Asianet Suvarna News Asianet Suvarna News

ಬೆಂಗಳೂರಿನಲ್ಲಿ ತೀವ್ರ ನಿಗಾ ಘಟಕ ಸೇರಿದ ಬೈಕ್‌ ಆಂಬುಲೆನ್ಸ್‌ಗಳು

ತುರ್ತು ಚಿಕಿತ್ಸೆಗೆ ನೆರವಾಗಿ ಜೀವ ರಕ್ಷಕ ಆಗಬೇಕಾಗಿದ್ದ ಬೈಕ್ ಆಂಬುಲೆನ್ಸ್‌ಗಳು ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ಯಾರೇಜ್ ಸೇರಿವೆ ಈ ಕುರಿತು ಒಂದು ವರದಿ
 

bike ambulance in state admitted to intensive care akb
Author
First Published Sep 28, 2022, 3:25 PM IST

ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು

ಬೆಂಗಳೂರು: ಆರೋಗ್ಯ ಇಲಾಖೆಯನ್ನೇ  ಅನಾರೋಗ್ಯಕ್ಕೆ ತಳ್ಳಿದ್ರಾ ಅಧಿಕಾರಿಗಳು ಹೀಗೊಂದು ಪ್ರಶ್ನೆ ಕಾಡಲು ಕಾರಣವಾಗಿರೋದು ಬೈಕ್ ಆಂಬುಲೆನ್ಸ್‌ಗಳು. ತುರ್ತು ಚಿಕಿತ್ಸೆಗೆ ನೆರವಾಗಿ ಜೀವ ರಕ್ಷಕ ಆಗಬೇಕಾಗಿದ್ದ ಬೈಕ್ ಆಂಬುಲೆನ್ಸ್‌ಗಳು ಆರೋಗ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಗ್ಯಾರೇಜ್ ಸೇರಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬೈಕ್‌ ಅಂಬುಲೆನ್ಸ್ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದ್ರೆ ಇದೀಗ ಈ‌ ಯೋಜನೆಯನ್ನು ಮುಂದುರಿಸಲು ಆರೋಗ್ಯ ಸಚಿವರಿಗೆ ಆಸಕ್ತಿ ಇಲ್ವಾ ಎಂಬ ಪ್ರಶ್ನೆ ಮೂಡಿದೆ. 

ಏನಿದು ಬೈಕ್  ಆಂಬುಲೆನ್ಸ್ ಯೋಜನೆ

2015ರಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಬೈಕ್ ಆಂಬುಲೆನ್ಸ್‌ನ್ನು (Ambulence)  ಕಾಂಗ್ರೆಸ್ ಸರ್ಕಾರ (Congress Govt)ಜಾರಿಗೆ ತಂದಿತ್ತು‌. ರಸ್ತೆ ಅಪಘಾತದಲ್ಲಿ (Road Accident)  ಸಂಭವಿಸುವ ಮರಣ ಪ್ರಮಾಣ (Death toll) ತಗ್ಗಿಸಲು ಹಾಗೂ ಸಂಚಾರ ದಟ್ಟಣೆ (Traffic jam) ನಡುವೆ ಶೀಘ್ರ ವೈದ್ಯಕೀಯ ಸೇವೆ (Medical service)ನೀಡಲು ಬೈಕ್ ಆಂಬುಲೆನ್ಸ್  ಸೇವೆ ಆರಂಭ ಮಾಡಲಾಗಿತ್ತು. ಬೈಕ್ ಅಂಬುಲೆನ್ಸ್‌ನಲ್ಲಿ ಗ್ಲುಕೋಮೀಟರ್(Glucometer), ಆಕ್ಸಿಜನ್ ಸಿಲಿಂಡರ್ (Oxygen cylinder) , ಹೃದಯ ಬಡಿತ ಹಾಗೂ ರಕ್ತದೊತ್ತಡ ಪರೀಕ್ಷಿಸುವ ಉಪಕರಣ, ಬ್ಯಾಂಡೇಜ್ , ಜೀವರಕ್ಷಕ ಔಷಧಿ ಮುಂತಾದ ತುರ್ತು ಅಗತ್ಯದ ವೈದ್ಯಕೀಯ ಸಾಮಗ್ರಿಗಳನ್ನು ಬೈಕ್ ಆಂಬುಲೆನ್ಸ್ ನಲ್ಲಿ ಇರಿಸಲಾಗಿತ್ತು. ತಲಾ ಒಂದು ಬೈಕ್ ಆಂಬುಲೆನ್ಸ್ ಗೆ 1.76 ಲಕ್ಷ ಕೊಟ್ಟು ಖರೀದಿ ಮಾಡಲಾಗಿತ್ತು.

ಮಾಡಿದ್ದುಣ್ಣೋ ಮಾರಾಯ: ಆ್ಯಂಬುಲೆನ್ಸ್‌ಗೆ ದಾರಿ ಬಿಡದೇ ಕಾರಿನ ಓಟ: ವೇಗವಾಗಿ ಸಾಗಿ ಅಪಘಾತ

ಬೆಂಗಳೂರಿನಲ್ಲಿ ಒಟ್ಟು19 ಬೈಕ್ ಆಂಬುಲೆನ್ಸ್‌ಗಳನ್ನು ರಸ್ತೆಗೆ ಇಳಿಸಲಾಗಿತ್ತು. ಆದ್ರೆ ಆ ಬೈಕ್‌ಗಳೆಲ್ಲಾ ಸರಿಯಾಗಿ ನಿರ್ವಹಣೆ ಮಾಡದೆ ಕೆಟ್ಟು ನಿಂತಿದ್ದು, ಲಕ್ಷ ಲಕ್ಷ  ವೆಚ್ಚದಲ್ಲಿ ಖರೀದಿ ಮಾಡಿರುವ ಬೈಕ್ ಆಂಬುಲೆನ್ಸ್ ಗಳು ಮೂಲೆ ಸೇರಿವೆ. 

ಆ್ಯಂಬುಲೆನ್ಸ್ ಮಿಸ್ ಯೂಸ್ ತಡೆಗೆ ಸಂಚಾರಿ ಪೊಲೀಸ್ ಇಲಾಖೆಯ ಮಾಸ್ಟರ್ ಪ್ಲ್ಯಾನ್

Follow Us:
Download App:
  • android
  • ios