ರಾಜ್ಯದಲ್ಲಿ ವೀಕೆಂಡ್ ಹಾಗೂ ನೈಟ್ ಕರ್ಫ್ಯೂ: ಕಕೊರೋನಾ ತಡೆಗೆ ಕಠಿಣ ಕ್ರಮ!
ಕರ್ನಾಟಕದಲ್ಲಿ ಮಿತಿ ಮೀರುತ್ತಿರುವ ಕೊರೋನಾ ನಿಯಂತ್ರಣಕ್ಕೆ ಬ್ರೇಕ್ ಹಾಕಲು ಹೊಸ ಮಾರ್ಗಸೂಚಿ ಸರ್ಕಾರ ಪ್ರಕಟಿಸಿದೆ. ಸರ್ವ ಪಕ್ಷ ಸಭೆಯಲ್ಲಿ ಸತತ ಚರ್ಚೆ ನಡೆಸಿದ ಬಿಎಸ್ ಯಡಿಯೂರಪ್ಪ ಇದೀಗ ನೈಟ್ ಕರ್ಫ್ಯೂ ವಿಸ್ತರಿಸಿದ್ದಾರೆ. ಕರ್ನಾಟಕ ಹೊಸ ರೂಲ್ಸ್ ಕುರಿತ ಮಾಹಿತಿ ಇಲ್ಲಿದೆ.
ಬೆಂಗಳೂರು(ಏ.20): ಕೊರೋನಾ ವೈರಸ್ ಕರ್ನಾಟಕದಲ್ಲಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿದೆ. ಹೊಸ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ. ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯಪಾಲ ವಜುಭಾಯಿ ವಾಲಾ ನೇತೃತ್ವದಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ಸಿಎಂ ಬಿಎಸ್ ವೈ ಯಡಿಯೂರಪ್ಪ ಸೇರಿದಂತೆ ಸರ್ವ ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಎಲ್ಲಾ ಸಲಹೆಗಳನ್ನು ಕ್ರೋಢಿಕರಿಸಿ ಇದೀಗ ಕರ್ನಾಟಕ ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಹೊಸ ಮಾರ್ಗಸೂಚಿ ಪ್ರಕಟಿಸಿದ್ದಾರೆ.
ನಾಳೆಯಿಂದ(ಏ.21) ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ನಾಳೆಯಿಂದ 14ದಿನದ ವರಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. ರಾತ್ರಿ 9 ರಿಂದ ಬೆಳಗ್ಗೆ 6 ಗಂಟೆ ವರಗೆ ಕರ್ಫ್ಯೂ ಜಾರಿ ಮಾಡಲಾಗಿದೆ. ಇದೇ ಶುಕ್ರವಾರದಿಂದ ವೀಕೆಂಡ್ ಕರ್ಫ್ಯೂ ಹೇರಲಾಗುತ್ದಿದೆ. ಏಪ್ರಿಲ್ 21 ರಿಂದ ಮೇ 4 ರ ತನಕ ವೀಕ್ ಎಂಡ್ ಕರ್ಪ್ಯೂ ಜಾರಿಯಾಗಲಿದೆ. ಶುಕ್ರವಾರ ರಾತ್ರಿ 9 ಗಂಚೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ವರೆಗೆ ವೀಕೆಂಡ್ ಕರ್ಪ್ಯೂ ಹೇರಲಾಗುತ್ತಿದೆ. ರಾಜ್ಯ ಕಾರ್ಯದರ್ಶಿ ರವಿ ಕುಮಾರ್ ಮಾಧ್ಯಮಕ್ಕೆ ಹೊಸ ಮಾರ್ಗಸೂಚಿ ಕುರಿತು ವಿವರಣೆ ನೀಡಿದ್ದಾರೆ. .
- ಶಾಲೆ, ಕಾಲೇಜು ಬಂದ್
-ಸಿನಿಮಾ, ಮಾಲ್, ಈಜುಕೊಳಕ್ಕೆ ಬೀಗ
-ಬಾರ್, ಹೋಟೆಲಿಂದ ಪಾರ್ಸೆಲ್ ಮಾತ್ರ
-ಮೇ 4ರವರೆಗೆ ಟಫ್ ರೂಲ್ಸ್
ರಾತ್ರಿ ಕರ್ಫ್ಯೂ ಹೇಗೆ?
- ಅಗತ್ಯ ವಸ್ತು, ತುರ್ತು ಸಂಚಾರ ಹೊರತುಪಡಿಸಿ ಎಲ್ಲಾ ವಾಹನ ಓಡಾಟ ಬಂದ್
- ರಾತ್ರಿ ಪಾಳಿ ಇರುವ ಕೈಗಾರಿಕೆಗಳ ನೌಕರರು ಸಂಸ್ಥೆಯ ಐಡಿ ಇಟ್ಟುಕೊಂಡಿರಬೇಕು
- ಸರಕು ಸಾಗಣೆ ವಾಹನ, ಇ-ಕಾಮರ್ಸ್ ಬಿಸಿನೆಸ್, ಹೋಮ್ ಡೆಲಿವರಿಗೆ ಅವಕಾಶ
- ದೂರದೂರಿಗೆ ಬಸ್, ರೈಲು, ವಿಮಾನ ಸಂಚಾರ ಅಬಾಧಿತ (ದಾಖಲೆ ತೋರಿಸಬೇಕು)
ವೀಕೆಂಡ್‌ನಲ್ಲಿ ಹೇಗೆ?
- ಆಹಾರ ವಸ್ತು, ಹಣ್ಣು-ತರಕಾರಿ, ಹಾಲು ಮತ್ತಿತರೆ ಅಂಗಡಿ ಬೆಳಗ್ಗೆ 6ರಿಂದ ರಾತ್ರಿ 10ರವರೆಗೆ ಓಪನ್
- ಹೋಟೆಲ್‌ಗಳಿಂದ ಪಾರ್ಸೆಲ್ ಪಡೆಯಲು ಅವಕಾಶ
- ಮದುವೆಗೆ 50, ಅಂತ್ಯಕ್ರಿಯೆಗೆ 20 ಜನರಷ್ಟೇ ಭಾಗಿ
- ನಿರ್ಮಾಣ ಕಾಮಗಾರಿಗಳನ್ನು ನಡೆಸಲು ಅವಕಾಶವಿಲ್ಲ
ಏನುಂಟು? ಏನಿಲ್ಲ?
1. ರಾಜಕೀಯ, ಧಾರ್ಮಿಕ, ಸಾಮಾಜಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ
2. ಮದುವೆಗೆ 50 ಜನ, ಅಂತ್ಯಕ್ರಿಯೆಗೆ 20 ಮಂದಿ ಭಾಗಿ ಆಗಲು ಅವಕಾಶ
3. ಬೆಂಗಳೂರಿನ ದೊಡ್ಡ ಮಾರುಕಟ್ಟೆಏ.23ರೊಳಗೆ ಹೊರವಲಯಕ್ಕೆ ಶಿಫ್ಟ್
4. ವೃತ್ತಿಪರ ಈಜು ತರಬೇತಿ, ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗೆ ಅವಕಾಶ
5. ರಾಜ್ಯದೊಳಗೆ, ಅಂತಾರಾಜ್ಯ ಸಂಚಾರಕ್ಕೆ ಯಾವುದೇ ರೀತ್ಯ ನಿರ್ಬಂಧ ಇಲ್ಲ
6. ಸರ್ಕಾರಿ ಕಚೇರಿಗಳಲ್ಲಿ ಶೇ.50 ಹಾಜರಿ. ಐಟಿ-ಬಿಟಿಗೆ ವರ್ಕ್ ಫ್ರಂ ಹೋಮ್
7. ನ್ಯಾಯಾಲಯಗಳ ಕಾರ್ಯನಿರ್ವಹಣೆ ನಿರ್ಧಾರ ಹೈಕೋರ್ಟ್ ವಿವೇಚನೆಗೆ
8. ರಾಜ್ಯಾದ್ಯಂತ ಸೆ.144 ಅಡಿ ನಿಷೇಧಾಜ್ಞೆ. ಮಾಸ್ಕ್ ಧರಿಸದಿದ್ದರೆ .250 ದಂಡ
9. ಪರೀಕ್ಷೆ ನಡೆಸಲು ಯಾವುದೇ ಅಡ್ಡಿ ಇಲ್ಲ. ಶಿಕ್ಷಣ ಸಂಸ್ಥೆ, ವಿವಿಗಳ ನಿರ್ಧಾರಕ್ಕೆ
10. ಇ-ಕಾಮರ್ಸ್, ಹೋಂ ಡೆಲಿವರಿ ಓಕೆ. ಕ್ಷೌರದಂಗಡಿಗಳಿಗೂ ನಿರ್ಬಂಧ ಇಲ್ಲ