ಸಿಜೆ ರಾಯ್ ಸಾವಿಗೂ ಕೆಲವೇ ಕ್ಷಣ ಮುನ್ನ ನಡೆದಿತ್ತು 3 ಅನುಮಾನಸ್ಪದ ಘಟನೆ, ಈ ಕುರಿತು ಕಾನ್ಫಿಡೆಂಟ್ ಗ್ರೂಪ್ ನಿರ್ದೇಶಕ ದೂರು ದಾಖಲಿಸಿದ್ದಾರೆ. ತಮ್ಮ ದೂರಿನಲ್ಲಿ ಈ ಸ್ಫೋಟಕ ಮಾಹಿತಿ ಉಲ್ಲೇಖಿಸಿದ್ದಾರೆ.

ಬೆಂಗಳೂರು (ಜ.30) ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ, ಬೆಂಗಳೂರಿನ ಉದ್ಯಮಿ ಸಿಜೆ ರಾಯ್ ದುರಂತ ಸಾವಿನ ಕುರಿತು ಅನುಮಾನಗಳು ಬೆಳೆಯುತ್ತಿದೆ. ಕಳೆದ ಕೆಲ ದಿನಗಳಿಂದ ಐಟಿ ಅಧಿಕಾರಿಗಳ ದಾಳಿಯಿಂದ ಬೇಸತ್ತಿದ್ದರು ಅನ್ನೋ ಮಾಹಿತಿಗಳು ಎಲ್ಲೆಡೆ ಹರಿದಾಡುತ್ತಿದೆ. ಇಂದು ಕೂಡ ಐಟಿ ಅಧಿಕಾರಿಗಳ ಕಚೇರಿ ಶೋಧದ ನಡುವೆ ಸಿಜೆ ರಾಯ್ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡಿದ್ದಾರೆ. ಘಟನೆ ಕುರಿತು ಸಾಕಷ್ಟು ಅನುಮಾನಗಳು, ಐಟಿ ಅಧಿಕಾರಿಗಳ ವಿರುದ್ದ ಆರೋಪಗಳು ಕೇಳಿಬರುತ್ತಿದೆ. ಈ ಬೆಳವಣಿಗೆ ನಡುವೆ ಕಾನ್ಫಿಡೆಂಟ್ ಗ್ರೂಪ್ ಡೈರೆಕ್ಟರ್ ಟಿಜೆ ಜೊಸೆಫ್ ರಾಯ್ ಸಾವಿನ ತನಿಖೆಗೆ ಆಗ್ರಹಿಸಿ ದೂರು ನೀಡಿದ್ದಾರೆ.

ಅನುಮಾನ ವ್ಯಕ್ತಪಡಿಸಿ ದೂರು

ಸಿಜೆ ರಾಯ್ ಕೊಠಡಿಗೆ ತೆರಳಿ ಎದೆಗೆ ಗುಂಡು ಹಾರಿಸಿ ಮೃತಪಟ್ಟಿದ್ದಾರೆ. ಇದೀಗ ಸಾವಿಗೂ ಮುನ್ನ ನಡೆದ ಘಟನೆಗಳ ಬಗ್ಗೆ ಟಿಜೆ ಜೊಸೆಫ್ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ನಾರಾಯಣ ಆಸ್ಪತ್ರೆಯಲ್ಲಿ ಟಿಜೆ ಜೊಸೆಫ್ ದೂರು ದಾಖಲಿಸಿದ್ದಾರೆ. ಟಿಜೆ ಜೊಸೆಫ್ ಉಲ್ಲೇಖಿಸಿದ ಅನುಮಾನಸ್ಪದ ಅಂಶಗಳೇನು?

ಆತಂಕದಲ್ಲಿ ಕಚೇರಿಗೆ ಬಂದ ಸಿಜೆ ರಾಯ್

ಸೆಜೆ ರಾಯ್ ಇಂದು (ಜ.30) ಮಧ್ಯಾಹ್ನ ಲ್ಯಾಂಗ್ ಫೋರ್ಡ್ ರಸ್ತೆಗೆ ಬಂದಿದ್ದಾರೆ. ಸಿಜೆ ರಾಯ್ ಯಾವತ್ತೂ ಕೂಲ್ ಮನುಷ್ಯ. ಎಲ್ಲಾ ಸವಾಲುಗಳನ್ನು ತುಂಬಾ ತಾಳ್ಮೆಯಿಂದ ಹಸ್ಮನುಖವಾಗಿಯೇ ಎದುರಿಸುತ್ತಿದ್ದರು. ಆತಂಕ, ಭಯ ಅವರಲ್ಲಿ ಇರುತ್ತಿರಲಿಲ್ಲ. ಆದರೆ ಇಂದು ಗಾಬರಿಯಿಂದಲೇ ಸಿಜೆ ರಾಯ್ ಕಚೇರಿಗೆ ಬಂದಿದ್ದು. ಕೆಳಗಡೆ ಕಾರಿನಿಂದ ಇಳಿದು ಲಿಫ್ಟ್ ಬಳಸದೇ ನಡೆದುಕೊಂಡೇ ಸೆಜೆ ರಾಯ್ ಮೇಲೆ ಬಂದಿದ್ದಾರೆ.

ಗನ್ ಮ್ಯಾನ್ ಹೊರಗಡೆ ಇರಲು ಸೂಚಿಸಿದ ಸಿಜೆರಾಯ್

ಮೇಲೆ ಬಂದ ಸಿಜೆ ರಾಯ್ ಗನ್ ಮ್ಯಾನ್‌ನನ್ನು ಹೊರಗಡೆ ನಿಲ್ಲಲು ಸೂಚಿಸಿದ್ದರು. ಯಾವತ್ತೂ ಗನ್ ಮ್ಯಾನ್ ಸಿಜೆ ರಾಯ್ ಜೊತೆಗೆ ಇರುತ್ತಿದ್ದರು. ಅವರಿಗೆ ನಿರ್ಬಂಧ ಇರಲಿಲ್ಲ. ಆದರೆ ಇಂದು ಹೊರಗಡೆ ನಿಲ್ಲಲು ಸೂಚಿಸಿದ್ದರು. ಇಷ್ಟೇ ಅಲ್ಲ ಯಾರನ್ನೂ ಹೊರಗಡೆ ಬಿಡಬೇಡ ಎಂದು ಸೂಚಿಸಿ ಹೇಳಿ ಕಚೇರಿ ಒಳ ಪ್ರವೇಶಿಸಿದ್ದಾರೆ ಎಂದು ಟಿಜೆ ಜೊಸೆಫ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕೊಠಡಿಗೆ ಹೋಗಿ ಲಾಕ್

ಕಚೇರಿಯ ಕೊಠಡಿಗೆ ತೆರಳಿದೆ ಸಿಜೆ ರಾಯ್ ಬಾಗಿಲು ಲಾಕ್ ಮಾಡಿದ್ದಾರೆ. 15 ನಿಮಿಷ ಯಾವುದೇ ಸುಳಿವು ಇರಲಿಲ್ಲ. ಸಾಮಾನ್ಯವಾಗಿ ಹೀಗೆ ಮಾಡುವವರಲ್ಲ. ಲಾಕ್ ಮಾಡಿಕೊಳ್ಳುವುದು, ಏಕಾಂತದಲ್ಲಿರುವ ಅಭ್ಯಾಸ ರಾಯ್‌ಗೆ ಇಲ್ಲ. 15 ನಿಮಿಷದ ಬಳಿಕ ಬುಲೆಟ್ ಶಬ್ದ ಕೇಳಿದೆ. ಗನ್ ಫೈರಿಂಗ್ ಶಬ್ದ ಕೇಳಿದ ಬೆನ್ನಲ್ಲೇ ಸಿಬ್ಬಂದಿಗಳು ಕೊಠಡಿಯತ್ತ ದೌಡಾಯಿಸಿದ್ದಾರೆ. ಅಷ್ಟರಲ್ಲೇ ಸಿಜೆ ರಾಯ್ ನೆಲದ ಮೇಲೆ ಬಿದ್ದಿದ್ದರು. ಸಿಬ್ಬಂದಿಗಳು ತಕ್ಷಣವೇ ಆಸ್ಪತ್ರೆ ದಾಖಲಿಸಿದರೂ ಪ್ರಯೋಜನ ಆಗಲಿಲ್ಲ. ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಟಿಜೆ ಜೊಸೆಫ್ ದೂರಿನಲ್ಲ ಉಲ್ಲೇಖಿಸಿದ್ದಾರೆ. ಕೆಲ ಅನುಮಾನಗಳು ವ್ಯಕ್ತಪಡಿಸಿರವ ಟಿಜೆ ಜೊಸೆಫ್ ದೂರು ದಾಖಲಿಸಿದ್ದಾರೆ.

ದೂರು ದಾಖಲಿಸಿ ಎಫ್ಐಆರ್

ಡೈರೆಕ್ಟರ್ ನೀಡಿದ ದೂರು ದಾಖಲಿಸಿ ಎಫ್‌ಐಆರ್ ದಾಖಲಿಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಸೋಕೋ ಟೀಂ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದಾರೆ. ಘಟನೆ ನಡೆದ ಚೇಬಂರ್, ರಕ್ತದ ಕಲೆಗಳು, ಪಿಸ್ತೂಲ್ ಮೇಲಿನ‌ ಫಿಂಗರ್ ಪ್ರಿಂಟ್ ಸಂಗ್ರಹ ಮಾಡಲಾಗಿದೆ. ಮೊಬೈಲ್ ಫೋನ್, ಪಿಸ್ತೂಲ್ ಸೇರಿದಂತೆ ಕೆಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.