ಬೆಂಗಳೂರು(ಡಿ. 17)  ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದ 5000 ಪ್ರಯಾಣಿಕರಿಗೆ ಬಿಎಂಟಿಸಿ ದಂಡದ ಬಿಸಿ ಮುಟ್ಟಿಸಿದೆ.  ಟಿಕೆಟ್ ಇಲ್ಲದೇ ಪ್ರಯಾಣ ಮಾಡಬಹುದು, ಎಲ್ಲಿಯೂ ಚೆಕಿಂಗ್ ಆಫೀಸರ್ ಬರುವುದಿಲ್ಲ ಎಂದುಕೊಂಡರೆ ಅದು ಅವರ ಮೂರ್ಖತನ. 

ನವೆಂಬರ್ ತಿಂಗಳಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡುತ್ತಿದ್ದ 5557 ಜನರಿಗೆ ದಂಡ ಹಾಕಿ 10,08,460 ರೂ. ದಂಡ ವಸೂಲಿ ಮಾಡಲಾಗಿದೆ.

ಬಿಎಂಟಿಸಿಗೆ ಪುನೀತ್ ರಾಜ

ಪ್ರಯಾಣಿಕರಿಗೆ ಮಾತ್ರವಲ್ಲ ನಿರ್ವಾಹಕರಿಗೂ ದಂಡದ ಬಿಸಿ ತಟ್ಟಿದೆ. 19073 ಟ್ರಿಪ್ ಗಳನ್ನು ಚೆಕ್ ಮಾಡಲಾಗಿದ್ದು 2838 ನಿರ್ವಾಹಕರ ಮೇಲೂ ಪ್ರಕರಣ ದಾಖಲಾಗಿದೆ.ಕಿಕ್ಕಿರಿದು ತುಂಬುವ ಬಸ್ ಗಳಲ್ಲಿ ಪ್ರಯಾಣಿಸುವ ಚಾಲಾಕಿಗಳು ಟಿಕೆಟ್ ಪಡೆಯದೇ ಪ್ರಯಾಣ ಮಾಡಿ ಎಲ್ಲೆಂದರಲ್ಲಿ ಇಳಿದುಕೊಂಡು ಹೋಗುತ್ತಿದ್ದರು. ಈ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಂಡು ರೂಟ್ ಗಳನ್ನು ಗುರುತಿಸಿ ದಾಳಿ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.