ ಜಂಕ್ಷನ್ ವರೆಗೆ.
- ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್ ನಿಂದ ಅಪೇರಾ ಜಂಕ್ಷನ್‌ವರೆಗೆ.
- ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ.
- ರೆಸಿಡೆನ್ಸಿ ರಸ್ತೆ, ಆಶೀರ್ವಾದಂ ಜಂಕ್ಷನ್ ನಿಂದ ಮೆಯೋ ಹಾಲ್ ಜಂಕ್ಷನ್‌ವರೆಗೆ.
- ಮ್ಯೂಸಿಯಂ ರಸ್ತೆಯಲ್ಲಿ ಎಂ.ಜಿ.ರಸ್ತೆ ಜಂಕ್ಷನ್ ನಿಂದ ಹಳೇ ಮದ್ರಾಸ್ ಬ್ಯಾಂಕ್ ರಸ್ತೆ (ಎಸ್.ಬಿ.ಐ) ವೃತ್ತದ ವರೆಗೆ.
- ರೆಸ್ಟ್ ಹೌಸ್ ರಸ್ತೆಯಲ್ಲಿ ಮ್ಯೂಸಿಯಂ ರಸ್ತೆ ಜಂಕ್ಷನ್‌ನಿಂದ ಬ್ರಿಗೇಡ್ ರಸ್ತೆ ಜಂಕ್ಷನ್‌ವರೆಗೆ.
- ರೆಸಿಡೆನ್ಸಿ ಕ್ರಾಸ್ ರಸ್ತೆಯಲ್ಲಿ ರೆಸಿಡೆನ್ಸಿ ರಸ್ತೆ ಜಂಕ್ಷನ್‌ನಿಂದ ಎಂ.ಜಿ ರಸ್ತೆ ಜಂಕ್ಷನ್‌ವರೆಗೆ (ಶಂಕರ್ ನಾಗ್ ಚಿತ್ರಮಂದಿರದವರರೆಗೆ)
ಡಿ.31 ರಂದು ಸಂಜೆ 4 ಗಂಟೆಯಿಂದ ಜ.1ರ ಬೆಳಗಿನ ಜಾವ 3 ಗಂಟೆಯ ವರೆಗೆ ಈ ಕೆಳಕಂಡ ರಸ್ತೆಗಳಲ್ಲಿ ಪೊಲೀಸ್ ವಾಹನಗಳು ಹಾಗು ಕರ್ತವ್ಯ ನಿರತ ತುರ್ತು ಸೇವಾ ವಾಹನಗಳು ಹೊರತು ಪಡಿಸಿ ಉಳಿದ ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.
- ಎಂ.ಜಿ ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತದಿಂದ ಟ್ರಿನಿಟಿ ವೃತ್ತದ ವರೆಗೆ.
- ಬ್ರಿಗೇಡ್ ರಸ್ತೆಯಲ್ಲಿ, ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಓಲ್ಡ್ ಪಿ,ಎಸ್ ಜಂಕ್ಷನ್‌ವರೆಗೆ.
- ಚರ್ಚ್ ಸ್ಟ್ರೀಟ್, ಬ್ರಿಗೇಡ್ ರಸ್ತೆ ಜಂಕ್ಷನ್ ನಿಂದ ಸೆಂಟ್ ಮಾರ್ಕ್ಸ್ ರಸ್ತೆ ಜಂಕ್ಷನ್‌ವರೆಗೆ.
- ರೆಸ್ಟ್ ಹೌಸ್ ರಸ್ತೆಯಲ್ಲಿ, ಬ್ರಿಗೇಡ್ ರಸ್ತೆ ಜಂಕ್ಷನ್‌ನಿಂದ ಮ್ಯೂಸಿಯಂ ರಸ್ತೆ ಜಂಕ್ಷನ್‌ವರೆಗೆ.
- ಮ್ಯೂಸಿಯಂ ರಸ್ತೆಯಲ್ಲಿ, ಎಂ.ಜಿ ರಸ್ತೆ ಜಂಕ್ಷನ್‌ನಿಂದ ಎಸ್.ಬಿ.ಐ ವೃತ್ತದ ವರೆಗೆ.
- ರೆಸಿಡೆನ್ಸಿ ರಸ್ತೆ, ಆಶೀರ್ವಾದಂ ಜಂಕ್ಷನ್ ನಿಂದ ಮೆಯೋ ಹಾಲ್ ಜಂಕ್ಷನ್‌ವರೆಗೆ.
ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ :
ಡಿ.31ರ ರಾತ್ರಿ 8 ಗಂಟೆಯ ನಂತರ ಎಂ.ಜಿ ರಸ್ತೆಯಲ್ಲಿ, ಕ್ವೀನ್ಸ್ ವೃತ್ತದ ಕಡೆಯಿಂದ ಹಲಸೂರು ಹಾಗೂ ಇನ್ನು ಮುಂದಕ್ಕೆ ಹೋಗುವಂತಹ ಚಾಲಕರು ಅನಿಲ್ ಕುಂಬ್ಳೆ ವೃತ್ತದಲ್ಲಿ ಎಡ ತಿರುವು ಪಡೆದು ಸೆಂಟ್ರಲ್ ಸ್ಟ್ರೀಟ್-ಬಿ.ಆರ್.ವಿ ಜಂಕ್ಷನ್- ಬಲ ತಿರುವು ಕಬ್ಬನ್ ರಸ್ತೆ ಮೂಲಕ ಸಂಚರಿಸಿ ವೆಬ್ಸ್ ಜಂಕ್ಷನ್ ಬಳಿ ಎಂ.ಜಿ ರಸ್ತೆಯನ್ನು ಸೇರಿ ಮುಂದೆ ಸಾಗಬಹುದಾಗಿದೆ.
- ಹಲಸೂರು ಕಡೆಯಿಂದ ಕಂಟೊನ್ಮೆಂಟ್ ಕಡೆಗೆ ಹೋಗುವಂತಹ ವಾಹನಗಳು ಟ್ರಿನಿಟಿ ವೃತ್ತದಲ್ಲಿ ಬಲ ತಿರುವು ಪಡೆದುಕೊಂಡು ಹಲಸೂರು ರಸ್ತೆ –ಡಿಕನ್ಸನ್ ರಸ್ತೆ ಮಾರ್ಗವಾಗಿ ಸಂಚರಿಸಿ ಕಬ್ಬನ್ ರಸ್ತೆ ಸೇರಿ ಮುಂದೆ ಸಾಗುವುದು.
- ಕಾಮರಾಜ್ ರಸ್ತೆಯಲ್ಲಿ, ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ.
- ಈಜಿಪುರ ಕಡೆಯಿಂದ ಬರುವ ವಾಹನಗಳು ಇಂಡಿಯಾ ಗ್ಯಾರೇಜ್ ಬಳಿ ಬಲತಿರುವು ಪಡೆದು, ಎ.ಎಸ್.ಸಿ.ಸೆಂಟರ್‌ನಲ್ಲಿ ಎಡತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗುವುದು.
- ಹೆಚ್.ಎ.ಎಲ್. ಕಡೆಯಿಂದ ಬರುವ ವಾಹನಗಳು ಎ.ಎಸ್.ಸಿ ಸೆಂಟರ್‌ನಲ್ಲಿ ಬಲತಿರುವು ಪಡೆದು ಟ್ರಿನಿಟಿ ಮೂಲಕ ಮುಂದೆ ಸಾಗುವುದು.
- ಪಾದಚಾರಿಗಳು ಬ್ರಿಗೇಡ್ ರಸ್ತೆಯಲ್ಲಿ ಎಂ.ಜಿ ರಸ್ತೆ ಜಂಕ್ಷನ್ ನಿಂದ ಅಪೇರಾ ಜಂಕ್ಷನ್ ಕಡೆಗೆ ಕಾಲ್ನಡಿಗೆಯಲ್ಲಿ ಮಾತ್ರ ಹೋಗುವುದು. ವಿರುದ್ದ ದಿಕ್ಕಿನಲ್ಲಿ ಹೋಗುವುದನ್ನು ನಿಷೇದಿಸಲಾಗಿದೆ.
- ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸ್ಟ್ ಹೌಸ್ ರಸ್ತೆ, ಚರ್ಚ್ ಸ್ಟ್ರೀಟ್,ರೆಸಿಡೆನ್ಸಿ. ರಸ್ತೆ & ಸೆಂಟ್ ಮಾರ್ಕ್ಸ್ ರಸ್ತೆಗಳಲ್ಲಿ ನಿಲ್ಲಿಸಿದಂತಹ ವಾಹನಗಳ ಚಾಲಕರು/ಮಾಲಿಕರು ತಮ್ಮ ವಾಹನಗಳನ್ನು ಡಿ. 31 ರಂದು ಸಂಜೆ 4 ಗಂಟೆಯೊಳಗೆ ತೆರವುಗೊಳಿಸುವುದು, ತಪ್ಪಿದಲ್ಲಿ ದಂಡ ವಿಧಿಸಲಾಗುವುದು.
ಪಾರ್ಕಿಂಗ್ ವ್ಯವಸ್ಥೆ
- ಶಿವಾಜಿನಗರ ಬಿ,ಎಂ,ಟಿ,ಸಿ ಶಾಪಿಂಗ್‌ಕಾಂಪ್ಲೆಕ್ಸ್ ಮೊದಲ ಮಹಡಿ
- ಯು.ಬಿ. ಸಿಟಿ
- ಗರುಡಾ ಮಾಲ್
- ಕಾಮರಾಜ್ ರಸ್ತೆ(ಕಬ್ಬನ್ ರಸ್ತೆ ಜಂಕ್ಷನ್‌ನಿಂದ ಕಮರ್ಷಿಯಲ್ ಸ್ಟ್ರೀಟ್ ಜಂಕ್ಷನ್‌ವರೆಗೆ)
ಕ್ಯಾಬ್ ಮತ್ತು ಆಟೋ ಪಿಕ್‌ಅಪ್ ಮತ್ತು ಡ್ರಾಪ್‌ಆಫ್ ಸ್ಥಳಗಳು
| ರಸ್ತೆಯ ಹೆಸರು | ಪಿಕ್‌ಅಪ್ ಸ್ಥಳ | ಡ್ರಾಪ್ ಮಾಡುವ ಸ್ಥಳ |
| ಕಬ್ಬನ್ ರಸ್ತೆ | .ಆರ್.ವಿ ಜಂಕ್ಷನ್ ಹತ್ತಿರ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂ.6 | ಬಿ.ಆರ್.ವಿ ಜಂಕ್ಷನ್ ಹತ್ತಿರ ಚಿನ್ನಸ್ವಾಮಿ ಸ್ಟೇಡಿಯಂ ಗೇಟ್ ನಂ.6 |
| ಕ್ವೀನ್ಸ್ ರೋಡ್, | ಸಿ.ಟಿ.ಓ ಜಂಕ್ಷನ್ | ಸಿ.ಟಿ.ಓ ಜಂಕ್ಷನ್ |
| ರಾಜಭವನ | ಸಿ.ಟಿ.ಓ ಜಂಕ್ಷನ್ | ಕಬ್ಬನ್ಪಾರ್ಕ್ ಮೆಟ್ರೋ |
| ಕಬ್ಬನ್ ರಸ್ತೆ | ಬಿ.ಆರ್.ವಿ ಗ್ರೌಂಡ್ ಗೇಟ್ ನಂ.6 | ಬಿ.ಆರ್.ವಿ ಗ್ರೌಂಡ್ ಗೇಟ್ ನಂ.6 |
| ಎಂಜಿ ರಸ್ತೆ | ಟ್ರಿನಿಟಿ ಸರ್ಕಲ್ | ಟ್ರಿನಿಟಿ ಸರ್ಕಲ್, |
ಬಿ.ಎಂ.ಟಿ.ಸಿ. ಬಸ್ ಹಾಗೂ ಟೆಂಪೋ ಟ್ರಾವೆಲರ್ ವಾಹನಗಳ ಪ್ರಾರಂಭ ಸ್ಥಳಗಳು :
- ಅನಿಲ್‌ಕುಂಬ್ಳೆ ಸರ್ಕಲ್
- ಡೆಕಥ್‌ಲಾನ್(ಬ್ರಿಗೇಡ್ ರಸ್ತೆ)
- ಹಾಸ್ಮಟ್ ಆಸ್ಪತ್ರೆ
- ಮೇಯೋ ಹಾಲ್ ಜಂಕ್ಷನ್.
- ಟ್ರಿನಿಟಿ ಸರ್ಕಲ್
- ಆಶೀರ್ವಾದಮ್ ಜಂಕ್ಷನ್
ಬಿ.ಎಂ.ಟಿ.ಸಿ. ಬಸ್ಸುಗಳು ಹಾಗೂ ಟಿ.ಟಿ. ವಾಹನಗಳು ಸಂಚರಿಸುವ ಮಾರ್ಗಗಳು :
- ಆಶೀರ್ವಾದಂನಿಂದ ಬನ್ನೇರುಘಟ್ಟ.
- ಅನಿಲ್ ಕುಂಬ್ಳೆಯಿಂದ ಬನಶಂಕರಿ
- ಅನಿಲ್ ಕುಂಬ್ಳೆಯಿಂದ ನೈಸ್ ರಸ್ತೆ ಜಂಕ್ಷನ್
- ಅನಿಲ್ ಕುಂಬ್ಳೆಯಿಂದ ಸುಂಕದಕಟ್ಟೆಗೆ ಮೋದಿ ಆಸ್ಪತ್ರೆ ರಸ್ತೆಯ ಮೂಲಕ
- ಡೆಕಾಥ್‌ಲಾನ್ ಒಪೆರಾ ಜಂಕ್ಷನ್ ನಿಂದ ನೈಸ್ ರಸ್ತೆ ಜಂಕ್ಷನ್(ರಿಚ್ಮಂಡ್ ಸರ್ಕಲ್ ಮೂಲಕ)
- ಹಾಸ್ಮಟ್ ಆಸ್ಪತ್ರೆಯಿಂದ ಮಾರತ್ ಹಳ್ಳಿ
- ಮೆಯೋಹಾಲ್ ನಿಂದ ಚಿಕ್ಕಜಾಲ
- ಮೆಯೋಹಾಲ್ ನಿಂದ ಮಾದಾವರ
- ಟ್ರಿನಿಟಿ ಯಿಂದ ಬಾಗಲೂರು
- ಟ್ರಿನಿಟಿ ಯಿಂದ ಹೊಸಕೋಟೆ


