ವಿದ್ಯುತ್ ಕದ್ದವರಿಗೆ ಬೆಸ್ಕಾಂ ಶಾಕ್: 2.59 ಕೋಟಿ ದಂಡ
ವಿದ್ಯುತ್ ಕದ್ದವರಿಗೆ ಬೆಸ್ಕಾಂ 2.59 ಕೋಟಿ ದಂಡ ವಿಧಿಸಿದೆ. 4 ತಿಂಗಳಿನಲ್ಲಿ ಜಾಗೃತ ದಳದಿಂದ 11 ಸಾವಿರ ಕೇಸ್.
ಬೆಂಗಳೂರು: ವಿದ್ಯುತ್ ಕಳ್ಳತನ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಬೆಸ್ಕಾಂ ಜಾಗೃತ ದಳವು ಕಳೆದ 4 ತಿಂಗಳಲ್ಲಿ 10,908 ಕಡೆ ತಪಾಸಣೆ ನಡೆಸಿ ಅನಧಿಕೃತ ಸಂಪರ್ಕ ಪಡೆದ ಗ್ರಾಹಕರಿಗೆ .2.59 ಕೋಟಿ ದಂಡ ವಿಧಿಸಿದೆ.
ಸೆಪ್ಟೆಂಬರ್‌ನಿಂದ ಡಿಸೆಂಬರ್ ತಿಂಗಳವರೆಗೆ 1,781 ಪ್ರಕರಣಗಳನ್ನು ಜಾಗೃತ ದಳ ದಾಖಲಿಸಿಕೊಂಡಿದ್ದು 1,721 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಅದೇ ರೀತಿ ವಿದ್ಯುತ್ ಬಿಲ್ ಬಾಕಿ ವಸೂಲಿಗೂ ಕ್ರಮ ಕೈಗೊಂಡಿದ್ದು, ಕಳೆದ ಮೂರು ತಿಂಗಳಲ್ಲಿ ಬಾಕಿ ಇದ್ದ .1,417 ಕೋಟಿಗಳಲ್ಲಿ .358 ಕೋಟಿ ಬಿಲ್ ಸಂಗ್ರಹಿಸಲಾಗಿದೆ. ಬಿಲ್ ಪಾವತಿಸದ 23 ಲಕ್ಷ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.
ಬೆಸ್ಕಾಂನ ಮಾಪಕ ವಿಭಾಗದ ಸಿಬ್ಬಂದಿ ಸೆಪ್ಟೆಂಬರ್‌ನಿಂದ ನವೆಂಬರ್ ತಿಂಗಳವರೆಗೆ 2373 ವಿದ್ಯುತ್ ಮೀಟರ್‌ಗಳ ಪರಿಶೀಲನೆ ಮಾಡಿದ್ದು, ವಿದ್ಯುತ್ ಕಳ್ಳತನ ಹೊರತುಪಡಿಸಿದ ವಿವಿಧ ಲೋಪಗಳಿಗೆ .7 ಕೋಟಿ ದಂಡ ವಿಧಿಸಿ .5 ಕೋಟಿ ಸಂಗ್ರಹಿಸಲಾಗಿದೆ. ಇನ್ನು 4,784 ವಿದ್ಯುತ್ ದುರುಪಯೋಗ ಪ್ರಕರಣಗಳಲ್ಲಿ .6.5 ಕೋಟಿ ದಂಡ ವಿಧಿಸಿ .3.9 ಕೋಟಿ ವಸೂಲಿ ಮಾಡಲಾಗಿದೆ.
Bengaluru: ಸೆಪ್ಟೆಂಬರೊಳಗೆ ಎಲ್ಲಾ ಟ್ರಾನ್ಸ್‌ಫಾರ್ಮರ್ ಫುಟ್‌ಪಾತ್‌ನಿಂದ ಸ್ಥಳಾಂತರ, ಹೈಕೋರ್ಟ್‌ಗೆ ಬೆಸ್ಕಾಂ ಮಾಹಿತಿ
ಬೆಸ್ಕಾಂ ಕಾರ್ಯವ್ಯಾಪ್ತಿಯ ರಾಜಾಜಿ ನಗರ, ಜಯ ನಗರ, ಇಂದಿರಾ ನಗರ, ಮಲ್ಲೇಶ್ವರ, ಹೊಸಕೋಟೆ, ರಾಮ ನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಹಾಗೂ ಚಿತ್ರದುರ್ಗ ಸೇರಿದಂತೆ ಒಟ್ಟು 11 ಜಾಗೃತ ದಳ ಠಾಣೆಗಳಲ್ಲಿ 11 ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ಜಾಗೃತದಳ ತಪಾಸಣೆ ಅಭಿಯಾನ ಹಮ್ಮಿಕೊಂಡಿತ್ತು.
ಟ್ರಾನ್ಸ್‌ಫಾರ್ಮರ್ ತೆರವು:
ಬೆಂಗಳೂರಿನಲ್ಲಿ ಸೆಪ್ಟೆಂಬರ್ 2022 ರಿಂದ ಇಲ್ಲಿಯವರೆಗೆ 1,554 ಟ್ರಾನ್ಸ್‌ಫಾರ್ಮರ್‌ಗಳನ್ನು ಫುಟ್‌ಪಾತ್‌ಗಳಿಂದ ಸ್ಥಳಾಂತರಿಸಲಾಗಿದೆ. ಉಳಿದ 1,033 ಟ್ರಾನ್ಸ್‌ಫಾರ್ಮರ್‌ಗಳನ್ನು ಫುಟ್‌ಪಾತ್‌ನಿಂದ ಸ್ಥಳಾಂತರಿಸುವುದನ್ನು ಈ ವರ್ಷದ ಸೆಪ್ಟೆಂಬರ್‌ನೊಳಗೆ ಪೂರ್ಣಗೊಳಿಸುವುದಾಗಿ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಕರ್ನಾಟಕ ಹೈಕೋರ್ಟ್‌ಗೆ ಇತ್ತೀಚೆಗೆ ತಿಳಿಸಿದೆ.
ಗುರುತಿಸಲಾದ 2,587 ಟ್ರಾನ್ಸ್‌ಫಾರ್ಮರ್‌ಗಳಲ್ಲಿ, ಫುಟ್‌ಪಾತ್‌ಗಳಿಂದ 1,554 ಹೊಸ ಸ್ಪನ್ ಪೋಲ್ ರಚನೆಗಳನ್ನು ಈಗಾಗಲೇ ಬೆರೆಡೆ ಶಿಫ್ಟ್ ಮಾಡಲಾಗಿದೆ ಅಥವಾ ಬದಲಾಯಿಸಲಾಗಿದೆ ಎಂದು ಬೆಸ್ಕಾಂ ತಿಳಿಸಿದೆ. ವಿಂಗ್ ಕಮಾಂಡರ್ ಜಿ ಬಿ ಅತ್ರಿ (ನಿವೃತ್ತ) ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರ ವಿಭಾಗೀಯ ಪೀಠದ ಮುಂದೆ ಬೆಸ್ಕಾಂ ಈ ಸಲ್ಲಿಕೆ ಮಾಡಿದೆ.