ಬೆಂಗಳೂರು(ಏ. 20)  ಕಮೀಷನರ್ ಭಾಸ್ಕರ್ ರಾವ್ ಕಾರ್ಯ ವೈಖರಿ ವಿರುದ್ದ ಡಿಜಿ ಪ್ರವೀಣ್ ಸೂದ್ ಅಸಮಾಧಾನ ವ್ಯಕ್ಪಡಿಸಿದ್ದಾರೆ ಎನ್ನಲಾಗಿದೆ.  ನಗರದಲ್ಲಿ ವಾಹನಗಳ ಸಂಚಾರ ದಿನೇ ದಿನೇ ಜಾಸ್ತಿಯಾಗ್ತಿದೆ. ಲಾಕ್ ಡೌನ್ ಏರಿಯಾಗಳಲ್ಲಿ ಟ್ರಾಫಿಕ್ ಪೊಲೀಸರು ಏನ್‌ ಕೆಲಸ ಮಾಡ್ತಿದ್ದಾರೆ.  ಲಾಕ್ ಡೌನ್ ಏರಿಯಾಗಳಲ್ಲಿ ಇರೋ ಬ್ಯಾರಿಕೇಡ್ ಸಡನ್ ಆಗಿ ತೆಗೆದಿದ್ದಾರೆ. ಹಲವಾರು ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ಪಾಸ್ ಗಳನ್ನ ಚೆಕ್ ಮಾಡ್ತಿಲ್ಲ.  ಟ್ರಾಫಿಕ್ ಅಧಿಕಾರಿಗಳು ಏನ್ ಕೆಲಸ ಮಾಡ್ತಾ ಇದ್ದಾರೆ ಗೊತ್ತೆ ಆಗ್ತಿಲ್ಲ ಎಂದಿದ್ದಾರೆ. 

ಬೇರೆ ಜಿಲ್ಲೆಯ ಪಾಸ್ ಬಂದಿರುವ ವಾಹನಗಳು ಸಿಟಿಯಲ್ಲಿ ಓಡಾಡೋ ಹಾಗಿಲ್ಲ . ಜಿಲ್ಲಾ ಎಸ್ ಪಿ, ಜಿಲ್ಲಾಧಿಕಾರಿ ಕೊಟ್ಟಿರೋ ಪಾಸ್ ಇರೋ ವಾಹನಗಳು ನಗರದಲ್ಲಿ ಓಡಾಡೋ ಹಾಗಿಲ್ಲ.  ಅಂತಹ ವಾಹನಗಳನ್ನು ಕೂಡಲೇ ಸೀಜ್ ಮಾಡುವಂತೆ ಡಿಜಿ ಆದೇಶ ನೀಡಿದ್ದಾರೆ.

ನಾನು ಮಂಗಳಮುಖಿ, ಪೊಲೀಸರಿಗೆ ದೊಡ್ಡ ತಲೆನೋವಾದ ಪಾದರಾಯನಪುರ ಆರೋಪಿ

ಸೂಕ್ತ ಕಾರಣ ಇಲ್ಲದೆ ಪಾಸ್ ಗಳನ್ನು ವಿತರಣೆ ಮಾಡೋ ಹಾಗಿಲ್ಲ. ತುರ್ತು ಕಾರ್ಯಗಳಿಗೆ ಮಾತ್ರ ಪೊಲೀಸ್ ಠಾಣೆಯಲ್ಲಿ ಪಾಸ್ ನೀಡಬೇಕು. ಲಾಕ್ ಡೌನ್ ಏರಿಯಾಗಳಲ್ಲಿ ಬ್ಯಾರಿಕೇಡ್ ಗಳನ್ನು ಹೆಚ್ಚು ಮಾಡಬೇಕು ಎಂಬ ಸೂಚನೆ ನೀಡಿದ್ದಾರೆ.

ಮುಂಜಾನೆ ಹಾಗೂ ಸಂಜೆ ಅತಿ ಹೆಚ್ಚಾಗಿ ಓಡಾಡುತ್ತಿರೋ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಬೇಕು.  ಊಟ ವಿತರಿಸೋ ಎನ್ ಜಿ ಒ ಗಳಿಗೂ ಪಾಸ್ ಕಡ್ಡಾಯ ಆಗಬೇಕು.  ವೈದ್ಯರು, ಸರ್ಕಾರಿ ಅಧಿಕಾರಿಗಳು, ತುರ್ತು ಅಗತ್ಯ ಸೇವೆಗೆ ಮಾತ್ರ ಪಾಸ್ ಇಲ್ಲದೆ ಓಡಾಟಕ್ಕೆ ಅವಕಾಶ ನೀಡಬೇಕು ಎಂದು ಪ್ರವೀಣ್ ಸೂದ್ ಆದೇಶ ನೀಡಿದ್ದಾರೆ..