ಬೆಂಗಳೂರು [ಅ.09] : ಪರಪ್ಪನ ಅಗ್ರಹಾರ ಜೈಲಿಗೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ, ಅತ್ಯಧಿಕ ಪ್ರಮಾಣದ ಮಾರಕಾಸ್ತ್ರ ಹಾಗೂ ಗಾಂಜಾ ವಶಪಡಿಸಿಕೊಂಡಿದ್ದಾರೆ. 

ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ 60 ಪೊಲೀಸರ ತಂಡದಿಂದ ದಾಳಿ ನಡೆಸಲಾಗಿದೆ. 

ಖೈದಿಗಳು ಜೈಲಿನ ಒಳಗೆ ಮೊಬೈಲ್, ಗಾಂಜಾ ಹಾಗೂ ಮಾರಕಾಸ್ತ್ರಗಳನ್ನು ಉಪಯೋಗಿಸುತ್ತಿದ್ದ ಹಿನ್ನೆಲೆ ದಾಳಿ ನಡೆದಿದ್ದು,  ಈ ವೇಳೆ 37 ಚಾಕು, ಗಾಂಜಾ, ಸೇದುವ ಪೈಪ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ ಮೊಬೈಲ್ ಹಾಗೂ ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಮಾತನಾಡಿರುವ ಆಯುಕ್ತ ಸಂದೀಪ್ ಪಾಟೀಲ್ ದಾಳಿ ವೇಳೆ ಅನೇಕ ವಸ್ತುಗಳು ಪತ್ತೆಯಾಗಿದ್ದು,  ಅಪರಾಧ ಚಟುವಟಿಕೆಯನ್ನು ಅಲ್ಲಿಂದಲೇ ನಡೆಸುತ್ತಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.