ಆಶಾ ಕಾರ್ಯಕರ್ತರೆಯರಿಗೆ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆ ಇದೀಗ ತಿರುಗುಬಾಣವಾಗಿದೆ. ಬೆಂಗಲೂರಿನ ಫ್ರೀಂ ಪಾರ್ಕ್ನಲ್ಲಿ ಪ್ರತಿಭಟನೆ ಮಾಡುತ್ತಿರುವ ಆಶಾ ಕಾರ್ಯಕರ್ತೆಯರು ಹಳೇ ಪೋಸ್ಟರ್, ಭರವಸೆಗಳ ವಿಡಿಯೋ ಬಿಡುಗಡೆ ಮಾಡಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಬೆಂಗಳೂರು (ನ.22) ವಿವಿದೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದಲ್ಲೆಡೆಯ ಆಶಾರ್ಯ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಸರ್ಕಾರ ಸಚಿವರು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರೂ ಹೋರಾಟ ನಿಂತಿಲ್ಲ. ಮಾಸಿಕ ಗೌರವಧನ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರು ಬೇಡಿಕೆ ಈಡೇರುವವರೆಗೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ. ಇದೇ ವೇಳೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾದಾಗ ನೀಡಿದ ಭರವಸೆ ಕುರಿತು ಪೋಸ್ಟರ್, ವಿಡಿಯೋಗಳನ್ನು ಆಶಾ ಕಾರ್ಯಕರ್ತೆಯರು ಬಿಡುಗಡೆ ಮಾಡಿದ್ದಾರೆ. ಇದು ಕಾಂಗ್ರೆಸ್ಗೆ ತೀವ್ರ ಮುಜುಗರ ತಂದಿದೆ.
ಕಾಂಗ್ರೆಸ್ಗೆ ತಿರುಗುಬಾಣವಾದ ಪೋಸ್ಟರ್
ಕಳೆದ ಬಾರಿ ಆಶಾ ಕಾರ್ಯಕರ್ತರು ಧರಣಿ ನಡೆಸಿದ ಸಂದರ್ಭ ಮಾತುಕತೆ ಮೂಲಕ ಸಂಧಾನ ಮಾಡಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಾ ಕಾರ್ಯಕರ್ತಯರಿಗೆ 10,000 ರೂಪಾಯಿ ಗೌರವ ಧನ, 4,000 ರೂಪಾಯಿವರೆಗೆ ಪ್ರೋತ್ಸಾಹ ಧನ ಸೇರಿದಂತೆ ಹಲವು ಭರವಸೆಗಳನ್ನು ಸರ್ಕಾರ ನೀಡಿತ್ತು. ಈ ಭರವಸೆಗಳ ಮಹಾಪೂರವನ್ನು ಕಾಂಗ್ರೆಸ್ ನಾಯಕರು, ಮುಖಂಡರು ತಮ್ಮ ತಮ್ಮ ಸೋಶಿಯಲ್ ಮೀಡಿಯಾ ಪೋಸ್ಟ್ಗಳಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಮಾಧ್ಯಮಗಳಲ್ಲಿ ಈ ಕುರಿತು ಪ್ರಕಟಗೊಂಡ ವರದಿಗಳನ್ನು ಆಶಾ ಕಾರ್ಯಕರ್ತೆಯರು ಬಿಡುಗಡೆ ಮಾಡಿದ್ದಾರೆ. ಇದು ಕಾಂಗ್ರೆಸ್ ಸರ್ಕಾರಕ್ಕೆ ಇರಿಸು ಮುರಿಸು ತಂದಿದೆ.
ಕಾಂಗ್ರೆಸ್ ಅಧಿಕೃತ ಖಾತೆಯಿಂದ ಪೋಸ್ಟ್
ಆಶಾ ಕಾರ್ಯಕರ್ತಯರಿಗೆ ಕಾಂಗ್ರೆಸ್ ಸರ್ಕಾರ 10 ಸಾವಿರ ರೂಪಾಯಿ ಗೌರವಧನ, 4000 ರೂಪಾಯಿ ಪ್ರೋತ್ಸಾಹ ಧನ ಹಾಗೂ ನಿವೃತ್ತಿ ವೇಳೆ 5 ಲಕ್ಷ ರೂಪಾಯಿ ಮೊತ್ತ ನೀಡಲಾಗುತ್ತದೆ ಎಂದು ಭರವಸೆ ನೀಡಿತ್ತು. ಈ ಕುರಿತು ಅಧಿಕೃತ ಪೋಸ್ಟನ್ನು ಕರ್ನಾಟಕ ಕಾಂಗ್ರೆಸ್ ಮಾಡಿತ್ತು. ಇದೀಗ ಇದೇ ಪೋಸ್ಟರ್, ವಿಡಿಯೋಗಳು ತಿರುಗುಬಾಣವಾಗಿದೆ.
ಆಶಾ ಕಾರ್ಯಕರ್ತಯರ ಬೆಂಬಲಕ್ಕೆ ಸುಮಲತಾ ಅಂಬರೀಷ್
ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ಬೇಡಿಕೆ ಮಾನವೀಯ ದೃಷ್ಟಿಕೋನದಿಂದ ಪರಿಗಣಿಸುವ ಕುರಿತು ಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಸುಮಲತಾ ಅಂಬರೀಷ್ ಪತ್ರ ಬರೆದಿದ್ದಾರೆ. ಹಲವು ದಿನಗಳಿಂದ ಚಳಿಯನ್ನೂ ಲೆಕ್ಕಿಸದೆ, ಬಯಲಿನಲ್ಲಿಯೇ ಹಗಲು-ರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಮಹಿಳೆಯರ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿದೆ. ಮುಖ್ಯಮಂತ್ರಿಗಳು ವೈಯಕ್ತಿಕವಾಗಿ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಬೇಕು. ಆಶಾಗಳ ₹15,000 ಗೌರವಧನ ಹೆಚ್ಚಳದ ಬೇಡಿಕೆಯನ್ನು ಮಾನವೀಯತೆ ಮತ್ತು ಸಹಾನುಭೂತಿಯಿಂದ ಪರಿಗಣಿಸಿ, ಶೀಘ್ರವೇ ನ್ಯಾಯ ಒದಗಿಸಬೇಕೆಂದು ಹೃತ್ಪೂರ್ವಕವಾಗಿ ಮನವಿ ಮಾಡುತ್ತೇನೆ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
















