ಬೆಂಗಳೂರು[ನ.8]: ಗದುಗಿನ ಖ್ಯಾತ ನಾಟಕಕಾರ ಗರುಡ ಸದಾಶಿವರಾಯರ ಮೊಮ್ಮಗ ದಿಗಂಬರ ಯೋಗೇಶ ಗರುಡ(45) ಅವರು ಇಂದು ನಿಧನರಾಗಿದ್ದಾರೆ. ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾಗಿದ್ದಾರೆ. 

ದಿಗಂಬರ ಯೋಗೇಶ ಗರುಡ ಅವರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ಸುಮಾರು 12 ವರ್ಷ ಹಿರಿಯ ಕ್ರೀಡಾ ವರದಿಗಾರರಾಗಿ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಕ್ರೀಡಾ ಸಂಪಾದಕರಾಗಿ, ಆಸ್ಟ್ರೇಲಿಯಾದ ಸಿಡ್ನಿ ರೇಡಿಯೋಗೆ ಅರೆಕಾಲಿಕ ವರದಿಗಾರನಾಗಿ ಸೇವೆ ಸಲ್ಲಿಸಿದ್ದರು. ಟಿವಿ ವಾಹಿನಿ, ಆಕಾಶವಾಣಿಯ ಚರ್ಚಾ ಕಾರ್ಯಕ್ರಮ ಹಾಗೂ  ಭರತನಾಟ್ಯ ಮತ್ತು ರಂಗ ಕಲಾವಿದರಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ದಿಗಂಬರ ಯೋಗೇಶ ಗರುಡ ಅವರು ಪತ್ನಿ ಶೋಭಾ ಲೋಕನಾಥ್ ಮತ್ತು ಪುತ್ರಿ ತಪಸ್ಯಾ( 5 ವರ್ಷ) ಅವರನ್ನ ಅಗಲಿದ್ದಾರೆ.