ಆ್ಯಂಬುಲೆನ್ಸ್​  ಬಂದರೆ ರೋಡ್ ಕ್ಲಿಯರ್ ಮಾಡಬೇಕು. ರೋಡ್ ರೆಗ್ಯುಲೇಷನ್ಸ್ ಅವರಿಗೆ ಅನ್ವಯ ಆಗಲ್ಲ ಅಂತ ರೂಲ್ಸೇ ಇದೆ.  ಸೋ ಇದನ್ನೇ ಉಪಯೋಗಿಸಿಕೊಂಡು  ಕೆಲ ಆ್ಯಂಬ್ಯುಲೆನ್ಸ್  ಡ್ರೈವರ್'ಗಳು  ಸುಮ್ ಸುಮ್ನೇ ಸೈರನ್ ಹೊಡ್ಕೊಂಡು ಹೋಗುತ್ತಾರೆ. ಇದನ್ನ ನಿಯಂತ್ರಿಸಲು ರಸ್ತೆ ಸುರಕ್ಷತೆ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಂಬ್ಯುಲೆನ್ಸ್  ಮೇಲಿರುವ ಸೈರನ್ ಹಾಗೂ ಅಂಬ್ಯುಲೆನ್ಸ್ ಮೇಲಿರುವ ಲೈಟ್ ಕಲರ್ ಚೇಜ್ ಮಾಡೋಕೆ ಮುಂದಾಗಿದೆ.

ಬೆಂಗಳೂರು (ಡಿ.11): ಆ್ಯಂಬುಲೆನ್ಸ್​ ಬಂದರೆ ರೋಡ್ ಕ್ಲಿಯರ್ ಮಾಡಬೇಕು. ರೋಡ್ ರೆಗ್ಯುಲೇಷನ್ಸ್ ಅವರಿಗೆ ಅನ್ವಯ ಆಗಲ್ಲ ಅಂತ ರೂಲ್ಸೇ ಇದೆ. ಸೋ ಇದನ್ನೇ ಉಪಯೋಗಿಸಿಕೊಂಡು ಕೆಲ ಆ್ಯಂಬ್ಯುಲೆನ್ಸ್ ಡ್ರೈವರ್'ಗಳು ಸುಮ್ ಸುಮ್ನೇ ಸೈರನ್ ಹೊಡ್ಕೊಂಡು ಹೋಗುತ್ತಾರೆ. ಇದನ್ನ ನಿಯಂತ್ರಿಸಲು ರಸ್ತೆ ಸುರಕ್ಷತೆ ಮತ್ತು ಸಂಚಾರಿ ಪೊಲೀಸ್ ಇಲಾಖೆ ಅಂಬ್ಯುಲೆನ್ಸ್ ಮೇಲಿರುವ ಸೈರನ್ ಹಾಗೂ ಅಂಬ್ಯುಲೆನ್ಸ್ ಮೇಲಿರುವ ಲೈಟ್ ಕಲರ್ ಚೇಜ್ ಮಾಡೋಕೆ ಮುಂದಾಗಿದೆ.

ತುರ್ತು ಇದ್ದರೆ ಕೆಂಪು ಲೈಟ್ ಮತ್ತು ಲಾಂಗ್ ಸೈರನ್, ನಾರ್ಮಲ್ ಕೇಸ್​'ಗಳಾದ್ರೆ ನೀಲಿ ಬಣ್ಣದ ಲೈಟ್ ಹಾಗೂ ಪ್ರತ್ಯೇಕ ಸೈರನ್ ನೀಡಲು ಚಿಂತನೆ ನಡೆಸಲಾಗಿದೆ. ಒಂದು ವೇಳೆ ಅನುಮಾನ ಬಂದರೆ ಅಲ್ಲಿಯೇ ತಡೆ ಹಿಡಿದು ಪರಿಶೀಲನೆ ಕೂಡಾ ಮಾಡಲಾಗುತ್ತದೆ.

ಇಷ್ಟು ದಿನ ಆ್ಯಂಬುಲೆನ್ಸ್ ಸೈರನ್​ ಇದೆ ಅಂತಾ ಸುಮ್ ಸುಮ್ನೇ ಹೋಗುತ್ತಿದ್ದ ಡ್ರೈವರ್​'ಗಳಿಗೂ ಈ ಹೊಸ ನಿಯಮದಿಂದ ಬ್ರೇಕ್ ಬೀಳಲಿದೆ.