ಬೆಂಗಳೂರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯ ಪೊಂಗಲ್‌ನಲ್ಲಿ ಜಿರಳೆ ಪತ್ತೆ. ಗ್ರಾಹಕ ಲೋಕನಾಥ್‌ಗೆ ಆಘಾತ, ಹೋಟೆಲ್ ಸಿಬ್ಬಂದಿ ಕ್ಷಮೆ ಯಾಚನೆ.
ಬೆಂಗಳೂರು (ಜು.24):ರಾಜಧಾನಿ ಬೆಂಗಳೂರಿನ (Bengaluru) ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ (kempegowda international airport) ಜನಪ್ರಿಯ ರಾಮೇಶ್ವರಂ ಕೆಫೆಯಲ್ಲಿ (rameshwaram cafe) ಖರೀದಿಸಿದ ಪೊಂಗಲ್‌ನಲ್ಲಿ (Pongal) ಜಿರಳೆ (Cockroach) ಪತ್ತೆಯಾಗಿದ್ದು, ಗ್ರಾಹಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ
ಇಂದು ಬೆಳಗ್ಗೆ (ಜುಲೈ 24, 2025 ರಂದು 07:42 ಕ್ಕೆ) ಲೋಕನಾಥ್ ಅವರು ವಿಮಾನ ನಿಲ್ದಾಣದ ರಾಮೇಶ್ವರಂ ಕೆಫೆಯಿಂದ 300 ರೂಪಾಯಿ ಹಣ ನೀಡಿ ಪೊಂಗಲ್ ಮತ್ತು 180 ರೂ.ಗೆ ಫಿಲ್ಟರ್ ಕಾಫಿ ಖರೀದಿಸಿದ್ದರು. ಒಟ್ಟು ಬಿಲ್ 504 ರೂ. ಆಗಿತ್ತು. ಅವರು ಅದನ್ನು ತಿನ್ನುತ್ತಿದ್ದಾಗ ಅದರಲ್ಲಿ ಜಿರಳೆ ಕಾಣಿಸಿಕೊಂಡಿದೆ. ತಕ್ಷಣವೇ ಅವರು ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ತಪ್ಪಾಗಿದೆ ಎಂದು ಕೈ ಮುಗಿದು ಕೇಳಿಕೊಂಡಿದ್ದಾರೆ. ಈ ಘಟನೆ ಗ್ರಾಹಕ ವಲಯದಲ್ಲಿ ತೀವ್ರ ಅಸಮಾಧಾನ ಮೂಡಿಸಿದ್ದು, ಆಹಾರ ಗುಣಮಟ್ಟ ಮತ್ತು ನೈರ್ಮಲ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಆಹಾರ ಸೇವಿಸುವಾಗಲೇ ಜಿರಳೆ ಪತ್ತೆಯಾಗಿದೆ. ಇದರ ಬೆನ್ನಲ್ಲಿಯೇ ಗ್ರಾಹಕ ಅಲ್ಲಿನ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಇನ್ನು ಸಿಬ್ಬಂದಿ ಹಾರಿಕೆ ಉತ್ತರ ನೀಡೋದಲ್ಲದೆ, ಪ್ಲೇಟ್‌ನ ಒಳಗಿದ್ದ ಜಿರಳೆಯನ್ನು ತೆಗೆದುಹಾಕಲು ಪ್ರಯತ್ನಿಸಿರುವುದು ಕಂಡಿದೆ. ಆಗ ಗ್ರಾಹಕ ಅದನ್ನು ತೆಗೆದಿದ್ದು ಏಕೆ ಎಂದು ಪ್ರಶ್ನೆ ಮಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಸಿಬ್ಬಂದಿಯೊಬ್ಬರು ನೀವು ಅನುಚಿತವಾಗಿ ಮಾತನಾಡಿದ್ದೀರಾ ಎಂದು ಕೇಳುತ್ತಿರುವುದು ಕೇಳಿಬರುತ್ತಿದೆ. ಈ ವರದಿಯನ್ನು ಬರೆಯುವ ಸಮಯದಲ್ಲಿ ಕೆಫೆಯಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ರಾಮೇಶ್ವರಂ ಕೆಫೆ ಬೆಂಗಳೂರು ಮೂಲದ ಬ್ರ್ಯಾಂಡ್ ಆಗಿದ್ದು, ರೆಸ್ಟೋರೆಂಟ್‌ಗಳ ಸರಪಣಿಯನ್ನು ಹೊಂದಿದೆ. ಇದು ಸ್ಥಳೀಯರು ಮತ್ತು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ. ಕಳೆದ ವರ್ಷ ಮೇ ತಿಂಗಳಲ್ಲಿ, ಹೈದರಾಬಾದ್‌ನಲ್ಲಿರುವ ಅದರ ಮಳಿಗೆಗಳು ಹಲವಾರು ಅವಧಿ ಮೀರಿದ ಮತ್ತು ತಪ್ಪಾಗಿ ಲೇಬಲ್ ಮಾಡಲಾದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡ ನಂತರ ತೆಲಂಗಾಣದ ಆಹಾರ ಸುರಕ್ಷತಾ ಇಲಾಖೆಯ ಪರಿಶೀಲನೆಗೆ ಒಳಪಟ್ಟವು. ಇವುಗಳಲ್ಲಿ ಮಾರ್ಚ್ 2024 ರಲ್ಲಿ ಅವಧಿ ಮುಗಿದ 100 ಕಿಲೋ ಉದ್ದಿನ ಬೇಳೆ, ಹಾಗೆಯೇ 10 ಕಿಲೋ ಅವಧಿ ಮುಗಿದ ಮೊಸರು ಮತ್ತು ಎಂಟು ಲೀಟರ್ ಅವಧಿ ಮುಗಿದ ಹಾಲು ಸೇರಿದ್ದವು.
2021ರಲ್ಲಿ ಆರಂಭವಾದ ರಾಮೇಶ್ವರಂ ಕೆಫೆ ಕೆಲವೇ ವರ್ಷಗಳಲ್ಲಿ ನಗರದಲ್ಲಿ ಜನಪ್ರಿಯವಾದ ಹೋಟೆಲ್. ಇಲ್ಲಿನ ದೋಸೆ, ತುಪ್ಪದ ಬಳಕೆ, ಉತ್ತಮ ಗುಣಮಟ್ಟದ ಕಾಫಿಗೆ ಹಲವಾರು ಜನರು ಮಾರು ಹೋಗಿದ್ದಾರೆ. ನಗರದಕ್ಕೆ ಆಗಮಿಸುವ ಹಲವಾರು ಜನರು ಈ ಹೋಟೆಲ್‌ಗೆ ತಪ್ಪದೇ ಭೇಟಿ ನೀಡುತ್ತಾರೆ. ಆದರೆ, ಇಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಈಗ ವ್ಯಾಪಕ ಪ್ರಶ್ನೆಗಳು ಎದುರಾಗಿದೆ. ಇತ್ತೀಚೆಗಷ್ಟೇ ರಾಮೇಶ್ವರಂ ಕೆಫೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತನ್ನ ಮಳಿಗೆಯನ್ನು ಆರಂಭಿಸಿತ್ತು. ರಾಮೇಶ್ವರಂ ಕೆಫೆ ಅಲ್ಲದೆ, ಸಿಟಿಆರ್ ಕೂಡ ಇಲ್ಲಿ ತನ್ನ ಮಳಿಗೆಯನ್ನು ಹೊಂದಿದೆ.
ಇತ್ತೀಚೆಗೆ ಕೇಂದ್ರ ಟೆಲಿಕಾಮ್ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಬೆಂಗಳೂರಿಗೆ ಭೇಟಿ ನೀಡಿದ್ದ ವೇಳೆ ರಾಮೇಶ್ವರಂ ಕೆಫೆಗೆ ಭೇಟಿ ನೀಡಿ ಆಹಾರ ಸವಿದಿದ್ದರು. ಇಲ್ಲಿನ ದೋಸೆ ಹಾಗೂ ಫಿಲ್ಟರ್ ಕಾಫಿಗೆ ತಾವು ಮಾರು ಹೋಗಿದದಾಗಿ ತಿಳಿಸಿದ್ದರು. ಈ ಕುರಿತು ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದ ಅವರು, ರಾಮೇಶ್ವರಂ ಕೆಫೆ ತಿಂಡಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಕಣ್ಮುಚ್ಚಿ ಬೇರೆಯವರಿಗೆ ರೆಕೆಂಡ್ ಮಾಡಬಹುದು ಎಂದಿದ್ದರು. ಈಗ ಅಂಥ ಹೋಟೆಲ್‌ನ ಆಹಾರದಲ್ಲಿಯೇ ಜಿರಳೆ ಪತ್ತೆಯಾಗಿರುವುದು ಗ್ರಾಹಕರಿಗೆ ಆತಂಕ ಉಂಟು ಮಾಡಿದೆ.
