ಬೆಂಗಳೂರು [ನ.09]: ಮಹಿಳೆಯೊಬ್ಬರು ಕೂಡಿಟ್ಟಿದ್ದ ಲಕ್ಷಾಂತರ ರುಪಾಯಿ ಹಣವನ್ನು ಪುತ್ರಿ ಮತ್ತು ಆಕೆಯ ಅಳಿಯ ಲಪಟಾಯಿಸಿರುವ ಘಟನೆ ನಡೆದಿದ್ದು, ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಇಟ್ಟಮಡು ನಿವಾಸಿ ಸುಲೋಚನಾ (59) ವಂಚನೆಗೊಳಗಾಗಿದ್ದು, ಪುತ್ರಿ ಮೇಘಾ, ಅಳಿಯ ಸಾಗರ್ ಹಾಗೂ ಆತನ ಸ್ನೇಹಿತರಾದ ಶ್ರೀನಿವಾಸ್ ಮತ್ತು ನಾರಾಯಣ್ ಎಂಬುವರ ವಿರುದಟಛಿ ಎಫ್ ಐಆರ್ ದಾಖಲಾಗಿದೆ. ಬ್ಯಾಂಕ್‌ನಿಂದ ಕೆಲವೊಂದು ಮಾಹಿತಿ ಕೇಳಲಾಗಿದ್ದು, ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಲಾಗುವುದು ಎಂದು ಸಿ.ಕೆ.ಅಚ್ಚುಕಟ್ಟ ಠಾಣೆ ಪೊಲೀಸರು ಹೇಳಿದ್ದಾರೆ.

ಸುಲೋಚನಾ ಅವರ ಪತಿ ಕಳೆದ ಒಂದೂವರೆ ವರ್ಷದ ಹಿಂದೆ ಅಸುನೀಗಿದ್ದು, ಇಟ್ಟುಮಡುವಿನಲ್ಲಿರುವ ಸ್ವಂತ ಮನೆಯಲ್ಲಿ ನೆಲೆಸಿದ್ದರು. ಸುಲೋಚನಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಹಿರಿಯ ಪುತ್ರಿ, ಪತಿಯ ಜತೆ ಪ್ರತ್ಯೇಕವಾಗಿ ನೆಲೆಸಿದ್ದರೆ, ಕಿರಿಯ ಪುತ್ರಿ ಆರೋಪಿ ಮೇಘನಾ ತಾಯಿ ಮನೆಯಲ್ಲಿ ನೆಲೆಸಿದ್ದಾರೆ. ಮೇಘನಾ ಪತಿ ಸಾಗರ್ ಕೂಡ ಅತ್ತೆ ಮನೆಯಲ್ಲಿ ಉಳಿದಿದ್ದಾರೆ. 

ವಿವಿ ಪುರದ ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಇರುವ ಸುಲೋಚನಾ ಅವರ ಪತಿ ಖಾತೆಯಲ್ಲಿ 20 ಲಕ್ಷ ಹಾಗೂ ಸುಲೋಚನಾ ಅವರ  ಕಾರ್ಪೋರೇಷನ್ ಖಾತೆಯಲ್ಲಿ 11.27 ಲಕ್ಷ ಸೇರಿ ಒಟ್ಟು 31.27 ಸಾವಿರ ಹಣವನ್ನು ವೃದಾಟಛಿಪ್ಯ ಕಾಲದಲ್ಲಿ ಜೀವನ ಸಾಗಿಸಲೆಂದು
ಇಟ್ಟುಕೊಂಡಿದ್ದರು. ತಮ್ಮ ಬಳಿ ಇರುವ ಹಣ ಹಾಗೂವಾಸವಿರುವ ಮನೆಯನ್ನು ತನ್ನ ಹೆಸರಿಗೆ ಬರೆದು ಕೊಡುವಂತೆ ಸಾಗರ್ ಅತ್ತೆಗೆ ಕಿರುಕುಳ ನೀಡುತ್ತಿದ್ದ. ಕಿರುಕುಳ ಸಹಿಸಿಕೊಂಡಿದ್ದ ಮಹಿಳೆ ಹಣ ಹಾಗೂ ನಿವೇಶವನ್ನು ಪುತ್ರಿ ಹಾಗೂ ಅಳಿಯನಿಗೆ ಕೊಟ್ಟಿರಲಿಲ್ಲ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತ್ತೆ ಬಳಿಯಿದ್ದ ಹಣ ಸಿಗುವುದಿಲ್ಲ ಎಂಬುದು ಸಾಗರ್‌ಗೆ ಖಾತ್ರಿಯಾಗಿತ್ತು. ಹಾಗಾಗಿ ಪತ್ನಿ ಬಳಿ ಆರೋಪಿ ಚರ್ಚೆ ನಡೆಸಿದ್ದು, ಹಣ ದೋಚಲು ಸಂಚು ರೂಪಿಸಿದ್ದರು. ಕೆಲ ತಿಂಗಳ ಹಿಂದೆ ಆರೋಪಿಗಳು ಸುಲೋಚನಾ ಮತ್ತು ಅವರ ಪತಿಯ ಚೆಕ್ ಬುಕ್, ಬ್ಯಾಂಕ್ ಪಾಸ್ ಬುಕ್‌ಅನ್ನು ಕಳವು ಮಾಡಿದ್ದರು. ನಂತರ ಸುಲೋಚನಾ ಅವರ ಪತಿ ಬಳಸುತ್ತಿದ್ದ ಮೊಬೈಲ್ ಸಂಖ್ಯೆಯನ್ನು ಬಳಕೆ ಮಾಡುವುದಾಗಿ ಪಡೆದುಕೊಂಡಿದ್ದ. ಪತಿಯ ಹೆಸರಿನಲ್ಲಿ ಚೆಕ್ ಗೆ ನಕಲು ಸಹಿ ಮಾಡಿ ಹಣ ವರ್ಗಾಯಿಸಿದ್ದಾರೆ. 

ನನ್ನ ಹೆಸರಿನಲ್ಲಿ ನೆಟ್ ಬ್ಯಾಂಕಿಂಗ್‌ಗೆ ಅರ್ಜಿ ಸಲ್ಲಿಸಿ, ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಪಡೆದುಕೊಂಡು ಕೃತ್ಯ ಎಸಗಿದ್ದಾರೆ. ಅಲ್ಲದೆ, ಬಿಡಿಎ ಅರ್ಕಾವತಿ ಬಡವಾಣೆಯಲ್ಲಿ ಪತಿಯ ಹೆಸರಲ್ಲಿದ್ದ ನಿವೇಶನವನ್ನು ನಕಲು ಸಹಿ ಬಳಸಿ 4 ಲಕ್ಷಕ್ಕೆ ನಾರಾಯಣ ಎಂಬುವರಿಗೆ ಸೇಲ್
ಡೀಡ್ ಮಾಡಿಸಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.