Asianet Suvarna News Asianet Suvarna News

236 ಕಟ್ಟಡಗಳಿಂದ ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು

ಅನಧಿಕೃವಾಗಿ ನಗರದ ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು ಹರಿಬಿಟ್ಟಿದ್ದ 236 ಕಟ್ಟಡಗಳನ್ನು ಪತ್ತೆ ಹಚ್ಚಿರುವ ಜಲ ಮಂಡಳಿ ಈ ಕಟ್ಟಡಗಳ ಮಾಲಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಮಾಲಿನ್ಯ
ನಿಯಂತ್ರಣ ಮಂಡಳಿಗೆ ಪಟ್ಟಿ ಕಳುಹಿಸಿದೆ. 

Drainage Water Connects To Rain Water Canals In Bengaluru
Author
Bengaluru, First Published Oct 14, 2019, 7:51 AM IST | Last Updated Oct 14, 2019, 7:51 AM IST

ಬೆಂಗಳೂರು [ಅ.14]: ಜಲಮಂಡಳಿಯ ಒಳಚರಂಡಿ ಸಂಪರ್ಕ ಪಡೆಯದೇ ಅನಧಿಕೃವಾಗಿ ನಗರದ ಮಳೆ ನೀರು ಕಾಲುವೆಗೆ ತ್ಯಾಜ್ಯ ನೀರು ಹರಿಬಿಟ್ಟಿದ್ದ 236 ಕಟ್ಟಡಗಳನ್ನು ಪತ್ತೆ ಹಚ್ಚಿರುವ ಜಲ ಮಂಡಳಿ ಈ ಕಟ್ಟಡಗಳ ಮಾಲಿಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪಟ್ಟಿ ಕಳುಹಿಸಿದೆ. 

ನಗರದಲ್ಲಿ ಅನಧಿಕೃತವಾಗಿ ಮಳೆ ನೀರು ಕಾಲುವೆಗಳಿಗೆ ನೇರವಾಗಿ ತ್ಯಾಜ್ಯ ಹರಿಬಿಟ್ಟಿ ರುವವರನ್ನು ಪತ್ತೆ ಹೆಚ್ಚಲು ಜಲಮಂಡಳಿ ರಚಿಸಿರುವ ವಿಶೇಷ ತಂಡ ಪೂರ್ವ, ವಾಯುವ್ಯ ಹಾಗೂ ಉತ್ತರ ವಿಭಾಗಗಳಲ್ಲಿ ಕೈಗೊಂಡಿದ್ದ ಸಮೀಕ್ಷೆ ವೇಳೆ ಅನಧಿಕೃತವಾಗಿ ಮಳೆನೀರು ಕಾಲುವೆಗೆ ತ್ಯಾಜ್ಯದ ನೀರುಹರಿ ಸುತ್ತಿರುವ 236 ಕಟ್ಟಡಗಳು ಪತ್ತೆ ಮಾಡಿವೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ೩ ವಿಭಾಗಗಳಲ್ಲಿ ವೈಟ್‌ಫೀಲ್ಡ್, ಅಂಬೇಡ್ಕರ್ ನಗರ, ಅಯ್ಯಪ್ಪನಗರ, ಪೈ ಲೇಔಟ್, ಗರುಡಾಚಾರ್ ಪಾಳ್ಯ, ಪಾಪರೆಡ್ಡಿ ಪಾಳ್ಯ, ಜಿಸಿ ಪಾಳ್ಯ, ಐಟಿಪಿಎಲ್ ಮುಖ್ಯ ರಸ್ತೆ, ಕುಂದನಹಳ್ಳಿ, ಎಂಡಿ ಪುರ, ಕಾಡು ಗೋಡಿ, ಚಿನ್ನಪ್ಪನಹಳ್ಳಿ, ತಿಗಳರಪಾಳ್ಯ, ಮುನೇನಕೊಳಲು, ಅಶ್ವತ್ಥನಗರ, ಚೊಕ್ಕ ಸಂದ್ರ, ಯಲಹಂಕ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಈ ಅನಧಿಕೃತ ಸಂಪರ್ಕಗಳು ಬೆಳಕಿಗೆ ಬಂದಿವೆ. ನಗರದ ಮಳೆನೀರು ಕಾಲುವೆಗಳು ಕೆರೆಗಳಿಗೆ ಸಂಪರ್ಕ ಇರುವು ದರಿಂದ ತ್ಯಾಜ್ಯದ ನೀರು ಕೆರೆಗಳಿಗೆ ಹರಿದು ಕೆರೆಯ ನೀರು ಕುಲಷಿತವಾಗುತ್ತದೆ. ಇದ ರಿಂದ ಅಂತರ್ಜ ಲವೂ ಕಲುಷಿತವಾಗುತ್ತದೆ. 

ಅಲ್ಲದೆ, ಜಲ ಚರಗಳ ಮಾರಣಹೋಮ ವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಳೆನೀರು ಕಾಲುವೆಗಳಿಗೆ ತ್ಯಾಜ್ಯದ ನೀರು ಬಿಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಆದರೂ ಕೆಲವರು ಒಳಚರಂಡಿ ಸಂಪರ್ಕ ಪಡೆಯದೇ ನೇರ ವಾಗಿ ಕಟ್ಟಡಗಳ ತ್ಯಾಜ್ಯದ ನೀರನ್ನು ಮಳೆ ನೀರು ಕಾಲುವೆಗಳಿಗೆ ಹರಿ ಬಿಡುತ್ತಿದ್ದಾರೆ. ಈ ಅಕ್ರಮ ಸಂಪರ್ಕಗಳನ್ನು ಪತ್ತೆ ಹಚ್ಚಲು ವಿಶೇಷ ತಂಡವೊಂದನ್ನು ರಚಿಸಲಾಗಿದೆ. ಈ ತಂಡವೂ ನಗರದಾದ್ಯಂತ ಸರ್ವೆ ಮಾಡಿ ಈ ಅಕ್ರಮ ಸಂಪರ್ಕ ಪತ್ತೆ ಹಚ್ಚುವಲ್ಲಿ ನಿರತ ವಾಗಿದೆ. ಅದರಂತೆ ಈಗ 236 ಕಟ್ಟಡಗಳನ್ನು ಪತ್ತೆ ಹಚ್ಚಿದೆ ಎಂದು ಜಲ ಮಂಡಳಿ ನಿರ್ವಹಣೆ ವಿಭಾಗದ ಮುಖ್ಯ ಎಂಜಿನಿಯರ್ ಗಂಗಾಧರ್ ತಿಳಿಸಿದರು. 

Latest Videos
Follow Us:
Download App:
  • android
  • ios