ಬೆಂಗಳೂರಿನಲ್ಲಿ ಧಾರಾಕಾರ ಮಳೆ,ಹಲವು ಪ್ರದೇಶ ಜಲಾವೃತ!
ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಬಹುತೇಕ ಬೆಂಗಳೂರು ಜಲಾವೃತಗೊಂಡಿದೆ. ಸಂಪೂರ್ಣ ಬೆಂಗಳೂರು ಟ್ರಾಫಿಕ್ ಜಾಮ್‌ನಿಂದ ಮುಳುಗಿದೆ.

ಬೆಂಗಳೂರು(ಅ.09) ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಬಹುತೇಕ ಬೆಂಗಳೂರಿನ ರಸ್ತೆಗಳು ಜಲಾವೃತಗೊಂಡಿದೆ. ಕೆಲ ರಸ್ತೆಗಳು ನದಿಯಂತಾಗಿದೆ. ಇಂದು ಸಂಜೆಯಿಂದಲೇ ಸುರಿಯುತ್ತಿರುವ ಮಳೆಗೆ ಬಹುತೇಕ ಬೆಂಗಳೂರು ಅಸ್ತವ್ಯಸ್ತಗೊಂಡಿದೆ. ಹಲವು ರಸ್ತೆಗಳನ್ನು ಬಂದ್ ಮಾಡಲಾಗಿದೆ. ಸುರಕ್ಷತಾ ದೃಷ್ಟಿಯಿಂದ ಅಂಡರ್ ಪಾಸ್ ರಸ್ತೆಗಳನ್ನು ಮುಚ್ಚಲಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ ಕಿರಿಕಿರಿ ಹೆಚ್ಚಾಗಿದೆ.
ಮೆಜೆಸ್ಟಿಕ್ ಸುತ್ತಮುತ್ತ ಭಾರಿ ಮಳೆಗೆ ಸಂಪೂರ್ಣ ಟ್ರಾಫಿಕ್ ಜಾಮ್ ಸಂಭವಿಸಿದೆ.ಶಿವಾನಂದ ಸರ್ಕಲ್ ಬಳಿಯ ರೈಲ್ವೇ ಅಂಡರ್ ಪಾಸ್ ಬ್ರಿಡ್ಜ್ ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ಸುರಕ್ಷತಾ ಕಾರಣದಿಂದ ಪೊಲೀಸರು ಅಂಡರ್ ಪಾಸ್ ಬಂದ್ ಮಾಡಿದ್ದಾರೆ. ಮೊದಲೇ ಟ್ರಾಫಿಕ್ ಜಾಮ್‌ನಿಂದ ಪರದಾಡುತ್ತಿರುವ ಸವಾರರು ಸಂಕಷ್ಟ ಅನುಭಿವಿಸಿದ್ದಾರೆ.
ಬೆಳ್ಳಂ ಬೆಳ್ಳಿಗ್ಗೆ ಬೆಂಗಳೂರಿನಲ್ಲಿ ಮಳೆರಾಯ ಆಗಮನ: ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ
ಹೊಸೂರು ರಸ್ತೆಯ ರೂಪೇನಾ ಅಗ್ರಹಾರ, ಹರಳೂರು ಜಂಕ್ಷನ್, ನಾಯಂಡಹಳ್ಳಿ, ಶೇಷಾದ್ರಿಪುರಂ ರೈಲ್ವೆ ಅಂಡರ್ ಪಾಸ್, ವಿಜಯನಗರ ಧನಂಜಯ ಪ್ಯಾಲೇಸ್ ಬಳಿ, ಬನ್ನೇರುಘಟ್ಟ ರಸ್ತೆ ನಾಗಾರ್ಜುನ ಜಂಕ್ಷನ್, ಅನಿಲ್ ಕುಂಬ್ಳೆ ಸರ್ಕಲ್, ಕಲ್ಯಾಣ ನಗರ ಬ್ರಿಡ್ಜ್, ಹೆಸರಘಟ್ಟ ಸೇರಿ ಹಲವು ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ತಗೊಂಜಿದೆ.
ತುಮಕೂರು ರಸ್ತೆಯಲ್ಲಿ ಕಿಲೋಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು, ಬಾರಿ ಟ್ರಾಫಿಕ್ ಜಾಮ್ ಸಂಭವಿಸಿದೆ.